ನವದೆಹಲಿ : ಯುಪಿಐ ಬಳಕೆದಾರರಿಗೆ ಸಿಹಿಸುದ್ದಿ ನೀಡಿದ್ದು, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಯುಪಿಐ) ಮೂಲಕ ಒಂದೇ ವಹಿವಾಟಿನಲ್ಲಿ 5 ಲಕ್ಷದವರೆಗೆ ವರ್ಗಾವಣೆ ಮಾಡುವ ಮಿತಿಯನ್ನು ಹೆಚ್ಚಿಸಿದೆ, ಆದರೆ ಇದು ನಿರ್ದಿಷ್ಟ ರೀತಿಯ ವಹಿವಾಟುಗಳಿಗೆ ಮಾತ್ರ.
ಈ ಹೊಸ ಮಿತಿಯು ತೆರಿಗೆ ಪಾವತಿಗಳು, ಆಸ್ಪತ್ರೆ ಮತ್ತು ಶಿಕ್ಷಣ ಸೇವೆಗಳು, ಐಪಿಒ ಗಳು ಮತ್ತು ಸರ್ಕಾರಿ ಭದ್ರತೆಗಳಿಗೆ ಅನ್ವಯಿಸುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿಯ ಸಭೆಯ ಬಳಿಕ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಯುಪಿಐ ಮೂಲಕ 5 ಲಕ್ಷ ರೂ. ವರೆಗೆ ಹಣವನ್ನು ವರ್ಗಾವಣೆ ಮಾಡಬಹುದು ಎಂದು ತಿಳಿಸಿದರು. ಹಾರ ಹಣದುಬ್ಬರ ಇಳಿಕೆಯಾಗದ ಕಾರಣ ನಿರೀಕ್ಷೆಯಂತೆ ಆರ್ಬಿಐ ಸತತ ಒಂಬತ್ತನೇ ಬಾರಿಗೆ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ರೆಪೊ ದರವನ್ನು 6.5% ರಲ್ಲಿಯೇ ಕಾಯ್ದುಕೊಳ್ಳುವ ನಿರ್ಧಾರ ತೆಗೆದುಕೊಂಡಿದೆ.
ಚಿಲ್ಲರೆ ಹಣದುಬ್ಬರವನ್ನು 4% ರ ಮಿತಿಯಲ್ಲಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ರೆಪೊ ದರದಲ್ಲಿ ಬದಲಾವಣೆ ಮಾಡುತ್ತಿಲ್ಲ. ಹಣದುಬ್ಬರವು 4%ರ ಮಿತಿ ಅಥವಾ ಅದಕ್ಕಿಂತ ಕೆಳಗೆ ಇಳಿಕೆಯಾದರೆ ಮಾತ್ರ ಹಣಕಾಸು ನೀತಿಯಲ್ಲಿ ಬದಲಾವಣೆ ಮಾಡಬಹುದು ಎಂದು ಶಶಿಕಾಂತ್ ದಾಸ್ ತಿಳಿಸಿದರು.













in 






