
ಕಾರ್ಕಳ,ಜೂ.01: ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈರಬೆಟ್ಟು ಶಾಲಾ ಬಳಿಯ ರಸ್ತೆ ಬದಿಯ ಸಾರ್ವಜನಿಕ ಸ್ಥಳದಲ್ಲಿ ಪಡುಬಿದ್ರಿಯ ವ್ಯಕ್ತಿಯೊಬ್ಬರು ಕಸ ಎಸೆದಿದ್ದು, ಕಸ ಹಾಕಿದ ವ್ಯಕ್ತಿಯ ಮಾಹಿತಿ ದೊರಕಿದ್ದು ಆ ಮೂಲಕ ಕಸ ಎಸೆದ ವ್ಯಕ್ತಿಯನ್ನು ಗುರುತಿಸಿದ ಗ್ರಾಮ ಪಂಚಾಯತ್ ಪಿಡಿಓ ಆತನಿಗೆ 1500 ದಂಡ ವಿಧಿಸಿ ಕಸ ತೆರವುಗೊಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಮನೆಯ ಕಸವನ್ನು ಪಂಚಾಯತಿ ಸ್ವಚ್ಚತಾಗಾರರಿಗೆ ನೀಡದೇ ಎಲ್ಲೆಂದರಲ್ಲಿ ಎಸೆಯುವ ಪ್ರವೃತ್ತಿ ಬೆಳೆದಿದ್ದು, ಅಂತಹವರ ವಿರುದ್ಧ ಪಂಚಾಯತ್ ಆಡಳಿತಗಳು ದಂಡ ವಿಧಿಸುವ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ.
ಸಾರ್ವಜನಿಕರು ಕೂಡ ಇಂತಹ ವ್ಯಕ್ತಿಗಳ ಮಾಹಿತಿಯನ್ನು ಪಂಚಾಯತ್ ಆಡಳಿತಕ್ಕೆ ನೀಡಿ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಬೇಕಿದೆ.



.
.
.
.
.
.
.
.
.
.
.
.
.
.
.
.
.
.
.
.
