Category: ದೇಶ

ಚುನಾವಣಾ ಪ್ರಚಾರದ ವೇಳೆ ಭೀಕರ ಅಪಘಾತ: ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್‌ಗೆ ಗಾಯ: ಬೈಕ್ ಸವಾರ ಸಾವು!

ಚಿಂದ್ವಾರ: ಮಧ್ಯಪ್ರದೇಶ ವಿಧಾನ ಸಭೆ ಚುನಾವಣಾ ಪ್ರಚಾರದ ವೇಳೆ ಭೀಕರ ಅಪಘಾತದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ಈ ಭೀಕರ ಅಪಘಾದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡು ಮತ್ತೊರ್ವ ಬೈಕ್ ಸವಾರ ಮೃತಪಟ್ಟಿದ್ದಾನೆ. ಬಿಜೆಪಿಯ ಪ್ರಮುಖ ನಾಯಕ, ಕೇಂದ್ರ…

ಇಸ್ರೇಲ್‌ ಕಟ್ಟಿಹಾಕಲು ಸುರಂಗದಲ್ಲೇ ಹೊಂಚು ಹಾಕಿದ ಉಗ್ರರು: ಸುರಂಗಗಳಲ್ಲಿ ಶಸ್ತ್ರಾಸ್ತ್ರ, ಆಹಾರ ಸಂಗ್ರಹ

ನವದೆಹಲಿ: ಗಾಜಾ ಪಟ್ಟಿಯ ಮೇಲೆ ಭೂದಾಳಿ ಆರಂಭಿಸಿರುವ ಇಸ್ರೇಲ್‌ ಸೇನಾಪಡೆಯನ್ನು ಕಟ್ಟಿಹಾಕಲು ಹಮಾಸ್‌ ಉಗ್ರರು ಗಾಜಾಪಟ್ಟಿಯಲ್ಲಿ ನಿರ್ಮಾಣ ಮಾಡಲಾಗಿರುವ ಸುರಂಗ ಜಾಲದಲ್ಲಿ ಅಡಗಿ ದಾಳಿ ಮಾಡಲು ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವೆ ದಶಕಗಳಿಂದ ಸಂಘರ್ಷ…

ಗರೀಬ್ ಕಲ್ಯಾಣ್ ಯೋಜನೆ ಮುಂದಿನ 5 ವರ್ಷ ಅವಧಿಗೆ ವಿಸ್ತರಣೆ: ಪ್ರಧಾನಿ ನರೇಂದ್ರ ಮೋದಿ ಘೋಷಣೆ

ಚತ್ತೀಸ್‌ಘಡ: ಕೋವಿಡ್ ಸಂದರ್ಭದಲ್ಲಿ ಆರಂಭಗೊAಡ ಉಚಿತ ಪಡಿತರ ಕಾರ್ಯಕ್ರಮ ಗರೀಬ್ ಕಲ್ಯಾಣ್ ಯೋಜನೆಯನ್ನು ಮುಂದಿನ 5 ವರ್ಷಕ್ಕೆ ವಿಸ್ತರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. 2028ರ ವರೆಗೆ ಬರೋಬ್ಬರಿ 80 ಕೋಟಿ ಭಾರತೀಯರಿಗೆ ಪ್ರತಿ ತಿಂಗಳು 5 ಕೆಜಿ ಗೋಧಿ ಅಥವಾ…

ಕೊಚ್ಚಿ: ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್ ಪತನ: ನೌಕಾಪಡೆ ಅಧಿಕಾರಿ ಸಾವು

ಕೇರಳ: ಕೇರಳದ ಕೊಚ್ಚಿಯಲ್ಲಿ ಭಾರತೀಯ ನೌಕಾಪಡೆಯ ಚೇತಕ್ ಹೆಲಿಕಾಪ್ಟರ್ ಪತನಗೊಂಡು ನೌಕಾಪಡೆಯ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ. ಇಂದು (ಶನಿವಾರ) ಮಧ್ಯಾಹ್ನ 2.30ರ ಸುಮಾರಿಗೆ ನಿತ್ಯದ ತರಬೇತಿ ವೇಳೆ ಹೆಲಿಕಾಪ್ಟರ್ ಪತನವಾಗಿದ್ದು, ಇದೇ ವೇಳೆ ರನ್‌ವೇಯಲ್ಲಿದ್ದ ನೌಕಾಪಡೆಯ ಅಧಿಕಾರಿ ಹೆಲಿಕಾಪ್ಟರ್‌ನ ರೋಟರ್ ಬ್ಲೇಡ್‌ಗಳಿಗೆ ಸಿಲುಕಿ…

ನೇಪಾಳದಲ್ಲಿ ಪ್ರಬಲ ಭೂಕಂಪ: ಕನಿಷ್ಠ 129 ಜನ ಸಾವು, ನೂರಾರು ಜನರಿಗೆ ಗಾಯ: ದೆಹಲಿಯಲ್ಲೂ ಕಂಪಿಸಿದ ಭೂಮಿ

ನವದೆಹಲಿ : ನೇಪಾಳದಲ್ಲಿ ಶುಕ್ರವಾರ ತಡರಾತ್ರಿ ಪ್ರಬಲ ಭೂಕಂಪವಾಗಿದ್ದು, ಕನಿಷ್ಠ 129 ಜನ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, 140ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಭೂಕಂಪದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 6.4 ತೀವ್ರತೆ ದಾಖಲಾಗಿದೆ. ಇನ್ನು, ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ…

