Category: ಸ್ಥಳೀಯ ಸುದ್ದಿಗಳು

ಅಜೆಕಾರು: ದೆಪ್ಪುತ್ತೆ–ಕಡ್ತಲ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 2 ಕೋಟಿ ಅನುದಾನ ಬಿಡುಗಡೆ : ಅಜೆಕಾರು ಕಾಂಗ್ರೆಸ್ ಗ್ರಾಮ ಸಮಿತಿ ಹರ್ಷ : ಬಿಜೆಪಿಯವರು ರಾಜಕೀಯ ಬಿಟ್ಟು ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಲಿ: ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ

ಕಾರ್ಕಳ,ಡಿ.02: ಕಳೆದ ಎರಡು ದಶಕದಿಂದ ಡಾಮರೀಕರಣವಾಗದೇ ನೆನೆಗುದಿಗೆ ಬಿದ್ದಿದ್ದ ಕಾರ್ಕಳ ತಾಲೂಕಿನ ಅಜೆಕಾರು–ದೆಪ್ಪುತ್ತೆ–ಕಡ್ತಲ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರ 2 ಕೋ.ರೂ ಅನುದಾನ ಬಿಡುಗಡೆಗೊಳಿಸಿದ್ದು, ಈ ಪರಿಸರದ ಜನರ ಮನವಿಗೆ ನಮ್ಮ ಕಾಂಗ್ರೆಸ್ ಸರ್ಕಾರ ಸ್ಪಂದಿಸಿದೆ ಎಂದು ಕಾಂಗ್ರೆಸ್ ಮುಖಂಡ…

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಹೆಬ್ರಿ ಅಮೃತ ಭಾರತಿ ವಿದ್ಯಾಲಯಕ್ಕೆ ಹಲವು ಬಹುಮಾನ

ಹೆಬ್ರಿ: ಶಾಲಾ ಶಿಕ್ಷಣ ಇಲಾಖೆ ಕಾರ್ಕಳ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕಾರ್ಕಳ ಇವರು ನಡೆಸಿದ 2025-26 ಸಾಲಿನ ಹೆಬ್ರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿವಿಧ…

ನಿಟ್ಟೆ: ಪತಿ- ಪತ್ನಿ ಜಗಳ- ಪತ್ನಿಗೆ ಹಲ್ಲೆ ನಡೆಸಿ ಪತಿ ಆತ್ಮಹತ್ಯೆ

ಕಾರ್ಕಳ: ತಾಲೂಕಿನ ನಿಟ್ಟೆ ಯಲ್ಲಿ ಪತಿ ಹಾಗೂ ಪತ್ನಿ ನಡುವೆ ಜಗಳ ನಡೆದು, ಪತ್ನಿಗೆ ಹಲ್ಲೆ ನಡೆಸಿದ ಬಳಿಕ ಪತಿ ನೇಣಿಗೆ ಶರಣಾಗಿದ್ದಾರೆ. ಡಿ.1 ರಂದು ನಿಟ್ಟೆಯ ಸಾಯಿಕಿರಣ್ ಅವರು ಸ್ನೇಹಿತನ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದಾಗ ಅವರ ಮನೆಗೆ ಪೋಸ್ಟ್ ಕೊಡಲು…

ಮಹಿಳಾ ಕಬಡ್ಡಿ ವಿಶ್ವಕಪ್ ಗೆದ್ದ ತಂಡದ ಕ್ರೀಡಾಪಟು ಕು.ಧನಲಕ್ಷ್ಮೀ ಅವರಿಗೆ ಶಾಸಕ ಸುನಿಲ್ ಕುಮಾರ್ ಸನ್ಮಾನ

ಕಾರ್ಕಳ, ಡಿ.01:ಬಾಂಗ್ಲಾದೇಶದಲ್ಲಿ ನಡೆದ ಮಹಿಳಾ‌ ಕಬ್ಬಡಿ ವಿಶ್ವಕಪ್ ಪಂದ್ಯಾಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ನಮ್ಮ ನಾಡಿನ ಹೆಮ್ಮೆಯ ಪ್ರತಿಭೆ ಮೂಲತಃ ಕಾರ್ಕಳ ಮಿಯ್ಯಾರು ಗ್ರಾಮದವರಾಗಿರುವ ಪ್ರಸ್ತುತ ಸುರತ್ಕಲ್ ಗುಡ್ಡೆಕೊಪ್ಪದ‌ ನಿವಾಸಿಯಾಗಿರುವ ನಾರಾಯಣ ಪೂಜಾರಿ ಮತ್ತು ಶಶಿಕಲಾ ದಂಪತಿಗಳ…

ಕಾರ್ಕಳ: “ಕರುನಾಡ ಸಿರಿ” ಪ್ರಶಸ್ತಿಗೆ ಅರ್ಜಿ ಆಹ್ವಾನ

ಕಾರ್ಕಳ,ಡಿ.1: ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೊಡಮಾಡಲ್ಪಡುವ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಇವರ ಪ್ರಾಯೋಜಕತ್ವದಲ್ಲಿ ಕಾರ್ಕಳ ತಾಲೂಕಿನ ಉತ್ತಮ ಕನ್ನಡ ಮಾಧ್ಯಮ ಶಾಲೆಯನ್ನು ಆಯ್ಕೆ ಮಾಡಿ “ಕರುನಾಡ ಸಿರಿ-2025” ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ…

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶಾಸಕ ಸುನಿಲ್ ಕುಮಾರ್ ನಿವಾಸಕ್ಕೆ ಭೇಟಿ

ಕಾರ್ಕಳ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ಅವರು ರವಿವಾರ ಬೆಳಗ್ಗೆ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಶೃಂಗೇರಿಗೆ ಆಗಮಿಸಿದ್ದ ಕೇಂದ್ರ ಸಚಿವರು, ಬಳಿಕ ಅಲ್ಲಿಂದ ಕಾರ್ಕಳ ಶಾಸಕರ ನಿವಾಸಕ್ಕೆ ಆಗಮಿಸಿದರು. ಶಾಸಕರ ಕುಟುಂಬದವರು…

ಮುನಿಯಾಲು ಪಬ್ಲಿಕ್ ಸ್ಕೂಲ್ ನ ವಾರ್ಷಿಕೋತ್ಸವ- ನೂತನ ಸಭಾಂಗಣಕ್ಕೆ ಶಾಸಕರ ನಿಧಿಯಿಂದ ರೂ. 25 ಲಕ್ಷ ಅನುದಾನ- ಶಾಸಕ ವಿ. ಸುನಿಲ್ ಕುಮಾರ್ ಘೋಷಣೆ

ಹೆಬ್ರಿ: ಮುನಿಯಾಲಿನ ಕೆ. ಪಿ. ಎಸ್ ಶಾಲೆಯ ಪದವಿ ಪೂರ್ವ ವಿಭಾಗದ ವಾರ್ಷಿಕೋತ್ಸವ ಸಮಾರಂಭವು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪದ್ಮಾವತಿ ಕಲಾಮಂದಿರದಲ್ಲಿ ನೆರವೇರಿತು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ವಿ ಸುನಿಲ್ ಕುಮಾರ್ ಮಾತನಾಡಿ, ತಾಲೂಕಿನ ಸುಸಜ್ಜಿತ ಸರಕಾರಿ ಶಾಲೆಗಳಲ್ಲಿ…

ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ವಿವೇಕ ಜಾಗೃತಿ ಉಪನ್ಯಾಸ

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು, ಮಂಗಳೂರಿನ ರಾಮಕೃಷ್ಣ ಮಿಷನ್ ಸಹಯೋಗದೊಂದಿಗೆ ನವೆಂಬರ್ 26 ರಂದು “ಲೀಡ್ ಫ್ರಮ್ ವಿದಿನ್: ಟ್ರಾನ್ಸ್ಫಾರ್ಮಿಂಗ್ ಸೆಲ್ಫ್ ಬಿಫೋರ್ ಟ್ರಾನ್ಸ್ಫಾರ್ಮಿಂಗ್ ಸೊಸೈಟಿ” ಎಂಬ ವಿಷಯದ ಬಗೆಗೆ ವಿವೇಕ ಜಾಗೃತಿ ಉಪನ್ಯಾಸ ಸರಣಿಯ ಅಧಿವೇಶನವನ್ನು…

ಕುಕ್ಕುಂದೂರು: ಕಳ್ಳತನದ ಆರೋಪ- ಯುವಕನಿಗೆ ತಂಡದಿಂದ ಹಲ್ಲೆ

ಕಾರ್ಕಳ: ತಾಲೂಕಿನ ಕುಕ್ಕುಂದೂರು ಗ್ರಾಮದ ಪೊಸನೊಟ್ಟು ಎಂಬಲ್ಲಿ ಯುವಕನಿಗೆ ಕಳ್ಳತನದ ಆರೋಪ ಮಾಡಿ ನಾಲ್ಕು ಜನರ ತಂಡ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ಯುವಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ನ.23 ರಂದು ಮುಂಜಾನೆ ಕುಕ್ಕುಂದೂರು ಪೊಸನೊಟ್ಟುವಿನ ಸುರೇಶ್ (28ವ) ಎಂಬವರ ಮನೆ ಬಳಿ ಬಂದ…

ಕೃಷ್ಣನೂರು ಉಡುಪಿಗೆ ಇಂದು ಮೋದಿ ಭೇಟಿ: ಲಕ್ಷಕಂಠ ಗೀತಾ ಪಾರಾಯಣದಲ್ಲಿ ಭಾಗಿ

ಉಡುಪಿ, ನ.28: ಎರಡು ದಿನ ಹಿಂದಷ್ಟೇ ಅಯೋಧ್ಯೆಯ ರಾಮ ಮಂದಿರದಲ್ಲಿ ಧರ್ಮ ಧ್ವಜ ಸ್ಥಾಪಿಸಿದ್ದ ಪ್ರಧಾನಿ ಮೋದಿ ಇಂದು ಕೃಷ್ಣನೂರು ಉಡುಪಿಗೆ ಆಗಲಿಸುತ್ತಿದ್ದಾರೆ. ಕೃಷ್ಣಮಠದ ವಿಶ್ವಪರ್ಯಾಯದ ಭಾಗವಾಗಿ ಲಕ್ಷ ಕಂಠ ಗೀತಾ ಪರಾಯಣ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಒಂದು…