
ನವದೆಹಲಿ,ಆ.02:ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಇತ್ತೀಚಿನ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಉಗ್ರರು ಪೊಲೀಸ್ ಸಮವಸ್ತ್ರ ಧರಿಸಿ ದಾಳಿ ನಡೆಸುವ ಸಂಚು ರೂಪಿಸಲಾಗಿತ್ತು ಎಂದು ಬಂಗಾಳ STF ಐಜಿ ಗೌರವ್ ಶರ್ಮಾ ತಿಳಿಸಿದ್ದಾರೆ. ಶಂಕಿತ ಜೈಶ್-ಎ-ಮೊಹಮ್ಮದ್ ಸಂಘಟನೆಯ ಬಂಧಿತ ಉಗ್ರ ಹಮೀಮ್ ಮಂಡಲ್ ಪೊಲೀಸರ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ್ದಾನೆ. ಈತನನ್ನು ಪಶ್ಚಿಮ ಬಂಗಾಳ ಎಸ್‌ಟಿಎಫ್ ಕಳೆದ ಗುರುವಾರ ಪೂರ್ವ ಬರ್ಧಮಾನ್‌ನ ವಸತಿ ಸಂಕೀರ್ಣದ ಜಿಮ್‌ನಲ್ಲಿ ಬಂಧಿಸಿತ್ತು. ಈತ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ, ಕುಖ್ಯಾತ ಗ್ಯಾಂಗ್‌ಸ್ಟರ್ ಶಹಜಾದ್ ಭಟ್ಟಿ ಮತ್ತು ಪುಲ್ವಾಮಾ ಉಗ್ರಾಣ ದಾಳಿಯ ಆರೋಪಿ ಸಜ್ಜದ್ ಭಟ್ ಜೊತೆ ಸಂಪರ್ಕದಲ್ಲಿದ್ದ ಎಂದು STF ಹೇಳಿದೆ.
ಇದಲ್ಲದೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸೇರಿದಂತೆ ಹಲವು ಬಿಜೆಪಿ ನಾಯಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಉಗ್ರರ ಹಿಟ್ ಲಿಸ್ಟ್ನಲ್ಲಿದ್ದರು. ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರ ಓಡಾಟದ ಮೇಲೆ ಕಣ್ಣಿಡುವುದು ಮತ್ತು ಅವರು ಭೇಟಿ ನೀಡುವ ಸ್ಥಳಗಳ ಬಗ್ಗೆ ಮಾಹಿತಿ ಕಲೆಹಾಕುವ ಜವಾಬ್ದಾರಿಯನ್ನು ಹಮೀಮ್‌ಗೆ ವಹಿಸಲಾಗಿತ್ತು ಎಂದು ವಿಚಾರಣೆಯಿಂದ ತಿಳಿದುಬಂದಿದೆ. ಬಿಜೆಪಿ ಶಾಸಕ ಮತ್ತು ಸಚಿವ ಉಮೇಶ್ ರಾಯ್ ಅವರ ಮಗನನ್ನು ಅಪಹರಿಸಿ ಕಪ್ಪ ಹಣ ವಸೂಲಿ ಮಾಡುವ ಸಂಚಿನ ವಿಚಾರವು ಕೂಡ ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಹಮೀಮ್‌ನ ಸ್ನೇಹಿತೆ ಅರ್ಪಿತಾ ಸಾರ್ಕರ್ ಬಂಧನ:
ಶಂಕಿತ ಉಗ್ರ ಹಮೀಮ್‌ನ ಗೆಳತಿ ಅರ್ಪಿತಾ ಸಾರ್ಕರ್‌ನನ್ನು ಜಾರ್ಖಂಡ್‌ನ ಸಾಹಿಬ್‌ಗಂಜ್‌ನಿAದ ಸ್ಪೆಷಲ್ ಟಾಸ್ಕ್ ಫೋರ್ಸ್ ಬಂಧಿಸಿದೆ. STF ಪ್ರಕಾರ, ಅರ್ಪಿತಾ ಶಂಕಿತ ಭಯೋತ್ಪಾದಕ ಮಾಡ್ಯೂಲ್‌ನ ಸಕ್ರಿಯ ಸದಸ್ಯೆಯಾಗಿದ್ದಾಳೆ. ಜಾರ್ಖಂಡ್‌ನ BSK ಕಾಲೇಜಿನಲ್ಲಿ ಇಂಗ್ಲಿಷ್ ಆನರ್ಸ್ ವಿದ್ಯಾರ್ಥಿನಿಯಾಗಿರುವ ಅರ್ಪಿತಾಳ ತಂದೆ ಸ್ಟೇಷನರಿ ಅಂಗಡಿ ನಡೆಸುತ್ತಿದ್ದಾರೆ. ತಾಯಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದು, ಸುಮಾರು ನಾಲ್ಕು ವರ್ಷಗಳ ಹಿಂದೆ ನಿಧನರಾಗಿದ್ದಾರೆ.
