ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿAಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪುನೀತ್ ಆರ್ ಪಿ ಅವರು ‘ಪ್ರೈವೆಸಿ ಪ್ರಿಸರ್ವೇಶನ್ ಅಂಡ್ ಇಂಟರ್‌ಆಪರೇಬಿಲಿಟಿ ಆಫ್ ಎಲೆಕ್ಟ್ರಾನಿಕ್ ಹೆಲ್ತ್ ರೆಕಾರ್ಡ್ಸ್ ಯುಸಿಂಗ್ ಬ್ಲಾಕ್‌ಚೇನ್ ಟೆಕ್ನಾಲಜಿ’ ಎಂಬ ವಿಷಯದ ಬಗೆಗೆ ಮಂಡಿಸಿದ ಸಂಶೋಧನಾ ಪ್ರಭಂದಕ್ಕೆ ಬೆಂಗಳೂರಿನ ರೇವಾ ವಿಶ್ವವಿದ್ಯಾಲಯವು ಪಿ.ಎಚ್.ಡಿ. ಪದವಿಯನ್ನು ನೀಡಿದೆ.
ಇವರು ರೇವಾ ಯುನಿವರ್ಸಿಟಿಯ ಸ್ಕೂಲ್ ಆಫ್ ಕಂಪ್ಯೂಟಿAಗ್ & ಇನ್ಫೋರ್ಮೇಶನ್ ಟೆಕ್ನಾಲಜಿಯ ಪ್ರಾಧ್ಯಾಪಕ ಡಾ.ಪಾರ್ಥಸಾರಥಿ ಜಿ ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನೆಯನ್ನು ನಡೆಸಿದ್ದರು. ಪುನೀತ್ ಅವರು ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿ ಗ್ರಾಮದ ಆರ್ ಎಂ ಪ್ರಭು ಹಾಗೂ ಹೆಚ್.ಬಿ ಲತಾ ಅವರ ಪುತ್ರ.