ಹೆಬ್ರಿ : ಬಡ ಕುಟುಂಬದ ಮಹಿಳೆ ಮುನಿಯಾಲು ಕಾಡುಹೊಳೆ ನಿವಾಸಿ ಶಕುಂತಳ ಪ್ರಭು ಎಂಬವರಿಗೆ, ಗುಡ್ಡೆಅಂಗಡಿ ಶ್ರೀಮತಿ ಶಾರದಮ್ಮ ಮತ್ತು ಶ್ರೀಧರ ಭಟ್ ಇವರ ಸ್ಮರಣಾರ್ಥ, ಶ್ರೀ ಜಂಗಮೇಶ್ವರ ಮಠದ ಪ್ರಧಾನ ಅರ್ಚಕ ಕೊಡುಗೈದಾನಿ ವಿದ್ವಾನ್ ರಾಘವೇಂದ್ರ ಭಟ್ ಮತ್ತು ಸೌಮ್ಯ ದಂಪತಿಗಳು ಕೊಡಮಾಡಿದ ಸುಮಾರು 25 ಸಾವಿರ ರೂಪಾಯಿ ಮೌಲ್ಯದ ನೀರಿನ ಟಾಂಕಿ, ಪೈಪ್ ಲೈನ್ ಸೇರಿದಂತೆ ನಳ್ಳಿ ನೀರಿನ ಸೌಲಭ್ಯವನ್ನು ಸೋಮವಾರ ಒದಗಿಸಲಾಯಿತು.
ತಾವೆಲ್ಲರೂ ತನ್ನ ಸಂಪಾದನೆಯ ಅಲ್ಪ ಮೊತ್ತವನ್ನಾದರು ಸಮಾಜದ ಏಳಿಗೆಯ ಹಿತದೃಷ್ಟಿಯಲ್ಲಿ ವಿನಿಯೋಗಿಸಿದಲ್ಲಿ ಅಥವಾ ಗ್ರಾಮ ಮಟ್ಟದಲ್ಲಿ ಬಡತನದಲ್ಲಿರುವ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದಲ್ಲಿ, ನಮ್ಮ ಹಳ್ಳಿಯು ರಾಮರಾಜ್ಯ ಆಗುವುದರಲ್ಲಿ ಸಂಶಯವಿಲ್ಲ ಎಂದು ಕೊಡುಗೆ ನೀಡಿ ಮಾತನಾಡಿದರು.
ಕಾಡುಹೊಳೆ ಶ್ರೀ ಜಂಗಮೇಶ್ವರ ಮಠದ ಆಡಳಿತ ಮೊಕ್ತೇಸರ ಚಿರಂಜೀತು ಅಜಿಲ, ಸಮಾಜ ಸೇವಕ ಉದ್ಯಮಿ ಗೋಪಿನಾಥ ಭಟ್, ಹಿಂದೂ ಹೆಲ್ಪ್ ಲೈನ್ ಅಧ್ಯಕ್ಷ ರಾಮಚಂದ್ರ ನಾಯಕ್, ಗುತ್ತಿಗೆದಾರ ಹರೀಶ್ ಆಂಚನ್, ಸ್ಥಳೀಯರಾದ ರವೀಂದ್ರ ಪ್ರಭು ಮೊದಲಾದವರು ಉಪಸ್ಥಿತರಿದ್ದರು.