
ಕಾರ್ಕಳ,ಜೂ.22: ಕಾಬೆಟ್ಟು ಅಂಬೇಡ್ಕರ್ ಭವನದ ನಿರ್ವಹಣಾ ಸಮಿತಿಗೆ ನಿಯಮಬಾಹಿರವಾಗಿ ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದೆ. ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ರಾಜಕೀಯ ಪ್ರೇರಿತವಾಗಿ ಸದಸ್ಯರನ್ನು ನೇಮಕ ಮಾಡಲಾಗಿದ್ದು, ಆದ್ದರಿಂದ ನಾಮನಿರ್ದೇಶಿತ ಸದಸ್ಯರ ಆಯ್ಕೆ ರದ್ದುಪಡಿಸುವಂತೆ ಕಾರ್ಕಳದ ವಿವಿಧ ದಲಿತ ಸಂಘಟನೆಗಳ ನಾಯಕರುಗಳು ಸೋಮವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಹಾಲಿ ನಿರ್ವಹಣಾ ಸಮಿತಿಯ ಸದಸ್ಯರನ್ನು ಅನರ್ಹಗೊಳಿಸಿ ನೂತನ ಸದಸ್ಯರನ್ನು ಪುನರ್ ಆಯ್ಕೆ ಮಾಡುವಂತೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಂಘ(ರಿ.)ದ ಗೋವರ್ಧನ್ ರಾಣೆ, ಕರ್ನಾಟಕ ಭೀಮ್ ಸೇನೆ (ರಿ.) ಇದರ ಉಡುಪಿ ಜಿಲ್ಲಾಧ್ಯಕ್ಷ ಸುಧಾಕರ್ ದಾನಶಾಲೆ,ಡಾ.ಬಿ.ಆರ್.ಅಂಬೇಡ್ಕರ್ ಯುವ ವೇದಿಕೆ(ರಿ.)ಯ ತಾಲೂಕು ಅಧ್ಯಕ್ಷ ಹರೀಶ್ ಬಜಗೋಳಿ, ಸುಹಾಸ್ ಮುಡಾರು, ರಮೇಶ್ ಜರಿಗುಡ್ಡೆ, ಸುನೀತಾ ಅಂಡಾರು, ಶ್ರೀನಿವಾಸ್ ಕಾರ್ಲ ಉಪಸ್ಥಿತರಿದ್ದರು.



.
.
.
.
.
.
.
.
.
.
.
.
.
.
.
.
.
.
.
.
