ಕಾರ್ಕಳ: ಹಿರಿಯ ಜನಾನುರಾಗಿ ನಿವೃತ್ತ ಶಿಕ್ಷಕ ಬೈಲೂರು ಸುಂದರ ಶೆಟ್ಟಿ ಅವರನ್ನು ಅವರ ಆತ್ಮೀಯ ಶಿಷ್ಯಂದಿರಾದ ವಿಶ್ರಾಂತ ಪ್ರೊಪೆಸರ್ ಡಾ. ಪ್ರಭಾಕರ ಅತಿಕಾರಿ, ವಿಶ್ರಾಂತ ಪತ್ರಕರ್ತ ಚಿಂತಕ ಬಿಪಿನಚಂದ್ರ ಪಾಲ್ ನಕ್ರೆ, ಬೈಲೂರು ಅರುಣಾ ನರ್ಸರಿ ಮಾಲಕ ಮಂಗಳೂರಿನ ನವೀನಚಂದ್ರ ಸೋನ್ಸ್ ಹಾಗೂ ಪ್ರತಾಪ್ ಮಾಬ್ಯಾನ್ ರವರು ಮಂಗಳೂರಿನ ಅವರ ಸ್ವಗೃಹದಲ್ಲಿ ಬೇಟಿಯಾಗಿ ಫಲ ಪುಷ್ಪ ಹೂಹಾರ ನೀಡಿ ಗೌರವಿಸಿ ಗುರುವಂದನೆ ಸಲ್ಲಿಸಿದರು.
96 ವರ್ಷ ವಯಸ್ಸಿನ ಯುವ ಚೈತನ್ಯ ಸುಂದರ ಶೆಟ್ಟಿ ಕಾರ್ಕಳದ ಬೈಲೂರಿನ ಸರಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ, ಕಾರ್ಕಳ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಉಪಾನ್ಯಾಸಕರಾಗಿ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿ ಇದೀಗ ಮಂಗಳೂರಿನಲ್ಲಿ ಮಡದಿ ಮಕ್ಕಳೊಂದಿಗೆ ಸುಖೀ ಜೀವನ ನಡೆಸುತ್ತಿದ್ದಾರೆ.
ನಮ್ಮ ಶೈಕ್ಷಣಿಕ ಸಾಧನೆಗಳಿಗೆ ಅವರ ಆದರ್ಶ ಬೋಧನೆ ಸ್ಪೂರ್ತಿಯಾದರೆ ಅವರ ಆಶೀರ್ವಾದ ಶ್ರೀರಕ್ಷೆ ಆಗಿತ್ತು ಎಂದು ಡಾ. ಪ್ರಭಾಕರ ಅತಿಕಾರಿ ತಿಳಿಸಿದ್ದಾರೆ.