ತುಲಾಭಾರದ ವೇಳೆ ಕುಸಿದು ಬಿದ್ದ ತಕ್ಕಡಿ: ಪೇಜಾವರ ಶ್ರೀಗಳಿಗೆ ಗಾಯ

ನವದೆಹಲಿ : ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ ತುಲಾಭಾರ ಮಾಡಲಾಗುತ್ತಿದ್ದ ವೇಳೆ ತಕ್ಕಡಿಯ ಹಗ್ಗ ಕಳಚಿ ಬಿದ್ದಿದೆ. ತಕ್ಕಡಿಯ ಸರಳು ಪೇಜಾವರ ಶ್ರೀಗಳ ತಲೆಯ ಮೇಲೆ ಕಳಚಿ ಬಿದ್ದ ಪರಿಣಾಮ ತಲೆಗೆ ಚಿಕ್ಕ ಗಾಯವಾಗಿದ್ದು, ಪೇಜಾವರ ಶ್ರೀಗಳು ಅನಾಹುತದಿಂದ…

ಕಾಂಗ್ರೆಸ್ ಜಾತಿ ಗಣತಿ ಅಸ್ತ್ರಕ್ಕೆ ಪ್ರತಿಯಾಗಿ ಬಿಜೆಪಿಯಿಂದ ಒಬಿಸಿ ಪ್ರತ್ಯಾಸ್ತ್ರ: ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಮಹತ್ವದ ಸಭೆ

ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿನ ಜಾತಿ ಸಮೀಕ್ಷೆ ಅಸ್ತ್ರಕ್ಕೆ ತಿರುಗೇಟು ನೀಡಲು ಬಿಜೆಪಿ ಚಿಂತನೆ ನಡೆಸಿದ್ದು, ಒಬಿಸಿ ಅಸ್ತ್ರವನ್ನು ಬಳಸುವ ಕುರಿತು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿದೆ. ಬಿಜೆಪಿಯು ಈ ನಿಟ್ಟಿನಲ್ಲಿ ದೇಶದ ಎಲ್ಲಾ ರಾಜ್ಯಗಳ ಇತರ ಹಿಂದುಳಿದ…

ವಿಶ್ವಕಪ್ ಕ್ರಿಕೆಟ್ ನಲ್ಲಿ ಲಂಕಾದಹನ! ಸಿಂಹಳೀಯರ ವಿರುದ್ಧ 303 ರನ್ ಗಳ ಬೃಹತ್ ಗೆಲುವಿನೊಂದಿಗೆ ಸೆಮೀಸ್ ಪ್ರವೇಶಿಸಿದ ಭಾರತ

ಮುಂಬಯಿ: ಮುಂಬಯಿನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧ 303 ರನ್ ಗಳ ಭರ್ಜರಿ ಜಯ ಗಳಿಸಿದೆ. ಈ ಬೃಹತ್ ಜಯದ ಮೂಲಕ ಟೂರ್ನಿಯಲ್ಲಿ ಭಾರತ ತಂಡ ಸೆಮಿಫೈನಲ್ಸ್ ಪ್ರವೇಶಿಸಿದೆ. ಟಾಸ್ ಗೆದ್ದು ನಂತರ…

ಕಲಮಶ್ಶೇರಿ ಬಾಂಬ್‌ ಸ್ಫೋಟ ಪ್ರಕರಣ: 2500 ಜನರಿದ್ದ ಕ್ರೈಸ್ತ ಭವನವನ್ನೇ ಸ್ಫೋಟಿಸಲು ಸಂಚು

ಎರ್ನಾಕುಲಂ: ಮೂವರನ್ನು ಬಲಿಪಡೆದ ಭಾನುವಾರದ ಕಲಮಶ್ಶೇರಿ ಬಾಂಬ್ ಸ್ಫೋಟದ ಹಿಂದೆ ದೊಡ್ಡ ಸಂಚೇ ರೂಪಿಸಲಾಗಿತ್ತು ಎನ್ನುವ ಸ್ಫೋಟಕ ಮಾಹಿತಿ ಬಯಲಾಗಿದೆ. ಸಾವಿರಾರು ಜನರು ಸೇರಿದ್ದ ದೊಡ್ಡ ಸಮುದಾಯ ಭವನವನ್ನೇ ಸ್ಫೋಟಿಸುವ ಬೃಹತ್ ಯೋಜನೆಯನ್ನು ದಾಳಿಕೋರ ಡೊಮಿನಿಕ್ ಮಾರ್ಟಿನ್ ಹಾಕಿಕೊಂಡಿದ್ದ ಎಂಬ ವಿಷಯ…

ಕಾವೇರಿ ನದಿನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಆಘಾತ! ತಮಿಳುನಾಡಿಗೆ ಮುಂದಿನ 15 ದಿನ ಕಾವೇರಿ ನೀರು ಹರಿಸಲು ಸೂಚನೆ

ನವದೆಹಲಿ: ರಾಜ್ಯದಲ್ಲಿ ಭೀಕರ ಬರಗಾಲ ಕಾಡುತ್ತಿದ್ದು ಈಗಾಗಲೇ ಕಾವೇರಿ ಒಡಲಲ್ಲಿರುವ ನೀರು ಖಾಲಿಯಾಗುವ ಸ್ಥಿತಿ ತಲುಪಿದೆ. ಹೀಗಾಗಿ ಕರ್ನಾಟಕದ ಸಧ್ಯದ ಪರಿಸ್ಥಿತಿ ತೀರಾ ಶೋಚನೀಯವಾಗಿದ್ದರೂ ಮುಂದಿನ 15 ದಿನಗಳ ಕಾಲ ನಿತ್ಯ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸೂಚನೆ ನೀಡಲಾಗಿದೆ. ಇಂದು…