Author: karavalinews

ಕಾರ್ಕಳದ ಕಾಂಗ್ರೆಸ್ ಬಿಜೆಪಿ ನಾಯಕರೇ ರಸ್ತೆ ಗುಂಡಿ ವಿಚಾರದಲ್ಲಿ ರಾಜಕೀಯ ಲಾಭನಷ್ಟದ ಲೆಕ್ಕಾಚಾರ ಬಿಡಿ: ಮೊದಲು ಗುಂಡಿಬಿದ್ದ ರಸ್ತೆ ಸರಿ ಮಾಡಿ: ನಿಮ್ಮ ಕೆಸರೆರಚಾಟಕ್ಕೆ ಜನ ಕೆಸರು ನೀರಿನ ಅಭಿಷೇಕ ಮಾಡಿಸಿಕೊಳ್ಳಬೇಕೇ?

ಕರಾವಳಿನ್ಯೂಸ್ ವಿಶೇಷ ವರದಿ ಈ ಬಾರಿ ಮಂಗಾರು ಮಳೆ ತಡವಾದರೂ ಭರ್ಜರಿ ಎಂಟ್ರಿ ಕೊಟ್ಟಿದ್ದು, ಮಳೆಯಿಂದಾಗಿ ಪ್ರಮುಖವಾಗಿ ಕಾರ್ಕಳದ ನಗರದ ರಸ್ತೆಗಳು ಈಗಾಗಲೇ ಗುಂಡಿಬಿದ್ದು ವಾಹನ ಸವಾರರಿಗೆ ಸಂಚಾರವೇ ಸವಾಲಾಗಿ ಪರಿಣಮಿಸಿದೆ. ಹದಗೆಟ್ಟ ರಸ್ತೆಗಳ ದುರವಸ್ಥೆ ವಿರುದ್ಧ ಜನರು ಪ್ರತಿಭಟನೆ ನಡೆಸುತ್ತಿದ್ದು…

ರಾಮಮಂದಿರ ಕಾಣಿಕೆ ಹಣ ದುರುಪಯೋಗ ಪ್ರಕರಣ: 70 ಬಾರಿ ಕಳ್ಳತನ ನಡೆದಿರುವುದು ಎಸ್‌ಐಟಿ ಪ್ರಾಥಮಿಕ ತನಿಖೆಯಲ್ಲಿ ದೃಢ

ಲಕ್ನೋ, ಜು.07: ಅಯೋಧ್ಯೆಯ ಶ್ರೀರಾಮ ಮಂದಿರದ ಕಾಣಿಕೆ ದುರುಪಯೋಗ ಮತ್ತು ಕಳ್ಳತನದ ಪ್ರಕರಣದ ಕುರಿತಂತೆ ವಿಶೇಷ ತನಿಖಾ ತಂಡ ನಡೆಸಿರುವ ಪ್ರಾಥಮಿಕ ತನಿಖೆಯಲ್ಲಿ ಭಾರಿ ಅಕ್ರಮಗಳು ನಡೆದಿರುವುದು ದೃಢಪಟ್ಟಿದ್ದು, ಒಟ್ಟು 70 ಬಾರಿ ಕಳ್ಳತನ ನಡೆದಿರುವುದು ಬಯಲಾಗಿದೆ. ದೇವಸ್ಥಾನಕ್ಕೆ ಬಂದ ಭಕ್ತರ…

ಹೆಬ್ರಿ: ನಾರಾವಿಯಲ್ಲಿ ಕೆಲಸಕ್ಕೆ ಹೋಗಿದ್ದ ವ್ಯಕ್ತಿ ನಾಪತ್ತೆ

ಹೆಬ್ರಿ,ಜು.07: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಹ್ಮಾವರ ನಾಲ್ಕೂರಿನ ಉಮೇಶ್ ಅವರೊಂದಿಗೆ ಕೆಲಸ ಮಾಡುತ್ತಿದ್ದ ಪ್ರಭಾಕರ ಶೆಟ್ಟಿ (45) ಎಂಬವರು ನಾಪತ್ತೆಯಾಗಿದ್ದಾರೆ. ಪ್ರಭಾಕರ ಅವರು ಜು.05 ರಂದು ನಾರಾವಿ ಅರಸಿಕಟ್ಟೆ ರವಿರಾಜ ಜೈನ್ ಎಂಬವರ ಮನೆಗೆ ರೊಟ್ಟಿ ಮಾಡುವ ಕೆಲಸಕ್ಕೆ ಹೋದವರು…

