Share this news

 

 

 

ಅಜೆಕಾರು: ದೇವಾಲಯಗಳು ನಮ್ಮ ಧಾರ್ಮಿಕ ಆಚರಣೆಗಳ ಜೊತೆಗೆ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ತಿಳಿಸುವ ಆಧ್ಯಾತ್ಮಿಕ ಕ್ಷೇತ್ರ. ಕ್ಷೇತ್ರ ದರ್ಶನದಿಂದ ನಮ್ಮಲ್ಲಿ ಸಕಾರಾತ್ಮಕ ಚಿಂತನೆಗಳು ಜಾಗೃತಗೊಳ್ಳುತ್ತವೆ ಎಂದು ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದರು ಹೇಳಿದರು.

ಅವರು ಎಳ್ಳಾರೆ ಲಕ್ಷ್ಮೀ ಜನಾರ್ದನ ದೇವಸ್ಥಾನದ ನೂತನ ಮತ್ತು ಶಾಸ್ತ್ರೀಯ ಧ್ವಜ ಸ್ತಂಭ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ವೇದಿಕೆಯಲ್ಲಿ ಅವರು ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕುಕ್ಕಿಕಟ್ಟೆ ರಾಮಕೃಷ್ಣ ತಂತ್ರಿ,ಸಿಎ ಅಶೋಕ ಕುಮಾರ್ ಮುಳ್ಕಾಡು,ಚಂದ್ರಕಲಾನಾಯಕ್ ಉಪಸ್ಥಿತರಿದ್ದರು.ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯೋಗಿಶ್ ಮಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ದೇವಳದ ಜೀರ್ಣೋದ್ಧಾರ ಕಾರ್ಯಕ್ಕೆ ಕೊಡುಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು.

ರಾಮಚಂದ್ರ ನಾಯಕ್ ಸ್ವಾಗತಿಸಿದರು, ಕುಕ್ಕುಜೆ ವಿನಯ ಆರ್ ಭಟ್ ನಿರೂಪಿಸಿ ವಂದಿಸಿದರು.ಗುರುಪ್ರಸಾದ್ ಕಿಣಿ,ಪ್ರಕಾಶ್ ಸಹಕರಿಸಿದರು.

 

 

Leave a Reply

Your email address will not be published. Required fields are marked *