Category: ಸ್ಥಳೀಯ ಸುದ್ದಿಗಳು

ಎಂ. ಕೆ. ವಾಸುದೇವ್ ನಿಧನಕ್ಕೆ ರವೀಂದ್ರ ಶೆಟ್ಟಿ ಬಜಗೋಳಿ ಸಂತಾಪ

ಕಾರ್ಕಳ: ಶಾಸಕ ವಿ. ಸುನಿಲ್ ಕುಮಾರ್ ಅವರ ತಂದೆ ಎಂ. ಕೆ. ವಾಸುದೇವ್ ರವರು ಅನಾರೋಗ್ಯದಿಂದ ನಿಧನರಾಗಿದ್ದು,ಅವರ ಅಗಲಿಕೆಗೆ ಕರ್ನಾಟಕ ರಾಜ್ಯ ಫೆಡರೇಷನ್ ಆಫ್ ಕರ್ನಾಟಕ, ಕ್ವಾರಿ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ (ರಿ.) ಬೆಂಗಳೂರು ಇದರ ಅಧ್ಯಕ್ಷರಾದ ಡಾ. ರವೀಂದ್ರ…

ಶಾಸಕ ಸುನಿಲ್ ಕುಮಾರ್ ತಂದೆ ಎಂ.ಕೆ ವಾಸುದೇವ ನಿಧನ : ವಿಪಕ್ಷ ನಾಯಕ ಆರ್. ಅಶೋಕ್, ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೇರಿ ಹಲವು ಗಣ್ಯರಿಂದ ಅಂತಿಮ ದರ್ಶನ

ಕಾರ್ಕಳ: ಆರೆಸ್ಸೆಸ್ ಹಿರಿಯ ಮುಖಂಡ, ಶಿಕ್ಷಕರು ಹಾಗೂ ಮಾಜಿ ಸಚಿವ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರ ತಂದೆ ಎಂ.ಕೆ ವಾಸುದೇವ ಅವರು ಇಂದು ಮುಂಜಾನೆ ಉಡುಪಿಯ ಟಿಎಂಎ ಪೈ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಬಿಜೆಪಿ ಹಿರಿಯ ಮುಖಂಡ ಹಾಗೂ ವಿಪಕ್ಷ ನಾಯಕ…

ಸಿಎಂ ಸಿದ್ಧರಾಮಯ್ಯರಿಂದ ಅವಮಾನಕ್ಕೊಳಗಾಗಿ ಸ್ವಯಂ ನಿವೃತ್ತಿಗೆ ಮುಂದಾಗಿದ್ದ ನಾರಾಯಣ ಭರಮನಿಗೆ ಮುಂಭಡ್ತಿ: ಡಿಸಿಪಿಯಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ

ಬೆಳಗಾವಿ: ಕಾಂಗ್ರೆಸ್ ಪಕ್ಷದ ಸಾಧನಾ ಸಮಾವೇಶದಲ್ಲಿ ಸಿಎಂ ಸಿದ್ಧರಾಮಯ್ಯರಿಂದ ವೇದಿಕೆಯಲ್ಲೇ ಅವಮಾನಕ್ಕೊಳಗಾಗಿದ್ದ ಧಾರವಾಡ ಹೆಚ್ಚುವರಿ ಎಎಸ್ಪಿಯಾಗಿದ್ದ ನಾರಾಯಣ ಭರಮನಿ ಅವರಿಗೆ ರಾಜ್ಯ ಸರ್ಕಾರ ಮುಂಭಡ್ತಿ ನೀಡಿ ಅವರ ಸ್ವಯಂ ನಿವೃತ್ತಿ ಪತ್ರವನ್ನು ತಿರಸ್ಕರಿಸಿದೆ. ಸಿಎಂ ಸಿದ್ಧರಾಮಯ್ಯನವರು ನಾರಾಯಣ ಭರಮನಿಗೆ ಕಪಾಳಮೋಕ್ಷಕ್ಕೆ ಕೈ…

ಕಾರ್ಕಳ ಪಂಚಾಯತ್ ರಾಜ್ ಒಕ್ಕೂಟದ ಖಂಡನಾ ಸಭೆ: ಜಟಿಲಗೊಂಡ 9/11ಎ ನಿವೇಶನ ಸಮಸ್ಯೆ: ಬಡವರ ಮನೆ ನಿರ್ಮಾಣದ ಕನಸಿಗೆ ಕೊಳ್ಳಿಯಿಟ್ಟ ಸರ್ಕಾರದ ವಿರುದ್ದ ಆಕ್ರೋಶ

ಕಾರ್ಕಳ: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸಿಸಲು ಸ್ವಂತ ಮನೆ ಕಟ್ಟುವವರ ಕನಸಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಕೊಳ್ಳಿಯಿಟ್ಟಿದೆ. ಪಂಚಾಯತ್ ಮಟ್ಟದಲ್ಲಿ ಆಗಬೇಕಿದ್ದ 9/11ಎ ನಿವೇಶನದ ಖಾತಾ ಪಡೆಯಲು ದೂರದ ಕಾಪು ಪ್ರಾಧಿಕಾರಕ್ಕೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದ್ದು,ಸರ್ಕಾರ ಈ ಕ್ಲಿಷ್ಟ ನಿಯಮಾವಳಿ ಸರಳೀಕರಣ…

ಭಾರೀ ಮಳೆ ಹಿನ್ನೆಲೆ ನಾಳೆ (ಜು.17ರಂದು) ಉಡುಪಿ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ

