ಕಾರ್ಕಳ: ತಾಲೂಕು ಕಚೇರಿಯ ಪಹಣಿ ಕೇಂದ್ರದಲ್ಲಿ ಸಿಬ್ಬಂದಿ ಬಾಗಿಲು ತೆರೆಯದೇ ಆರ್‌ಟಿಸಿಗಾಗಿ ಬೆಳಗ್ಗಿನಿಂದ ಕಾದು ಕುಳಿತ ಸಾರ್ವಜನಿಕರಿಗೆ ಆರ್‌ಟಿಸಿ ನೀಡಿಲ್ಲ ಎಂದು ಮುಂಡ್ಲಿಯ ಸುಜಿತ್ ಶೆಟ್ಟಿ ಎಂಬವರು ಆರ್‌ಟಿಸಿ ಕೌಂಟರ್ ಸಿಬ್ಬಂದಿಯನ್ನು ತೀವೃ ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್ ಆಗಿದೆ.
ಆರ್‌ಟಿಸಿ ಕೌಂಟರ್ ಬಾಗಿಲು ತೆರೆಯಲು ಮುಂದಾದ ಮಹಿಳಾ ಸಿಬ್ಬಂದಿಯ ಜತೆ ವಾಗ್ವಾದಕ್ಕೆ ಇಳಿದ ಸುಜಿತ್ ಶೆಟ್ಟಿ, ಕೌಂಟರ್ ಬಂದ್ ಮಾಡಲು ಡಿಸಿ ಹೇಳಿದ್ದಾರಾ? ನೀವು ಬ್ರೋಕರ್ ಗಳ ಬಳಿ ಆರ್‌ಟಿಸಿ, ಎಂ,ಆರ್ ಪ್ರತಿಗೆ 500 ರೂ ಪಡೆಯುತ್ತೀರಿ ಎಂದು ಏರು ದನಿಯಲ್ಲಿ ಗದರಿಸಿದ್ದಾರೆ. ಡಿಸಿಯವರಲ್ಲಿ ಕೇಳಿದ್ರೆ ಕಚೇರಿ ಓಪನ್ ಇದೆ ಅಂತಾರೆ, ನೀವು ನಮ್ಮ ರಾಜ್ಯ ಸರ್ಕರದ ಹೆಸರು ಕೆಡಿಸಲಿಕ್ಕೆ ಹೀಗೆ ಮಾಡುತ್ತಿದ್ದೀರಾ ಎಂದು ಗದರಿಸಿದ್ದಾರೆ. ನಾನು 2 ಗಂಟೆಯಿAದ ಕಾಯುತ್ತಿದ್ದೇನೆ 4.30ರ ವರೆಗೆ ಆರ್.ಟಿ.ಸಿ ಕೊಡುತ್ತಿಲ್ಲ, ರಾಜ್ಯ ಸರ್ಕಾರ ಉಂಟಾ,ಯಾರೂ ಕೇಳುವವವರೇ ಇಲ್ಲವೇ? ತಾಲೂಕು ಕಚೇರಿ ಬ್ರೋಕರ್ ಕಚೇರಿಯೇ? ಎಂದು ಪ್ರಶ್ನಿಸಿದ್ದಾರೆ. ಈ ವಿಚಾರ ತಹಸೀಲ್ದಾರ್ ಪ್ರದೀಪ್ ಕುಮಾರ್ ಅವರ ಗಮನಕ್ಕೆ ಬಂದ ಬಳಿಕ ತಹಶೀಲ್ದಾರ್ ಸ್ಥಳಕ್ಕೆ ಬಂದು ನಿಧಾನವಾಗಿ ಮಾತಾಡುವಂತೆ ಸೂಚಿಸಿದಾಗ ಇವರಿಬ್ಬರ ನಡುವೆ ವಾಗ್ವಾದ ನಡೆದಿದೆ.
ಬಳಿಕ ಈ ಪ್ರಕರಣ ತಣ್ಣಗಾಗಿತ್ತು. ಈ ಘಟನೆ ನಡೆದು ಎರಡು ದಿನಗಳ ಬಳಿಕ ಯುದ್ಧ ಗೆದ್ದವರಂತೆ ಹಲವರು ಅಧಿಕಾರಿಗಳಿಗೆ ಗ್ರಹಚಾರ ಬಿಡಿಸಿದ ಸುಜಿತಣ್ಣ ಎಂದೆಲ್ಲಾ ಫೇಸ್ ಬುಕ್ ನಲ್ಲಿ ಕಿಚಾಯಿಸಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.