ಕಾರ್ಕಳ: ಕಾರ್ಕಳ ಉಡುಪಿ ಹೆದ್ದಾರಿಯ ನೀರೆ ಶಾಲೆಯ ಬಳಿ ಬೈಕ್ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು (ಡಿ.5) ನಡೆದಿದೆ.
ನೀರೆಯ ಶಂಕರ್ ಶೆಟ್ಟಿ (70 ವ) ಮೃತ ದುರ್ದೈವಿ . ಶಂಕರ್ ಶೆಟ್ಟಿ ಅವರು ತಮ್ಮ ಬೈಕಿನಲ್ಲಿ ನೀರೆ ಶಾಲೆ ಬಳಿಯ ಕ್ರಾಸ್ ನಲ್ಲಿ ಹೋಗುತ್ತಿದ್ದಾಗ ಬೈಲೂರು ಪ್ರೌಢಶಾಲೆಯ ಶಿಕ್ಷಕ ಹರೀಶ್ ಶೆಟ್ಟಿ ಎಂಬುವರ ಕಾರು ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಂಕರ್ ಶೆಟ್ಟಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆಗಾಗಲೇ ಮೃತಪಟ್ಟಿದ್ದಾರೆ .
ಕಾಂಗ್ರೆಸ್ ಮುಖಂಡರಾಗಿ ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಶಂಕರ್ ಶೆಟ್ಟಿ ಅವರು ನೀರೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಹಾಗೂ ಬ್ರಹ್ಮ ಬೈದರ್ಕಳ ಗರಡಿಯ ಆಡಳಿತ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.