ಹೆಬ್ರಿ: ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಸಿಬ್ಬಂದಿಯಿಂದ ಹಣ ದುರ್ಬಳಕೆ ಆಗಿದೆ ಎಂದು ಆರೋಪಿಸಿ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಸಿಬ್ಬಂದಿಯಾದ ಶಂಕರ ರವರು ಸದ್ರಿ ಸಂಘದ 88150/- ರೂ. ಹಣವನ್ನು ಸುಂದರ ಕುಲಾಲ ಎಂಬವರಿಗೆ ಕೂಲಿ ಬಾಬ್ತು ನೀಡಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿ ಹಣವನ್ನು ದುರ್ಬಳಕೆ ಮಾಡಿ ತಾನು ಕೆಲಸ ಮಾಡುವ ಸಂಘಕ್ಕೆ ಮೋಸ ಮತ್ತು ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಸಂಘದ ಮ್ಯಾನೇಜರ್ ಶೀನ ನಾಯ್ಕ್ ಅವರು ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.