
ಶಿರಸಿ, ಅ.17: ಹುಬ್ಬಳ್ಳಿ ರಸ್ತೆ ಅಯ್ಯಪ್ಪನಗರದ ಅಯ್ಯಪ್ಪ ದೇವಸ್ಥಾನದ ಸಭಾಭವನದಲ್ಲಿ ಪ್ರಜ್ವಲ್ ಟ್ರಸ್ಟ್ ವತಿಯಿಂದ ಅ.15 ಹಾಗೂ 16ರಂದು ಉಚಿತ ರಂಗೋಲಿ ತರಬೇತಿ ಶಿಬಿರ ನಡೆಯಿತು. ಎರಡು ದಿನದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಶಾರದಾ ಕಳಸಣ್ಣನವರ್ ಶಿಬಿರದಲ್ಲಿ ಭಾಗವಹಿಸಿದವರಿಗೆ ಚುಕ್ಕಿ ರಂಗೋಲಿ, ಕೋಲಮ್ ರಂಗೋಲಿ, ಫ್ರೀಹ್ಯಾಂಡ್ ರಂಗೋಲಿ, ಪುಷ್ಪ ರಂಗೋಲಿ ಸೇರಿದಂತೆ ಎಲ್ಲಾ ತರದ ರಂಗೋಲಿ ಬಿಡಿಸುವ ತರಬೇತಿ ನೀಡಿದರು. ಸುಮಾರು 40 ಕ್ಕೂ ಹೆಚ್ಚಿನ ಶಿಬಿರಾರ್ಥಿಗಳು ಶಿಬಿರದ ಸದುಪಯೋಗ ಪಡೆದುಕೊಂಡರು. ಟ್ರಸ್ಟ್ ಅಧ್ಯಕ್ಷೆ ಬಿಂದು ಹೆಗಡೆ ಹಾಗೂ ಪದಾಧಿಕಾರಿಗಳಾದ ಸರಸ್ವತಿ ಕಂಬಾರ, ನಯನಾ ಹೆಗಡೆ, ವೆಂಕಟೇಶ ಹೆಗಡೆ ಉಪಸ್ಥಿತರಿದ್ದರು.


