Share this news

ಕಾರ್ಕಳ: ಕಾರ್ಕಳ ತಾಲೂಕಿನ ಮಿಯ್ಯಾರಿನಲ್ಲಿ ಸ್ಕೂಟರ್ ಗಳು ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಕೂಟರ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅ.21 ರಂದು ಕಾರ್ಕಳ ಮಿಯ್ಯಾರು ಗ್ರಾಮದ ಕೆನರಾ ಕರಕುಶಲ ತರಬೇತಿ ಸಂಸ್ಥೆಯ ಬಳಿಯ ಕಬ್ಬಿನ ಜ್ಯುಸ್‌ ಅಂಗಡಿಯ ಬಳಿ ದಾಮೋದರ (59) ಎಂಬವರ ಸ್ಕೂಟರ್ ಗೆ ಇನ್ನೊಂದು ಸ್ಕೂಟರ್‌ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದಾಮೋದರ ರವರು ಡಾಮಾರು ರಸ್ತೆಗೆ ಬಿದ್ದು ಎಡ ಕೈ ಉಂಗುರದ ಬೆರಳು ತುಂಡಾಗಿದೆ. ಗಾಯಗೊಂಡ ದಾಮೋದರ ಶೆಟ್ಟಿ ರವರನ್ನು ಚಿಕಿತ್ಸೆಗಾಗಿ ಕಾರ್ಕಳದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Leave a Reply

Your email address will not be published. Required fields are marked *