ಕಾರ್ಕಳ: ಟಿಪ್ಪರ್ ಡಿವೈಡರ್ ಗೆ ಡಿಕ್ಕಿಯಾಗಿ ಇಬ್ಬರಿಗೆ ಗಾಯ

ಕಾರ್ಕಳ, ಜು.07: ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಪುಲ್ಕೇರಿ ಬೈಪಾಸ್ ಬಳಿ ಡಿವೈಡರ್ ಗೆ ಟಿಪ್ಪರ್ ಡಿಕ್ಕಿಯಾಗಿ ಇಬ್ಬರು ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ. ಕಾರ್ಕಳ ಕಡೆಯಿಂದ ಬೆಳುವಾಯಿ ಮಾರ್ಗವಾಗಿ ಮೂಡಬಿದ್ರೆಗೆ ಹೋಗುತ್ತಿದ್ದ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ…

ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ರೈಟ್ ಟ್ಯಾಕ್ಸ್ ಮೇಟ್ ಇಂಡಿಯಾ (ಪ್ರೈ.ಲಿ) ವತಿಯಿಂದ ವಿದ್ಯಾರ್ಥಿವೇತನ ವಿತರಣೆ

ಕಾರ್ಕಳ, ಜು. 06: ರೈಟ್ ಟ್ಯಾಕ್ಸ್ ಮೇಟ್ ಇಂಡಿಯಾ ( ಪ್ರೈ) ಲಿಮಿಟೆಡ್ ಇದರ ಪ್ರಾಯೋಜಕತ್ವದಲ್ಲಿ ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ಸಹಭಾಗಿತ್ವದಲ್ಲಿ SSLC ಮತ್ತು ದ್ವಿತೀಯ PUC ಅಂತಿಮ ಪರೀಕ್ಷೆಯಲ್ಲಿ ಶೇಕಡ 90 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ…

ಬೆಳ್ಮಣ್ ವಲಯ ಬಂಟರ ಯಾನೆ ನಾಡವರ ಸಂಘದ ನೂತನ ನಿವೇಶನ ಅನಾವರಣ

ಕಾರ್ಕಳ, ಜು.05:ಬೋಳ ಹಾಗೂ ಬೆಳ್ಮಣ್ ಭಾಗದ ದೇವಸ್ಥಾನಗಳ ಅಭಿವೃದ್ಧಿಯಲ್ಲಿ ಬಂಟ ಸಮುದಾಯದ ಪ್ರಮುಖ ಪಾತ್ರವಿದ್ದು ಇದೀಗ ಇಲ್ಲಿನ ಬಂಟರ ಒಗ್ಗಟ್ಟಿನ ಪ್ರತೀಕವಾಗಿ ನಿರ್ಮಾಣಗೊಳ್ಳಲಿರುವ ಬಂಟರ ಸಂಘದ ನಿವೇಶನದ ಅನಾವರಣ ನಡೆಯುತ್ತಿರುವುದು ಪ್ರಶಂಸನೀಯ ಎಂದು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ…

ನಿಟ್ಟೆಯಲ್ಲಿ ಹವಾಮಾನ ಮತ್ತು ವಾಯು ಗುಣಮಟ್ಟ ಮೊನಿಟರಿಂಗ್ ಕೇಂದ್ರಕ್ಕೆ ಚಾಲನೆ

ಕಾರ್ಕಳ,ಜು.05: ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಹವಾಮಾನ ಮತ್ತು ವಾಯು ಗುಣಮಟ್ಟ ಮೊನಿಟರಿಂಗ್ ಕೇಂದ್ರವನ್ನು ಜುಲೈ 3ರಂದು ನಿಟ್ಟೆ ತಾಂತ್ರಿಕ ಕಾಲೇಜಿನ ಕ್ಯಾಂಪಸ್ ನಲ್ಲಿ ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು Wrkwrk, 99Games ಹಾಗೂ Robosoft ಸಂಸ್ಥೆಗಳ…

