ಕಾರ್ಕಳ : ವ್ಯಕ್ತಿಯೊಬ್ಬರು ಇನ್ನೋರ್ವನಿಂದ ಕೈಸಾಲ ಪಡೆದುಕೊಂಡಿದ್ದು ಸಾಲ ನೀಡಿದ ವ್ಯಕ್ತಿ ಹಣ ಹಿಂತಿರುಗಿಸುವಂತೆ ದಮ್ಕಿ ಹಾಕಿ ಜೀವ ಬೆದರಿಕೆಯೊಡ್ಡಿರುವ ಘಟನೆ ನಡೆದಿದೆ.
ಸಚಿನ್ ದುರ್ಗಾ ಗ್ರಾಮ, ಕಾರ್ಕಳ ಇವರು ಸಾಲ ಪಡದುಕೊಂಡವರು. ಅವರು ರಮೇಶ್ ಎಂಬಾತನಿಂದ 6,000/- ರೂ. ಹಣ ಸಾಲ ಪಡೆದಿದ್ದರು.
ರಮೇಶ್ ಪ್ರತಿ ದಿನ ಹಣವನ್ನು ಹಿಂದಿರುಗಿಸುವಂತೆ ಧಮ್ಕಿ ಹಾಕುತ್ತಿದ್ದು, ಸೆ.17 ರಂದು ಸಚಿನ್ ಕಾರ್ಕಳ ಕಸಬಾ ಗ್ರಾಮದ ಕಾರ್ಕಳ ಬಸ್ ಸ್ಟ್ಯಾಂಡ್ ಬಳಿ ಇರುವ ಅಟೋರಿಕ್ಷಾ ಪಾರ್ಕ್‌ನಲ್ಲಿ ನಿಂತುಕೊಂಡಿರುವಾಗ, ಅಟೋರಿಕ್ಷಾದಲ್ಲಿ ಬಂದ ರಮೇಶ್ ಅವಾಚ್ಯ ಶಬ್ದಗಳಿಂದ ಬೈದು ಮುಖ ಹಾಗೂ ತಲೆಗೆ ಕೈಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ಸಚಿನ್ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
in