Month: March 2025

ನಕಲಿ ಪತ್ರಕರ್ತರಿಂದ ಮೀಡಿಯಾ ಸ್ಟಿಕ್ಕರ್ ದುರ್ಬಳಕೆ; ಕ್ರಮಕ್ಕೆ ಒತ್ತಾಯಿಸಿ ಕಾರ್ಕಳ ಪತ್ರಕರ್ತರ ಸಂಘದಿಂದ ಎಸ್ಪಿಗೆ ದೂರು

ಕಾರ್ಕಳ: ಫೇಸ್ ಬುಕ್,ಡಿಜಿಟಲ್ ಮಾಧ್ಯಮ, ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆದು ಅದರಲ್ಲಿ ವಿಶ್ವಾಸಾರ್ಹವಲ್ಲದ,ನಿಖರತೆ ಹಾಗೂ ಸ್ಪಷ್ಟತೆಯಿಲ್ಲದ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಪ್ರಕಟಿಸುವ ಅನಧಿಕೃತ ಪತ್ರಕರ್ತರ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು ಇದಕ್ಕೆ ಕಡಿವಾಣ ಹಾಕುವಂತೆ ಹಾಗೂ ಅಧಿಕೃತ ಪತ್ರಕರ್ತರ…

ಬಂಟ್ವಾಳ : ನಿಗೂಢವಾಗಿ ನಾಪತ್ತೆಯಾಗಿದ್ದ ಫರಂಗಿಪೇಟೆಯ ವಿದ್ಯಾರ್ಥಿ ಉಡುಪಿಯಲ್ಲಿ ಪತ್ತೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕಾಲೇಜು ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ ಬೇಧಿಸುವಲ್ಲಿ ಕೊನೆಗೂ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್ ಫೆಬ್ರವರಿ 25 ರಂದು ನಾಪತ್ತೆಯಾಗಿದ್ದ. ಪೊಲೀಸರು ಹುಡುಕಾಟ, ತನಿಖೆ ತೀವ್ರಗೊಳಿಸಿದ್ದರೂ ಆತನ ಸುಳಿವೇ…

ಗಂಗೊಳ್ಳಿ: ಅಕ್ರಮ ಜಾನುವಾರು ಸಾಗಾಟದ ವಾಹನ ಅಪಘಾತ; ನದಿಗೆ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ ಮೂವರು ಆರೋಪಿಗಳು ವಶಕ್ಕೆ

ಕುಂದಾಪುರ: ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಕಾರೊಂದು ಬೊಲೆರೋ ವಾಹನಕ್ಕೆ ಢಿಕ್ಕಿ ಹೊಡೆದಿದ್ದು‌, ಕಾರನ್ನು ರಸ್ತೆ ಮಧ್ಯೆಯೇ ಬಿಟ್ಟು ಆರೋಪಿಗಳು ಪರಾರಿಯಾದ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡಮ್ಮಾಡಿ ಕ್ರಾಸ್ ಬಳಿ ಶುಕ್ರವಾರ ಸಂಜೆ ನಡೆದಿದೆ. ಕಾರಿನಿಂದ ನದಿಗೆ ಹಾರಿ ತಪ್ಪಿಕೊಳ್ಳಲು…

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಮಹಿಳೆ ಸ್ವಾಭಿಮಾನದ ಪ್ರತೀಕ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು: ಮಹಿಳೆ ಸ್ವಾಭಿಮಾನದ ಪ್ರತೀಕ,ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲೂ ದಾಪುಗಾಲಿಡುತ್ತಿದ್ದು, ತನ್ನ‌ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಹೋರಾಟ ನಡೆಸುವುದು ಅನಿವಾರ್ಯ ಎಂದು ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ…

ಬೆಳ್ಮಣ್: ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಮೃತ್ಯು

ಕಾರ್ಕಳ: ರಸ್ತೆಯಲ್ಲಿದ್ದ ಹಂಪ್ಸ್ ಗಮನಿಸದೆ ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.ಬೈಕ್ ಸವಾರ ಪವಿತ್ (22) ಮೃತಪಟ್ಟ ಯುವಕ. ಪವಿತ್ ಫೆ.15 ರಂದು ಬೈಕಿನಲ್ಲಿ ಶುಭಂ ಎಂಬಾತನೊAದಿಗೆ ಕಲ್ಯಾದಿಂದ ಬೆಳ್ಮಣ್ ಮಾರ್ಗವಾಗಿ ಮಂಗಳೂರಿಗೆ…

ರಾಜ್ಯ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಸಾಕಷ್ಟು ಅನುದಾನವನ್ನು ನೀಡದಿರುವುದು ದುರಂತ- ಡಾ.ಸುರೇಂದ್ರ ಶೆಟ್ಟಿ

