

ಕಾರ್ಕಳ, ಅ.13: ಕಾರ್ಕಳದ ರಥಬೀದಿಯ ಪ್ರತಿಭಾ ನರ್ಸಿಂಗ್ ಹೋಂ ಬಳಿ ಸೋಲಾರ್ ಉಪಕರಣಗಳ ನೂತನ ಮಳಿಗೆ ಶೈನ್ ಎನರ್ಜಿ ಸೊಲ್ಯುಶನ್ ನಾಳೆ ಶುಭಾರಂಭಗೊಳ್ಳಲಿದೆ. ಕಳೆದ 13 ವರ್ಷಗಳ ಹಿಂದೆ ಕಾರ್ಕಳದಲ್ಲಿ ಆರಂಭಗೊAಡಿದ್ದ ಶೈನ್ ಎನರ್ಜಿ ಸೊಲ್ಯುಷನ್ ಸಂಸ್ಥೆ ಸೋಲಾರ್ ಕ್ಷೇತ್ರದಲ್ಲಿ ಅತ್ಯಂತ ಹೆಸರುವಾಸಿಯಾಗಿದೆ.
ಸೋಲಾರ್ ಆನ್ ಗ್ರಿಡ್ ಸಿಸ್ಟಂ, ಹೈಬ್ರೀಡ್ ಸಿಸ್ಟಂ, ವಿವಿಧ ಪ್ರತಿಷ್ಠಿತ ಬ್ರ‍್ಯಾಂಡ್ ಗಳ ಸೋಲಾರ್ ಪಂಪ್,ಸೋಲಾರ್ ವಾಟರ್ ಹೀಟರ್,ಸ್ಟ್ರೀಟ್ ಲೈಟ್, ಸೋಲಾರ್ ಬ್ಯಾಟರಿಗಳು, ಸೋಲಾರ್ ಸಿಸಿ ಕ್ಯಾಮೆರಾ ಇತ್ಯಾದಿ ಉತ್ಪನ್ನಗಳು ವಿಶೇಷ ರಿಯಾಯಿತಿ ದರದಲ್ಲಿ ಲಭ್ಯವಿದೆ.
ಕೇಂದ್ರ ಸರ್ಕಾರವು ಸೋಲಾರ್ ವಿದ್ಯುತ್ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಈ ನಿಟ್ಟಿನಲ್ಲಿ ಸೂರ್ಯಘರ್ ಯೋಜನೆಯನ್ನು ಪರಿಚಯಿಸಿ ಬ್ಯಾಂಕ್ ಸಾಲದ ಜೊತೆಗೆ ಸಬ್ಸಿಡಿ ನೀಡುತ್ತಿದೆ. ಗೃಹ ಬಳಕೆ ಹಾಗೂ ಕೃಷಿ ಪಂಪ್ ಸೆಟ್ ಗಳಿಗೆ ನಿರಂತರ ವಿದ್ಯುತ್ ಲಭಿಸಲಿದೆ. ಗ್ರಾಹಕರು ತಾವು ಬಳಸಿದ ಬಳಿಕ ಉಳಿಕೆಯ ಹೆಚ್ಚುವರಿ ವಿದ್ಯುತ್ ಮೆಸ್ಕಾಂಗೆ ನೀಡಿ ಆದಾಯ ಗಳಿಸಬಹುದು. ಸೂರ್ಯಘರ್ ಯೋಜನೆಗೆ ಅರ್ಜಿ ಸಲ್ಲಿಸಲು ಶೈನ್ ಎನರ್ಜಿ ಸೊಲ್ಯುಶನ್ ನಲ್ಲಿ ಅವಕಾಶವಿದೆ. ಎಲ್ಲಾ ರೀತಿಯ ಸೋಲಾರ್ ಉಪಕರಣಗಳ ಮಾಹಿತಿ ಪಡೆಯಲು ಹಾಗೂ ಸೂರ್ಯಘರ್ ಯೋಜನೆಗೆ ಅರ್ಜಿ ಸಲ್ಲಿಸಲು ಮಾಹಿತಿಗಾಗಿ ಮೊ.9632561417 ಅಥವಾ 7353207993 ಅನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಮಾಲಕರಾದ ರೋಶನ್ ರಾವ್ ತಿಳಿಸಿದ್ದಾರೆ.






.
.
.
.
.
.
.
.
.
.
.
.
.
.
.
.
.
.
.
.