ಕಾರ್ಕಳ: ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಗೆ ನಾಮನಿರ್ದೇಶಿತ ಸದಸ್ಯರ ಆಯ್ಕೆ ರದ್ದುಪಡಿಸಬೇಕು: ಶಾಸಕ ಸುನಿಲ್ ಕುಮಾರ್ ಆಗ್ರಹ

ಕಾರ್ಕಳ,ಜು.05 :ದಲಿತ ಸಮುದಾಯದ ಸಬಲೀಕರಣಕ್ಕಾಗಿ ಕಾರ್ಕಳ ತಾಲೂಕಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗಬೇಕೆಂಬ ದಶಕಗಳ ಬೇಡಿಕೆ ಹಿನ್ನೆಲೆಯಲ್ಲಿ ನಮ್ಮೆಲ್ಲರ ಪ್ರಯತ್ನದಿಂದ ಸುಸಜ್ಜಿತ ಭವನ ನಿರ್ಮಾಣವಾಗಿದೆ. ಆದರೆ, ಭವನದ ನಿರ್ವಹಣೆ ಮತ್ತು ಮೇಲ್ವಿಚಾರಣಾ ಸಮಿತಿಯ ರಚನೆ ವಿಚಾರದಲ್ಲಿ ಸರ್ಕಾರ ದಲಿತರನ್ನು ವಿಶ್ವಾಸಕ್ಕೆ ಪಡೆಯದೇ ಏಕಪಕ್ಷೀಯವಾಗಿ…

ಕಾರ್ಕಳ ಶಾಸಕರ ವಿಕಾಸ ಕಚೇರಿಯಲ್ಲಿ “ವಿಕಾಸ ಉದ್ಯೋಗ ಸೇತು” ಓರಿಯಂಟೇಶನ್ ಕಾರ್ಯಾಗಾರ:  ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಾಗ ಜೀವನದಲ್ಲಿ ಯಶಸ್ಸು ಸಾಧ್ಯ: ಶಾಸಕ ವಿ. ಸುನಿಲ್ ಕುಮಾರ್

ಕಾರ್ಕಳ,ಜು.06: ಸಿಕ್ಕ ಅವಕಾಶಗಳನ್ನು ಶ್ರದ್ಧೆ ಪ್ರಾಮಾಣಿಕತೆಯಿಂದ ನಿಭಾಯಿಸಿದಾಗ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು. ಅವರು ಜು. 06 ರಂದು ವಿಕಾಸ ಸೇವಾ ಸಂಸ್ಥೆಯ ವತಿಯಿಂದ ಕಾರ್ಕಳದ ವಿಕಾಸ ಕಚೇರಿಯಲ್ಲಿ ಆಯೋಜಿಸಿದ್ದ “ವಿಕಾಸ ಉದ್ಯೋಗ ಸೇತು”…

ಅಜೆಕಾರು ಮಹಾದೇವಿ ಮಹಿಳಾ ಭಜನಾ ಮಂಡಳಿ ಸದಸ್ಯೆಯರಿಗೆ ಕಾನೂನು ಮಾಹಿತಿ ಶಿಬಿರ

ಕಾರ್ಕಳ, , ಜು.5: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.), ದಕ್ಷಿಣ ಕನ್ನಡ–ಉಡುಪಿ ಜಿಲ್ಲೆ, ಕಾರ್ಕಳ ವಲಯದ ವತಿಯಿಂದ ಅಜೆಕಾರು ಕೈಕಂಬದ ಶ್ರೀ ಮಹಾದೇವಿ ಭಜನಾ ಮಂಡಳಿ (ರಿ.) ಮಹಿಳಾ ಸದಸ್ಯರಿಗಾಗಿ ಕಾನೂನು ಮಾಹಿತಿ ಶಿಬಿರ…