ಉಡುಪಿ ಜು. 16: ಕರಾವಳಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಸ್ವರೂಪ. ಟಿ.ಕೆ ಆದೇಶಿಸಿದ್ದಾರೆ. ಅಲ್ಲದೇ ಮೀನುಗಾರರಿಗೆ ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಮಿಯ್ಯಾರು : ಬೈಕಿಗೆ ರಿಕ್ಷಾ ಢಿಕ್ಕಿಯಾಗಿ ಸವಾರ ಆಸ್ಪತ್ರೆಗೆ ದಾಖಲು

ಕಾರ್ಕಳ: ಬೈಕಿಗೆ ರಿಕ್ಷಾ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಡಾರಿನ ಸ್ವಸ್ತಿಕ್‌ (22) ಜುಲೈ 14 ರಂದು ಬೈಕಿನಲ್ಲಿ ಬಜಗೋಳಿ ಕಡೆಯಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದಾಗ ಮಿಯ್ಯಾರು ಗ್ರಾಮದ ಕುಂಟಿಬೈಲ್‌ ಜಂಕ್ಷನ್‌ ಬಳಿ ಬಜಗೋಳಿ ಕಡೆಯಿಂದ ಕಾರ್ಕಳ…

ಜುಲೈ 20 ರಂದು ಕಾಂತಾವರ ಯಕ್ಷದೇಗುಲದಲ್ಲಿ  23 ನೇ ವರ್ಷದ ಯಕ್ಷೋಲ್ಲಾಸ 2025

ಕಾರ್ಕಳ:: ಯಕ್ಷದೇಗುಲ ಕಾಂತಾವರದ 23 ನೇ ವರ್ಷದ ಕಾರ್ಯಕ್ರಮದ ಹನ್ನೆರಡು ತಾಸಿನ ಆಟ, ಕೂಟ, ಬಯಲಾಟ “ಯಕ್ಷೋಲ್ಲಾಸ 2025″ಕಾರ್ಯಕ್ರಮವು ಕಾಂತಾವರದಲ್ಲಿ ಕ್ಷೇತ್ರದಲ್ಲಿ ಜುಲೈ 20 ರಂದು ಬೆಳಿಗ್ಯೆ 10.00 ರಿಂದ ನಡೆಯಲಿದೆ. ಗ್ರಾಮ ಪಂ. ಅದ್ಯಕ್ಷ ರಾಜೇಶ್ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಬಾರಾಡಿಬೀಡು…

ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸುಳ್ಳು, ಅಪಪ್ರಚಾರ ತಡೆಗಟ್ಟಲು ಕಾರ್ಕಳ ಬಿಜೆಪಿಯಿಂದ ಎಎಸ್ಪಿ ಹಾಗೂ ತಹಸೀಲ್ದಾರ್ ಗೆ ದೂರು

ಕಾರ್ಕಳ: ಬೈಲೂರಿನ ಉಮಿಕ್ಕಲ್ ಬೆಟ್ಟದಲ್ಲಿ ಸ್ಥಾಪಿಸಲಾಗಿರುವ ಪರಶುರಾಮ ಪ್ರತಿಮೆ ವಿಚಾರದಲ್ಲಿ ಕಾರ್ಕಳ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸುಳ್ಳು ಹಾಗೂ ಅಪಪ್ರಚಾರ ನಡೆಸಿ ವಿನಾ ಕಾರಣ ಗೊಂದಲ ಸೃಷ್ಟಿಸುತ್ತಿದ್ದು ಸುಳ್ಳು ಹರಡುವವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಕಾರ್ಕಳ ಬಿಜೆಪಿ ನಾಯಕರು ಬುಧವಾರ…

ದೇವಸ್ಥಾನದ ಆಸ್ತಿ ಕಬಳಿಕೆ ಆರೋಪ ಸತ್ಯಕ್ಕೆ ದೂರ: ಅಜೆಕಾರು ವ್ಯವಸ್ಥಾಪನ ಸಮಿತಿಯ ಸದಸ್ಯ ಪ್ರಕಾಶ ಶೆಟ್ಟಿ ಸ್ಪಷ್ಟನೆ

ಕಾರ್ಕಳ: ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ದೇವಸ್ಥಾನದ ಜಾಗವನ್ನು ಕಬಳಿಸಿದ್ದಾರೆ ಎನ್ನುವ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಸಮಿತಿ ಸದಸ್ಯ ಪ್ರಕಾಶ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. ಕಳೆದ 50 ವರ್ಷಗಳಿಂದ ಶಿವರಾಮ ಶೆಟ್ಟಿಯವರು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ದೇವಳದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ.…

ಹಿರ್ಗಾನ: ಹೆಂಡತಿಗೆ ಕಡಿದು ಕೊಲೆಗೆ ಯತ್ನಿಸಿ ಗಂಡ ನೇಣು ಬಿಗಿದು ಆತ್ಮಹತ್ಯೆ

ಕಾರ್ಕಳ: ಗಂಡ ಹೆಂಡತಿಯರ ನಡುವೆ ಕ್ಷುಲ್ಲಕ ಕಾರಣದಿಂದ ನಡೆದ ಜಗಳವು ಗಂಡನ ಸಾವಿನಲ್ಲಿ ಅಂತ್ಯ ಕಂಡ ದಾರುಣ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಚಿಕ್ಕಲ್’ಬೆಟ್ಟು ಎಂಬಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಚಿಕ್ಕಲ್’ಬೆಟ್ಟು ನಿವಾಸಿ ಗೋಪಾಲಕೃಷ್ಣ ದೇವಾಡಿಗ(61) ಎಂಬವರು ತನ್ನ ಪತ್ನಿ…