ಉಡುಪಿ: ರಾಜ್ಯ ಬಜೆಟಿನಲ್ಲಿ ಶಿಕ್ಷಣಕ್ಕೆ ಸಾಕಷ್ಟು ಅನುದಾನವನ್ನು ನೀಡದಿರುವುದು ಮತ್ತು ೯ ಹೊಸ ವಿಶ್ವವಿದ್ಯಾಲಯಗಳಿಗೆ ಸರ್ಕಾರ ಬಜೆಟಿನಲ್ಲಿ ಯಾವುದೇ ಅನುದಾನವನ್ನು ಘೋಷಿಸದೆ ಮುಚ್ಚಲು ಹೊರಟಿರುವುದು ಅವೈಜ್ಞಾನಿಕ ಮತ್ತು ದುರಂತ ಎಂದು ಉಡುಪಿ ಕರ್ನಾಟಕ ರಾಜ್ಯ ಮಹಾ ವಿದ್ಯಾಲಯಗಳ ಶಿಕ್ಷಕರ ಸಂಘದ ಅಧ್ಯಕ್ಷ…

ಉಡುಪಿ : ಕರಾವಳಿ ಬೈಪಾಸ್‌ನಲ್ಲಿ ಬೆಂಕಿ ಅವಘಡ: ಸಾವಿರಾರು ರೂ. ನಷ್ಟ

ಉಡುಪಿ: ಕರಾವಳಿ ಬೈಪಾಸ್‌ ಬಳಿಯ ಶಾರದಾ ಹೊಟೇಲ್‌ ಸಮೀಪದ ಸ್ಥಳಕ್ಕೆ ಆಕಸ್ಮಿಕ ಬೆಂಕಿ ತಗಲಿ ಸಾವಿರಾರು ರೂ. ನಷ್ಟ ಸಂಭವಿಸಿದೆ. ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿಯನ್ನು ನೀಡಿದ್ದು, ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಉಡುಪಿ ಹಾಗೂ ಮಲ್ಪೆ ಅಗ್ನಿಶಾಮಕ ದಳದ ಸಿಬಂಧಿಗಳು ಬೆಂಕಿ…

ಉಡುಪಿ : ಖಾಸಗಿ ಬಸ್ ನ ಸ್ಟೇರಿಂಗ್ ಕಟ್ : ಪ್ರಯಾಣಿಕರು ಅಪಾಯದಿಂದ ಪಾರು

ಉಡುಪಿ: ಉಡುಪಿ ಕರಾವಳಿ ಬೈಪಾಸ್‌ನಲ್ಲಿ ಖಾಸಗಿ ಬಸ್ಸಿನ ಸ್ಟೇರಿಂಗ್ ವೈಫಲ್ಯದಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಉಡುಪಿಯಿಂದ ಬ್ರಹ್ಮಾವರದ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸಿನ ಸ್ಟೇರಿಂಗ್ ಇದ್ದಕ್ಕಿದ್ದಂತೆ ಕೈಕೊಟ್ಟಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆಯ ಬದಿಯಲ್ಲಿ ನಿಂತಿತು. ಇದರಿಂದಾಗಿ ಕೆಲಕಾಲ…

ನಂದಳಿಕೆ: ಜ್ಞಾನದೇಗುಲಕ್ಕೆ ಕಳ್ಳರ ಲಗ್ಗೆ: ನಗದಿಗಾಗಿ ತಡಕಾಡಿ ಬರಿಗೈಯಲ್ಲಿ ವಾಪಾಸ್

ಕಾರ್ಕಳ: ಜ್ಞಾನದೇಗುಲ ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನುಗ್ಗಿದ ಕಳ್ಳರು ನಗದಿಗಾಗಿ ತಡಕಾಡಿ ಕೊನೆಗೆ ನಗದು ಸಿಗದೇ ಬರಿಗೈಯಲ್ಲೇ ವಾಪಾಸಾದ ಘಟನೆ ಮಾ.6ರ ರಾತ್ರಿ ನಡೆದಿದೆ. ಶಾಲೆಯ ಮುಖ್ಯೋಪಾಧ್ಯಾಯ ಕರುಣಾಕರ ಅವರು ಮಾ.6 ರಂದು ಸಂಜೆ…

ಶಿರ್ಲಾಲು: ಯುವಕ ನೇಣು ಬಿಗಿದು ಆತ್ಮಹತ್ಯೆ

ಅಜೆಕಾರು: ಕಾರ್ಕಳ ತಾಲೂಕಿನ ಶಿರ್ಲಾಲಿನಲ್ಲಿ ಗುರುವಾರ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿರ್ಲಾಲು ನಿವಾಸಿ ಸಹನ್ (29) ಮೃತ ದುರ್ದೈವಿ. ಸಹನ್ ವಿಪರೀತ ಮದ್ಪಾನ ಮಾಡುತ್ತಿದ್ದು, ಮದ್ಯಪಾನ ಬಿಡಿಸಲು ಮನೆಯವರು ಚಿಕಿತ್ಸೆಯನ್ನೂ ಕೊಡಿಸಿದ್ದರು. ಆದರೂ ಮದ್ಯಪಾನ ಬಿಡದ ಸಹನ್ ಇದೇ ವಿಚಾರಕ್ಕೆ…