Author: karavalinews

ಬೆಂಗಳೂರು ಕಾಲ್ತುಳಿತ ಪ್ರಕರಣದಲ್ಲಿ ಸಿಎಂ ,ಡಿಸಿಎಂ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗಿಲ್ಲ: ಕಾಂಗ್ರೆಸ್ ವಕ್ತಾರ ಬಿಪಿನ್‌ಚಂದ್ರ ಪಾಲ್

ಉಡುಪಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನಿರೀಕ್ಷಿತ ಕಾಲ್ತುಳಿತದಿಂದ 11 ಜನ ಸಾವನ್ನಪ್ಪಿದ ಘಟನೆ ನಿಜಕ್ಕೂ ಆಘಾತಕಾರಿಯಾಗಿದೆ. ಆದರೆ ಪ್ರತಿಪಕ್ಷ ಬಿಜೆಪಿ ಇದನ್ನೇ ಅಸ್ತ್ರವಾಗಿ ಬಳಸಿಕೊಂಡು ಸಿಎಂ, ಡಿಸಿಎಂ ಮತ್ತು ಗೃಹಸಚಿವರ ರಾಜೀನಾಮೆ ಕೇಳುವ ಮೂಲಕ ಸಾವಿನಲ್ಲೂ ರಾಜಕೀಯ ಮಾಡುತ್ತಿದೆ ಎಂದು ಉಡುಪಿ ಜಿಲ್ಲಾ…

ಹೆಬ್ರಿ: ಬೆಂಕಿ ತಗುಲಿ ವ್ಯಕ್ತಿ ಸಾವು ಪ್ರಕರಣಕ್ಕೆ ಸ್ಪೋಟಕ ತಿರುವು:ಅಕ್ರಮವಾಗಿ ಸಿಲಿಂಡರ್ ರಿಫಿಲ್ ಮಾಡುವಾಗ ಬೆಂಕಿ ಹೊತ್ತಿಕೊಂಡು ಸಾವು: ಗಂಡನ ಸಾವಿನ ರಹಸ್ಯ ಬಿಚ್ಚಿಟ್ಟ ಪತ್ನಿ: ಗ್ಯಾಸ್ ರಿಫಿಲ್ಲಿಂಗ್ ದಂಧೆ ನಡೆಸುತ್ತಿದ್ದ ಅತ್ತೆ,ಮಾವನ ವಿರುದ್ಧ ಆರೋಪ

ಹೆಬ್ರಿ: ವ್ಯಕ್ತಿಯೊಬ್ಬರು ಬೆಂಕಿ ತಗುಲಿ ಸುಟ್ಟ ಗಾಯಗಳೊಂದಿಗೆ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆಯ ಕುರಿತು ಇದೀಗ ಸ್ಪೋಟಕ ಸಂಗತಿ ಬಯಲಾಗಿದೆ. ಮೃತಪಟ್ಟ ವ್ಯಕ್ತಿಯ ಪತ್ನಿ ಬೆಂಕಿಯ ರಹಸ್ಯ ಬಾಯಿ ಬಿಟ್ಟಿದ್ದು,ಗ್ಯಾಸ್ ರಿಫಿಲ್ಲಿಂಗ್ ಸಂದರ್ಭದಲ್ಲಿ…

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್‌ಐಎ ಗೆ ವಹಿಸಿ ಕೇಂದ್ರ ಗೃಹಸಚಿವಾಲಯ ಆದೇಶ

ಮಂಗಳೂರು: ಮಂಗಳೂರಿನ ಬಜ್ಪೆಯಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ಕ್ಕೆ ವಹಿಸಿ ಕೇಂದ್ರ ಗೃಹಸಚಿವಾಲಯ ಆದೇಶ ಹೊರಡಿಸಿದೆ. ಬಿಜೆಪಿ ನಾಯಕರು ಮತ್ತು ಹಿಂದೂ ಕಾರ್ಯಕರ್ತರು ಎನ್‌ಐಎ ತನಿಖೆಗೆ ಆಗ್ರಹಿಸಿದ್ದರು. ಪ್ರಕರಣದಲ್ಲಿ ಭಾರಿ…

ನಕ್ರೆ ಪರಪು ತೋಡಿಗೆ ಬಿದ್ದು ಬಿಜೆಪಿ ಕಾರ್ಯಕರ್ತ ದಾರುಣ ಸಾವು; ಹುಟ್ಟು ಹಬ್ಬದ ಆಚರಣೆಗೆ ಕೇಕ್ ತರುತ್ತಿದ್ದಾಗ ದುರ್ಘಟನೆ

ಕಾರ್ಕಳ : ತನ್ನದೇ ಹುಟ್ಟಿದ ದಿನದ ಆಚರಣೆ ಸಲುವಾಗಿ ಕೇಕ್ ತರಲೆಂದು ಪೇಟೆಗೆ ಹೋಗಿ ವಾಪಾಸು ಮನೆಗೆ ಮರಳುತ್ತಿದ್ದಾಗ ಸ್ಕೂಟರ್ ಸ್ಕಿಡ್ಡಾಗಿ ನೀರು ಹರಿಯುತ್ತಿದ್ದ ತೋಡಿಗೆ ಬಿದ್ದು ಮೃತಪಟ್ಟ ಘಟನೆ ಕಾರ್ಕಳ ತಾಲೂಕು ಕಚೇರಿ ಸಮೀಪದ ಪರಪು ಸೇತುವೆಯ ಬಳಿ ಶನಿವಾರ…

