ಬಜಗೋಳಿ: 18ನೇ ವರ್ಷದ ವರಮಹಾಲಕ್ಷ್ಮೀ ಪೂಜೆ
ಕಾರ್ಕಳ:ಬಜಗೋಳಿಯ ಮುಡ್ರಾಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ 18ನೇ ವರ್ಷದ ಸಾರ್ವಜನಿಕ ವರಮಹಾಲಕ್ಷ್ಮೀ ಪೂಜೆಯು ಉದ್ಯಮಿ ಬಜಗೋಳಿ ರವೀಂದ್ರ ಶೆಟ್ಟಿ ನೇತೃತ್ವದಲ್ಲಿ ನಡೆಯಿತು. ಸುಮಾರು 350 ಜನ ಪೂಜೆಗೆ ಭಾಗವಹಿಸಿದ್ದರು. `
ಎರ್ಲಪಾಡಿ : ಸ್ಕೂಟರ್ ಮರಕ್ಕೆ ಡಿಕ್ಕಿಯಾಗಿ ಸವಾರನಿಗೆ ಗಂಭೀರ ಗಾಯ
ಕಾರ್ಕಳ: ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಯುವಕನ ಸ್ಕೂಟರ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಸುಧೀರ ಎಂಬಾತ ಆಗಸ್ಟ್.15ರಂದು ಮುಂಜಾನೆ ಮಣಿಪಾಲದಲ್ಲಿ ಕೆಲಸ ಮುಗಿಸಿ ಎರ್ಲಪಾಡಿ ಗ್ರಾಮದ ಜಾರ್ಕಳ ಅನ್ನಪೂರ್ಣೇಶ್ವರಿ ಬಾರ್ ಬಳಿ ಬರುತ್ತಿದ್ದಾಗ…
ಪಡುಕುಡೂರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಅಧಿಕಾರಿ ಪುತ್ಥಳಿ ಅನಾವರಣ- ಎಂ.ಡಿ ಅಧಿಕಾರಿ ದೇಶಪ್ರೇಮ, ಕರ್ತವ್ಯನಿಷ್ಠೆಯ ಅದ್ಭುತ ಶಕ್ತಿ : ಡಾ. ಎಂ.ವೀರಪ್ಪ ಮೊಯಿಲಿ
ಹೆಬ್ರಿ: ದೇಶ ಪ್ರೇಮ, ಧೈರ್ಯ, ಸಾಹಸ, ಕರ್ತವ್ಯ ನಿಷ್ಠೆಗೆ ಪಡುಕುಡೂರು ಬೀಡು ಎಂ.ಡಿ. ಅಧಿಕಾರಿ ಸಾಕ್ಷಿ. ಅವರು ದೇಹಕ್ಕೆ ಬೆಲೆ ಕೊಡದೇ ಜನಕ್ಕೆ ಬೆಲೆ ಕೊಟ್ಟು ದೊಡ್ಡವರಾದರು. ಒಕ್ಕಲಿನ ಸರ್ವರಿಗೂ ಭೂಮಿ ಬಿಟ್ಟುಕೊಟ್ಟು ಸ್ವಾತಂತ್ರ್ಯ ಎಲ್ಲರಿಗೂ ಸಿಗಬೇಕು. ಪಡುಕುಡೂರು ತ್ಯಾಗದ ಭೂಮಿ,…
ಕಾರ್ಕಳ, ಹೆಬ್ರಿ ತಾಲೂಕಿನಲ್ಲಿ ಹಲವೆಡೆ ಸಡಗರ ಸಂಭ್ರಮದ ವರಮಹಾಲಕ್ಷ್ಮೀ ಪೂಜೆ
ಮುನಿಯಾಲು ಜಿ. ಎಸ್. ಬಿ. ಮಹಿಳಾ ಮಂಡಳಿ ವತಿಯಿಂದ 34 ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ವ್ರತ ಹೆಬ್ರಿ: ಮುನಿಯಾಲು ಜಿ. ಎಸ್. ಬಿ. ಮಹಿಳಾ ಮಂಡಳಿ ವತಿಯಿಂದ 34 ನೇ ವರ್ಷದ ವರಮಹಾಲಕ್ಷ್ಮಿ ವ್ರತವು ಮುನಿಯಾಲು ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ…
ಪರಶುರಾಮ ಥೀಮ್ ಪಾರ್ಕ್ ಕಾಮಗಾರಿಯಲ್ಲಿ ಅಕ್ರಮ ಆರೋಪ: ತನಿಖೆ ನಡೆಸಲು ಕೋರಿ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು: ಕಾರ್ಕಳ ತಾಲೂಕಿನ ಬೈಲೂರು ಸಮೀಪದ ಉಮಿಕ್ಕಲ್ ಬೆಟ್ಟದ ಮೇಲೆ ಪ್ರತಿಷ್ಠಾಪಿಸಲಾದ ಪರಶುರಾಮನ ಪ್ರತಿಮೆಯ ಗುಣಮಟ್ಟ ಕಳಪೆಯಾಗಿದೆ ಹಾಗೂ ಕಾರ್ಯಾದೇಶವಿಲ್ಲದೇ ಗುತ್ತಿಗೆದಾರನಿಗೆ ಯೋಜನೆಯನ್ನು ವಹಿಸಿ ಕಾಮಗಾರಿ ಮುಕ್ತಾಯಕ್ಕೂ ಮುನ್ನವೇ ಸರ್ಕಾರದ ಹಣವನ್ನು ಗುತ್ತಿಗೆದಾರನ ಖಾತೆಗೆ ವರ್ವಾವಣೆ ಮಾಡಲಾಗಿದ್ದು ಈ ಪ್ರಕರಣದ ತನಿಖೆಗೆ…
ಸಕಲೇಶಪುರ ಬಳಿ ಮತ್ತೆ ಭೂಕುಸಿತ: ಬೆಂಗಳೂರು-ಮಂಗಳೂರು ನಡುವಿನ ರೈಲುಗಳ ಸಂಚಾರ ಸ್ಥಗಿತ
ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಆಚಂಗಿ-ದೊಡ್ಡನಾಗರ ಬಳಿ ರೈಲ್ವೆ ಹಳಿ ಮೇಲೆ ಮತ್ತೆ ಭೂಕುಸಿತವಾಗಿದೆ ಹೀಗಾಗಿ ಬೆಂಗಳೂರು-ಮಂಗಳೂರು ನಡುವಿನ ರೈಲುಗಳ ಸಂಚಾರ ಸ್ಥಗಿತವಾಗಿದೆ. ವಾರದ ಹಿಂದೆ ಇದೆ ಜಾಗದಲ್ಲಿ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿತ್ತು. ಬಳಿಕ ಮಣ್ಣು ತೆರವು ಮಾಡಿ…
ರಾಜ್ಯದಲ್ಲಿ ಭೂಸುರಕ್ಷಾ ಕಾರ್ಯಕ್ರಮದಡಿ ದಾಖಲೆಗಳ ಡಿಜಿಟಲೀಕರಣ : ಕಂದಾಯ ಸಚಿವ ಕೃಷ್ಣ ಭೈರೇಗೌಡ
ಬೆಂಗಳೂರು : ರಾಜ್ಯದಲ್ಲಿ ಭೂಸುರಕ್ಷಾ ಕಾರ್ಯಕ್ರಮದಡಿ ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ. ಭೂ ಸುರಕ್ಷಾ ಕಾರ್ಯಕ್ರಮದಡಿ ಈವರೆಗೆ ಒಟ್ಟು 4,43,27,379 ಕೋಟಿ ಪುಟ ದಾಖಲೆಗಳನ್ನು ಸ್ಕಾö್ಯನ್ ಮಾಡಿ, ಇಂಡೆಕ್ಸ್ ಮಾಡಿ ಡಿಜಿಟಲೀಕರಣ ಮಾಡಲಾಗಿದೆ.…
ಅಜೆಕಾರು ಜ್ಯೋತಿ ಮಹಿಳಾ ಮಂಡಳಿಯಿಂದ ಆಟಿಡೊಂಜಿ ದಿನ
ಕಾರ್ಕಳ:ಜ್ಯೋತಿ ಮಹಿಳಾ ಮಂಡಳಿ ಅಜೆಕಾರು ಇದರ ವತಿಯಿಂದ ಅಜೆಕಾರು ಜ್ಯೋತಿ ಪ್ರೌಢಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ಮತ್ತು ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು. ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಲೀಝಾ ಆಟಿಡೊಂಜಿ ದಿನ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಜ್ಯೋತಿ ಪದವಿಪೂರ್ವ ಕಾಲೇಜಿನ…
ಉನ್ನತಿ ತಂಡದ ಮೂರನೇ ವಾರ್ಷಿಕ ಸಂಭ್ರಮ: ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ – ವಿದ್ಯಾರ್ಥಿ ವೇತನ ವಿತರಣೆ
ಕಾರ್ಕಳ : ಉನ್ನತಿ ತಂಡದ ಮೂರನೇ ವರ್ಷದ ವಾರ್ಷಿಕ ಸಂಭ್ರಮ ಆ. 15ರಂದು ಕುಕ್ಕುಜೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಾರಂಭಗೊಂಡ ಉನ್ನತಿ ತಂಡ ಪ್ರತಿ ವರ್ಷ ಕಾರ್ಕಳ ತಾಲೂಕಿನ ಯಾವುದಾದರೂ ಒಂದು ಗ್ರಾಮೀಣ…
ಗೊರೂರು: ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ : ಜಾತ್ಯಾತೀತವಾಗಿ ಒಗ್ಗೂಡಿ ಬಾಳಿ ಸ್ವಾತಂತ್ರ್ಯಕ್ಕೆ ಹೊಸ ಅರ್ಥ ಕಲ್ಪಿಸಬೇಕು:ಸಾಹಿತಿ ರೇಶ್ಮಾ ಶೆಟ್ಟಿ ಗೊರೂರು
ಹಾಸನ: ದೇಶ ಕಂಡ ಅಭೂತಪೂರ್ವ ರಾಷ್ಟ್ರಪ್ರೇಮಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮುಂದಾಳತ್ವದಲ್ಲಿ ಅನೇಕ ಹೋರಾಟಗಾರರ ಹೋರಾಟದ ಫಲಶೃತಿಯಾಗಿ ದೇಶ ಸ್ವತಂತ್ರಗೊಂಡಿದೆ, ಅವರೆಲ್ಲರ ಹೋರಾಟ ಬಲಿದಾನಗಳನ್ನು ಸ್ಮರಿಸಿಕೊಳ್ಳುತ್ತಾ ಈ ಪುಣ್ಯಭರತವರ್ಷಿಣಿಯಲ್ಲಿ ಜನ್ಮ ಪಡೆದ ನಾವೇ ಧನ್ಯರು, ಇದು ಅರ್ಪಣೆಯ ಭೂಮಿ, ನಾವೆಲ್ಲರೂ ಇಲ್ಲಿ…
