Share this news

ಬೈಂದೂರು: ತಾಲೂಕು ಕಚೇರಿಯಲ್ಲಿ ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಗುರುವಾರ ಅಕ್ರಮ ಸಕ್ರಮ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆ ನಡೆಸಿದರು.
ಅಧಿಕಾರಿಗಳು ಆನ್ ಲೈನ್ ನಲ್ಲಿ ಅರ್ಜಿ ಅಪ್ಲೋಡ್ ಮಾಡುವ ಸಮಯದಲ್ಲಿ ಎದುರಾಗಿದ್ದ ತಾಂತ್ರಿಕ ಸಮಸ್ಯೆಗಳನ್ನು ಬಗೆಸಹರಿಸುವ ನಿಟ್ಟಿನಲ್ಲಿ ಶಾಸಕರು ಸಂಬAಧಪಟ್ಟವರಿಗೆ ಫೋನ್ ಕರೆಯ ಮೂಲಕ ಗಮನಕ್ಕೆ ತಂದು ತಾಂತ್ರಿಕ ಸಮಸ್ಯೆಯನ್ನು ಸಭೆಯಲ್ಲೇ ಬಗೆಹರಿಸಿದರು.

ಸಮಿತಿ ಮುಂದೆ ಅಂತಿಮವಾಗಿ ಹಾಜರುಪಡಿಸಲು ಹಾಗೂ ಜನವರಿ 2 ನೇ ವಾರದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಬಗರ್ ಹುಕುಂ ಕಡತ ವಿಲೇವಾರಿ ಸಪ್ತಾಹ ಸಲುವಾಗಿ ಬಾಕಿ ಇರುವ ಕಡತಗಳ ಬಗ್ಗೆ ಸಂಬAಧಿಸಿದ ಅಧಿಕಾರಿಗಳ ಜೊತೆ ಪೂರ್ವಭಾವಿ ಚರ್ಚೆ ನಡೆಸಿದರು. 94 ಸಿ ಅಡಿ ಅರ್ಹ ಅರ್ಜಿಗಳು ವಿಲೇವಾರಿ ಬಾಕಿ ಇರುವ ಗ್ರಾಮಗಳಲ್ಲಿ ಸಮಸ್ಯಾತ್ಮಕವಲ್ಲದ ಅರ್ಜಿಗಳಿಗೆ ಕೂಡಲೇ ಹಕ್ಕು ಪತ್ರ ಮಂಜೂರು ಮಾಡಿ ಬಡವರಿಗೆ ಹಕ್ಕು ಪತ್ರ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

ಸಭೆಯಲ್ಲಿ ತಾಲೂಕು ತಹಸೀಲ್ದಾರರು, ಉಪ ತಹಸೀಲ್ದಾರರು, ಬಗರ್ ಹುಕುಂ ತಂತ್ರಾAಶದ ಜಿಲ್ಲಾ ಸಮಾಲೋಚಕರು, ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *