ಗೃಹಲಕ್ಷ್ಮಿ ಯೋಜನೆಯ 2 ಕಂತಿನ ಹಣ ಬಿಡುಗಡೆ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಹಣ ಖಾತೆಗೆ ಬಾರದಿರುವುದಕ್ಕೆ ಮಹಿಳೆಯರು ಅಸಮಾಧಾನ ಹೊರಹಾಕುತ್ತಿದ್ದರು. ಆದರೆ, ಇದೀಗ ಕಳೆದ ಎರಡು ತಿಂಗಳ ಹಣವನ್ನು ಒಮ್ಮೆಲೆ ಜಮೆ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಜನಾಂದೋಲನಾ ಸಮಾವೇಶದಲ್ಲಿ…
ಕಾರ್ಕಳ : ಮದ್ಯವ್ಯಸನಿ ನೇಣು ಬಿಗಿದು ಆತ್ಮಹತ್ಯೆ
ಕಾರ್ಕಳ: ಮದ್ಯವ್ಯಸನಿ ವ್ಯಕ್ತಿಯೊಬ್ಬರು ಕೌಟುಂಬಿಕ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ಉಮೇಶ್ (62) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರು ವಿವಾಹವಾಗಿ ಮುಂಬೈನಲ್ಲಿ ವಾಸವಾಗಿದ್ದವರು ಎಂಟು ವರ್ಷದ ಹಿಂದೆ ತನ್ನ ಹೆಂಡತಿ ಮಗುವನ್ನು ಮುಂಬೈಯಲ್ಲಿ ಬಿಟ್ಟು ಊರಿಗೆ…
ಮಿಯ್ಯಾರು:ಟೆಂಪೋ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು
ಕಾರ್ಕಳ : ತಾಲೂಕಿನ ಮಿಯ್ಯಾರಿನಲ್ಲಿ ಟೆಂಪೋ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ದಾರುಣವಾಗಿ ಮೃತಪಟ್ಟಿದ್ದಾರೆ. ಮಿಯ್ಯಾರು ನಿವಾಸಿ ಕಾಶಿನಾಥ್ (38ವ) ಮೃತಪಟ್ಟವರು. ಅವರು ಸೋಮವಾರ (ಆಗಸ್ಟ್.5) ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಹಾಳೆಕಟ್ಟೆಯಲ್ಲಿರುವ ತಮ್ಮ ಸಲೂನ್ ಅಂಗಡಿ…
ಕಾರ್ಕಳ: ಎಸ್ವಿಟಿ ಕಾಲೇಜಿನಲ್ಲಿ “ಗೆಳತಿ” ಸಂಘ ಉದ್ಘಾಟನೆ
ಕಾರ್ಕಳ: ಹದಿಹರೆಯದ ವಯಸ್ಸಿನಲ್ಲಿ ವಿದ್ಯಾರ್ಥಿಗಳಲ್ಲಿ ಅತ್ಯಂತ ಗೊಂದಲಗಳು ಉಂಟಾಗುತ್ತದೆ. ಶಾರೀರಿಕವಾಗಿ, ಮಾನಸಿಕವಾಗಿ ಬದಲಾವಣೆಗಳು ಆಗುವಂತಹ ಸಮಯವಿದು. ಅದರಲ್ಲಿಯೂ ವಿದ್ಯಾರ್ಥಿನಿಯರಲ್ಲಿ ಅವರದ್ದೇ ಆದ ಗೊಂದಲಗಳು ಇರುತ್ತವೆ. ತಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಮತ್ತು ಗೊಂದಲಗಳಿಗೆ ಪರಿಹಾರವನ್ನು ಕಂಡುಕೊಳ್ಳಲು “ಗೆಳತಿ” ಒಂದು ಅತ್ಯುತ್ತಮ ವೇದಿಕೆಯಾಗಿದೆ…
ಪೆರ್ವಾಜೆ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಟರಾಕ್ಟ್ ಪದಪ್ರದಾನ ಕಾರ್ಯಕ್ರಮ
ಕಾರ್ಕಳ: ತಾಲೂಕಿನ ಪೆರ್ವಾಜೆ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್ ನ ನೂತನ ಅಧ್ಯಕ್ಷರ ಪದಪ್ರದಾನ ಕಾರ್ಯಕ್ರಮ ಆ.5 ರಂದು ನೆರವೇರಿತು. ಇಂಟರಾಕ್ಟ್ ನ ಅಧ್ಯಕ್ಷರಾಗಿ ಸೃಜನ್ ಕುಮಾರ್ ಎಸ್, ಕಾರ್ಯದರ್ಶಿಯಾಗಿ ಸಾಯಿ ಶೆಟ್ಟಿ ಆಯ್ಕೆಯಾದರು. ರೋಟರಿ ಸಂಸ್ಥೆಯ ಅಧ್ಯಕ್ಷರಾದ ಮಹಮದ್ ಇಕ್ಬಾಲ್…
ಉಡುಪಿ: ಪತ್ರಕರ್ತ ಜಯಕರ ಸುವರ್ಣ ಹೃದಯಾಪಘಾತದಿಂದ ನಿಧನ
ಉಡುಪಿ: ದೂರದರ್ಶನ ಚಂದನದ ಉಡುಪಿ ಜಿಲ್ಲಾ ವರದಿಗಾರ, ಕಲ್ಮಾಡಿ ನಿವಾಸಿ ಜಯಕರ ಸುವರ್ಣ ಅವರು ಹೃದಯಾಘಾತದಿಂದ ಸೋಮವಾರ ತಡರಾತ್ರಿ ನಿಧನ ಹೊಂದಿದ್ದಾರೆ. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿ, ಮಲ್ಪೆ ಬಿಲ್ಲವ ಸಂಘ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್…
ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ: ಉದಯಕುಮಾರ್ ಶೆಟ್ಟಿ ಬಾಲ ಬಿಚ್ಚಿದ್ರೆ ಎಲ್ಲಿ ಕಟ್ ಮಾಡಬೇಕು ಎಂದು ಗೊತ್ತಿದೆ: ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹಾವೀರ್ ಹೆಗ್ಡೆ ತಿರುಗೇಟು
ಉಡುಪಿ: ಅಭಿವೃದ್ದಿ ವಿಚಾರದಲ್ಲಿ ವಿನಾಕಾರಣ ಅಡ್ಡಗಾಲು ಹಾಕಿ ಇದೀಗ ಪರಶುರಾಮನ ವಿಚಾರದಲ್ಲಿ ಗೊಂದಲ ಸೃಷ್ಟಿಸಿ ಜನರಲ್ಲಿ ಗೊಂದಲ ಮೂಡಿಸುತ್ತಿರುವ ಉದಯ ಶೆಟ್ಟಿಯವರೇ ನೀವು ಸುಮ್ಮನಿದ್ದರೆ ಸರಿ ಇಲ್ಲವಾದಲ್ಲಿ ನಿಮ್ಮ ಬಾಲ ಕಟ್ ಮಾಡಲು ಗೊತ್ತಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ…
ಬಾಂಗ್ಲಾದೇಶದಲ್ಲಿ ಸರ್ಕಾರ ಹಾಗೂ ಸೇನಾಪಡೆ ಸಂಘರ್ಷ: ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ರಾಜೀನಾಮೆ: ಬಾಂಗ್ಲಾದಿAದ ಸುರಕ್ಷಿತ ಪ್ರದೇಶಕ್ಕೆ ಪಲಾಯನ; ಬಾಂಗ್ಲಾದೇಶ ಸೇನೆ ವಶಕ್ಕೆ!
ಢಾಕಾ: ಬಾಂಗ್ಲಾದೇಶದಲ್ಲಿ ಸರ್ಕಾರ ಹಾಗೂ ಸೇನಾ ಪಡೆಗಳ ನಡುವಿನ ಸಂಘರ್ಷದಿAದ ಪ್ರಕ್ಷÄಬ್ಧತೆ ಹೆಚ್ಚಾಗಿದ್ದು ಈ ನಡುವೆ ಪ್ರಧಾನಿ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಢಾಕಾ ತೊರೆದು ಸುರಕ್ಷಿತ ಸ್ಥಳಕ್ಕೆ ಪರಾರಿಯಾಗಿದ್ದಾರೆ. ಮೂಲಗಳ ಪ್ರಕಾರ ಅವರು ಢಾಕಾ ಅರಮನೆಯನ್ನು…
ಅಬಕಾರಿ ನೀತಿ ಪ್ರಕರಣ: ಅರವಿಂದ್ ಕೇಜ್ರಿವಾಲ್ ಜಾಮೀನು ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್
ನವದೆಹಲಿ: ದೆಹಲಿ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಮತ್ತೆ ಹಿನ್ನಡೆಯಾಗಿದ್ದು ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ದೆಹಲಿ ಹೈಕೋರ್ಟ್ ಕೇಜ್ರಿವಾಲ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಮಾಹಿತಿಯ ಪ್ರಕಾರ, ಸಿಬಿಐನಿಂದ ಬಂಧನ ಮತ್ತು ಜಾಮೀನು ಅರ್ಜಿಗೆ ಸಂಬಂಧಿಸಿದಂತೆ…
ರಾಜ್ಯದಲ್ಲಿ ಮತ್ತೊಬ್ಬ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ: ಎರಡು ತಿಂಗಳ ಹಿಂದೆ ವರ್ಗಾವಣೆಗೊಂಡಿದ್ದ ಸಿಸಿಬಿ ಎಸ್ಐ ತಿಮ್ಮೇಗೌಡ ನೇಣಿಗೆ ಶರಣು
ಬೆಂಗಳೂರು: ಯಾದಗಿರಿ ಪಿಎಸ್ಐ ಪರಶುರಾಮ ಸಾವು ಪ್ರಕರಣ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೋರ್ವ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರು ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ತಿಮ್ಮೇಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಮನಗರ ಜಿಲ್ಲೆಯ ಬಿಡದಿ ಬಳಿ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಿಮ್ಮೇಗೌಡ…
