
ಕಾರ್ಕಳ, ಜೂ.02:ಕರಾಟೆಯಲ್ಲಿ ಅಪ್ರತಿಮ ಸಾಧನೆಗೈದ ನಿಟ್ಟೆಯ ಅವಳಿ ಸಹೋದರರಾದ ಅನುಷ್ ಅರುಣ್ ಕೆ. ಹಾಗೂ ಆಯುಷ್ ಅರುಣ್ ಗೆ ಯುವ ಸಾಧಕ ಬಿರುದು ನೀಡಿ ಗೌರವಿಸಲಾಯಿತು.
ಕಾರ್ಕಳ ತೆಲಿಕೆದ ತೆನಾಲಿ ತಂಡದ ವತಿಯಿಂದ ತೆಲಿಕೆದ ಸಂಭ್ರಮ-2026 ಸಮಾರೋಪ ಕಾರ್ಯಕ್ರಮದಲ್ಲಿ ಈ ಬಿರುದು ನೀಡಿ ಗೌರವಿಸಲಾಯಿತು.
ಚಿಕ್ಕ ವಯಸ್ಸಿನಲ್ಲಿಯೇ ಕರಾಟೆಯಲ್ಲಿ ಅದ್ಭುತ ಸಾಧನೆ ಮಾಡಿರುವ ನಿಟ್ಟೆಯ ಅನುಷ್ ಅರುಣ್ ಕೆ. ಹಾಗೂ ಆಯುಷ್ ಅರುಣ್ ಆಳ್ವಾಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಇವರು ನಿಟ್ಟೆಯ ಉದ್ಯಮಿ ಅರುಣ್ ಕುಮಾರ್ ನಿಟ್ಟೆ ಮತ್ತು ಸಂಗೀತಾ ದಂಪತಿಗಳ ಪುತ್ರರಾಗಿದ್ದಾರೆ.
ವೇದಿಕೆಯಲ್ಲಿ ಬಾಲಾಜಿ ಮೊಬೈಲ್ಸ್ ನ ಪ್ರಶಾಂತ್ ಶೆಣೈ, ಉದ್ಯಮಿ ಅರುಣ್ ಕುಮಾರ್ ನಿಟ್ಟೆ, ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್, ವೃಷಭರಾಜ್ ಕದಂಬ, ದಿನೇಶ್ ಪ್ರಭು ಕಲ್ಲೊಟ್ಟೆ ಉಪಸ್ಥಿತರಿದ್ದರು.



.
.
.
.
.
.
.
.
.
.
.
.
.
.
.
.
.
.
.
.