ವಿದ್ಯಾರ್ಥಿನಿಯಾಗಿದ್ದ ಅರ್ಪಿತಾ ಸಾರ್ಕರ್ ಸಾಮಾಜಿಕ ಜಾಲತಾಣಗಳ ಮೂಲಕ ಸುಮಾರು ನಾಲ್ಕು ವರ್ಷಗಳ ಹಿಂದೆ ಹಮೀಮ್‌ನ ಸಂಪರ್ಕಕ್ಕೆ ಅರ್ಪಿತಾ ಬಂದಿದ್ದಳು. ಉದ್ಯಮಿಗಳು, ಅಧಿಕಾರಿಗಳನ್ನು ಹನಿ-ಟ್ರಾಪ್ ಮಾಡಲು ಯತ್ನಿಸುವುದು, ಮೊಬೈಲ್ ಫೋನ್ ಸಂಖ್ಯೆಗಳನ್ನು ಸಂಗ್ರಹಿಸುವುದು, ವ್ಯಕ್ತಿಗಳು ಮತ್ತು ಮನೆಗಳ ಫೋಟೋಗಳನ್ನು ಕಲೆಹಾಕುವುದು ಸೇರಿದಂತೆ ಹಮೀಮ್ ಸೂಚನೆ ಮೇರೆಗೆ ವಿವಿಧ ಚಟುವಟಿಕೆಗಳಲ್ಲಿ ಆಕೆ ಸಹಾಯ ಮಾಡುತ್ತಿದ್ದಳು ಎಂದು ಆರೋಪಿಸಲಾಗಿದೆ.ಹಮೀಮ್ ಮತ್ತು ಅರ್ಪಿತಾ ನಡುವೆ ವಿನಿಮಯವಾದ ಹಲವಾರು ವಾಟ್ಸಾಪ್ ಚಾಟ್‌ಗಳು ಈ ಜಾಲದ ಬಗ್ಗೆ ಪ್ರಮುಖ ಮಾಹಿತಿಯನ್ನು ತನಿಖಾಧಿಕಾರಿಗಳಿಗೆ ಒದಗಿಸಿವೆ. ಸಾಮಾನ್ಯ ಫೋನ್ ಕರೆಗಳನ್ನು ಬಳಸುವ ಬದಲು, ಇವರಿಬ್ಬರು ಡಾರ್ಕ್ ವೆಬ್ ಹಾಗೂ ವಿಶೇಷ ಎನ್‌ಕ್ರಿಪ್ಟ್ ಮಾಡಿದ ಮೊಬೈಲ್ ಅಪ್ಲಿಕೇಶನ್ ಮೂಲಕ ಸಂವಹನ ನಡೆಸುತ್ತಿದ್ದರು ಎಂದು ಎಸ್‌ಟಿಎಫ್ ಆರೋಪಿಸಿದೆ.
ಬರ್ಧಮಾನ್‌ಗೆ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಅರ್ಪಿತಾಳನ್ನು 14 ದಿನಗಳ ಪೊಲೀಸ್ ವಶಕ್ಕೆ ನೀಡಲಾಗಿದೆ. ಈಗ ತನಿಖಾಧಿಕಾರಿಗಳು ಹಮೀಮ್ ಮತ್ತು ಅರ್ಪಿತಾರನ್ನು ಮುಖಾಮುಖಿ ವಿಚಾರಣೆ ನಡೆಸಲಿದ್ದಾರೆ.ಪಾಕಿಸ್ತಾನ ಮೂಲದ ಭಯೋತ್ಪಾದಕ ಜಾಲದೊಂದಿಗೆ ಅರ್ಪಿತಾಗೆ ನೇರ ನಂಟಿದೆ ಎಂಬುದಕ್ಕೆ ಸೂಚನೆಗಳಿವೆ ಎಂದು STF ತಿಳಿಸಿದೆ. ಹಮೀಮ್ ಮತ್ತು ಅರ್ಪಿತಾ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಯಾವ ವಿದೇಶಿ ಹ್ಯಾಂಡ್ಲರ್‌ಗಳೊAದಿಗೆ ಸಂಪರ್ಕದಲ್ಲಿದ್ದರು ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಅಲ್ಲದೆ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ಗೆ ಶಂಕಿತ ನಿಧಿ ಹೇಗೆ ಹರಿದುಬಂದಿದೆ ಎಂಬುದರ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.




.
.
.
.
.
.
.
.
.
.
.
.
.
.
.
.
.
.
.
.