ಯುವಕರಿಬ್ಬರ ಜತೆ ಪತ್ನಿಯ ಅಕ್ರಮ ಸಂಬಂಧ: ಪರಸಂಗಕ್ಕೆ ಅಡ್ಡಿಯಾದ ಗಂಡ,ಮಕ್ಕಳಿಗೆ ವಿಷ ಹಾಕಿ ಕೊಲ್ಲಲು ಯತ್ನಿಸಿದ ಪತ್ನಿ ಅರೆಸ್ಟ್: ಹಾಸನದಲ್ಲೊಂದು ಭಯಾನಕ ಸಂಚು ಬಯಲು

ಹಾಸನ: ತನ್ನ ಅಕ್ರಮ‌ ಸಂಬಂಧಕ್ಕೆ ಅಡ್ಡಿಯಾಗುತ್ತಾರೆ ಎಂದು ಸಿಟ್ಟಿನಿಂದ ತನ್ನ ಗಂಡ‌, ಮಕ್ಕಳು, ಅತ್ತೆ ಮತ್ತು ಮಾವನಿಗೆ ಸೊಸೆ ಅನ್ನದಲ್ಲಿ ವಿಷ ಹಾಕಿ ಕೊಲ್ಲಲು ಯತ್ನಿಸಿದ ಭಯಾನಕ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಕೆರಳೂರು ಗ್ರಾಮದಲ್ಲಿ ನಡೆದಿದೆ. ವಿಷ ಹಾಕಿದ್ದ…

ಸಿಎಂ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಸೇರಿ ನಾಲ್ವರು ವಿಧಾನ ಪರಿಷತ್ತಿಗೆ ನಾಮನಿರ್ದೇಶನ

ಬೆಂಗಳೂರು: ಚಿಂತಕರ ಛಾವಡಿ ಎಂದೇ ಕರೆಸಿಕೊಳ್ಳುವ ವಿಧಾನ ಪರಿಷತ್ತಿಗೆ ಸಿಎಂ ಸಿದ್ದರಾಮಯ್ಯನವರ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಸೇರಿ ಪಕ್ಷದ ನಾಲ್ವರನ್ನು ಸಕಾರ ನಾಮನಿರ್ದೇಶನ ಮಾಡಿದೆ. ಉಡುಪಿ ಜಿಲ್ಲೆಯ ದಿನೇಶ್ ಅಮೀನ್ ಮಟ್ಟು,ಎನ್‌ಆರ್‌ಐ ಫೋರಂ ಉಪಾಧ್ಯಕ್ಷೆ ಆರತಿ ಕೃಷ್ಣ,…

ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಸಿಬ್ಬಂದಿಯಿಂದ ಹಣ ದುರ್ಬಳಕೆ: ದೂರು ದಾಖಲು

ಹೆಬ್ರಿ: ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಸಿಬ್ಬಂದಿಯಿಂದ ಹಣ ದುರ್ಬಳಕೆ ಆಗಿದೆ ಎಂದು ಆರೋಪಿಸಿ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಸಿಬ್ಬಂದಿಯಾದ ಶಂಕರ ರವರು ಸದ್ರಿ ಸಂಘದ 88150/- ರೂ. ಹಣವನ್ನು…

ಕುಂದಾಪುರ: ದಾರಿ ತಪ್ಪಿ ನಾಡಿಗೆ ಬಂದಿದ್ದ ಗಜರಾಜ ಮರಳಿ ಕಾಡಿಗೆ

ಕುಂದಾಪು: ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಂಗಡಿ, ಸಿದ್ದಾಪುರ, ಕಮಲಶಿಲೆ ಭಾಗದಲ್ಲಿ ಆತಂಕ ಹುಟ್ಟಿಸಿದ್ದ ಎಂಟ್ರಿ ಒಂಟಿ ಸಲಗ ಕೊನೆಗೂ ಸೆರೆ ಸಿಕ್ಕಿದೆ. ಎರಡು ದಿನಗಳ ಕಾಲ ಕಣ್ಣಿಗೆ ನಿದ್ದೆ ಬಿಟ್ಟು ಕಾರ್ಯಾಚರಣೆ ನಡೆಸಿದ್ದ ವಲಯ ಅರಣ್ಯ ಅಧಿಕಾರಿಗಳ ಶ್ರಮಕ್ಕೆ ಕೊನೆಗೂ ಫಲಸಿಕ್ಕಿದೆ.…

ಹೆಬ್ರಿ: ಅಮೃತಭಾರತಿ  ಶಿಕ್ಷಣ ಸಂಸ್ಥೆಯಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ

ಹೆಬ್ರಿ: ಪಿ ಆರ್ ಎನ್ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಅಕ್ಷರಾಭ್ಯಾಸವನ್ನು ಪೋಷಕರು ಅಕ್ಕಿ ಧಾನ್ಯದಲ್ಲಿ ಅರಸಿನ ಕೋಡು ಬಳಸಿ ಮಕ್ಕಳಿಗೆ ನೆರವೇರಿಸಿದರು. ವಿದ್ಯಾಧಿದೇವತೆಯಾದ ಸರಸ್ವತಿ ಪೂಜೆಯನ್ನು ಸಂಸ್ಥೆಯ ಸಂಸ್ಕೃತ ಶಿಕ್ಷಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ನೆರವೇರಿಸಿ ಮಾತನಾಡಿ…

ಯೋಗೀಶ್ ಗೌಡರ್ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನಿನ ಮೇಲೆ ಆಚೆ ಬಂದಿರುವ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಮತ್ತೆ ಸಂಕಷ್ಟ ಎದುರಾಗಿದೆ. ಸಿಬಿಐ ಮನವಿಯನ್ನು ಪುರಸ್ಕರಿಸಿರುವ ಸುಪ್ರೀಂಕೋರ್ಟ್​ ವಿನಯ್ ಕುಲಕರ್ಣಿ ಜಾಮೀನು ರದ್ದುಗೊಳಿಸಿ ಆದೇಶ ಹೊರಡಿಸಿದೆ.…