ಕಾರ್ಕಳ: ನಿಟ್ಟೆಯಲ್ಲಿ 4 ಲಕ್ಷ ರೂ. ಮೌಲ್ಯದ ಶ್ರೀಗಂಧದ ಮರ ಕಳವು
ಕಾರ್ಕಳ: ತಾಲೂಕಿನ ನಿಟ್ಟೆ ಗ್ರಾಮದ ಹೇನೊಟ್ಟು ಎಂಬಲ್ಲಿ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ನೆಟ್ಟಿದ್ದ ಶ್ರೀಗಂಧದ ಮರಗಳನ್ನು ಕಳ್ಳರು ಕಳವುಗೈದಿರುವ ಪ್ರಕರಣ ಜೂ.17 ರ ರಾತ್ರಿ ನಡೆದಿದೆ. ನಿಟ್ಟೆಯ ದಿನೇಶ್ ಅವರು ತಮ್ಮ ಜಾಗದಲ್ಲಿ 225 ಶ್ರೀಗಂಧದ ಸಸಿಗಳನ್ನು ನೆಟ್ಟಿದ್ದು, ಜೂ.16…
ಇಂದು ದೇಶಾದ್ಯಂತ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ಯೋಗಾಭ್ಯಾಸ
ವಿಶಾಖಪಟ್ಟಣಂ: ಯೋಗ ಇಂದು ವಿಶ್ವವನ್ನು ಒಂದಾಗಿ ಮಾಡಿದೆ. ವಿಶ್ವದ ಕೋಟ್ಯಂತರ ಜನರ ಜೀವನ ಶೈಲಿಯನ್ನು ಯೋಗ ಬದಲಿಸಿದೆ. ಯೋಗ ಅಂದರೆ ಒಬ್ಬರಿಗಾಗಿ ಅಲ್ಲ ಎಲ್ಲರಿಗಾಗಿ ಯೋಗ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ‘1 ಭೂಮಿ, 1 ಆರೋಗ್ಯಕ್ಕಾಗಿ…
ಅಜೆಕಾರು: ಪಾರ್ಟ್ ಟೈಮ್ ಜಾಬ್ ಆಸೆಗೆ ಬಿದ್ದು ಮೋಸಹೋದ ವ್ಯಕ್ತಿ: ಕಂಪನಿಗೆ ಹೂಡಿಕೆ ಮಾಡುವಂತೆ ನಂಬಿಸಿ 3 ಲಕ್ಷಕ್ಕೂ ಅಧಿಕ ಹಣ ವಂಚನೆ
ಅಜೆಕಾರು: ಮೊಬೈಲ್ ನಂಬರಿನ ಟೆಲಿಗ್ರಾಂ ಖಾತೆಗೆ ಬಂದಿದ್ದ ಸಂದೇಶದಲ್ಲಿನ ಪಾರ್ಟ್ ಟೈಮ್ ಜಾಬ್‌ನ ಆಸೆಗೆ ಬಿದ್ದು ವ್ಯಕ್ತಿಯೊಬ್ಬರು 3 ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡಿದ್ದಾರೆ. ಸತೀಶ್ ಎಂಬವರ ಮೊಬೈಲ್ ನಂಬರಿನ ಟೆಲಿಗ್ರಾಂ ಖಾತೆಗೆ ಕಳೆದ ಮೇ.22 ರಂದುTrishna Das ಎಂಬವರ ಖಾತೆಯಿಂದ…
ಹೆಬ್ರಿ: ಟಿವಿಎಸ್ ಮೊಪೆಡ್-ಪಿಕಪ್ ಡಿಕ್ಕಿ: ಮೊಪೆಡ್ ಸವಾರ ಸಾವು
ಹೆಬ್ರಿ: ಟಿವಿಎಸ್ ಮೊಪೆಡ್ ಗೆ ಮಹೀಂದ್ರಾ ಪಿಕಪ್ ಡಿಕ್ಕಿಯಾಗಿ ಮೊಪೆಡ್ ಸವಾರ ಮೃತಪಟ್ಟ ಘಟನೆ ಹೆಬ್ರಿ ತಾಲೂಕಿನ ಚಾರ ಎಂಬಲ್ಲಿ ಶುಕ್ರವಾರ ಸಂಭವಿಸಿದೆ. ಮೊಪೆಡ್ ಸವಾರ ಸೀತಾರಾಮ ಮೃತಪಟ್ಟಿದ್ದಾರೆ. ಸೀತಾರಾಮ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಚಾರ ಕಡೆಯಿಂದ ತನ್ನ ಟಿವಿಎಸ್…
ಆರ್‌ಎಸ್‌ಎಸ್ ಮುಖಂಡ, ಹಿಂದೂಗಳ ಮನೆಗೆ ಮಧ್ಯರಾತ್ರಿ ಪೊಲೀಸರ ರೇಡ್ :ದಕ್ಷಿಣ ಕನ್ನಡ ಎಸ್‌ಪಿಗೆ ಕರ್ನಾಟಕ ಹೈಕೋರ್ಟ್ ನೋಟಿಸ್
ಮಂಗಳೂರು: ಯಾವುದೇ ಕಾರಣ ಇಲ್ಲದೆ ಮಧ್ಯರಾತ್ರಿ ವೇಳೆ ಆರ್‌ಎಸ್‌ಎಸ್ ನಾಯಕರೊಬ್ಬರ ಮನೆಗೆ ಪೊಲೀಸರು ಭೇಟಿ ನೀಡಿ ಫೋಟೊ ತೆಗೆಸಿಕೊಂಡು ಜಿಪಿಎಸ್ ಅಪ್‌ಲೋಡ್ ಮಾಡಿದ್ದ ಪ್ರಕರಣ ಸಂಬAಧ ದಕ್ಷಿಣ ಕನ್ನಡ ಎಸ್‌ಪಿ ಅರುಣ್‌ಗೆ ಕರ್ನಾಟಕ ಹೈಕೋರ್ಟ್ ನೊಟೀಸ್ ನೀಡಿದೆ. ಅಲ್ಲದೆ, ಸೂಕ್ತ ದಾಖಲೆ…
ಮಳೆಗಾಲದ ಆರಂಭದಲ್ಲೇ ಗುಂಡಿ ಬಿದ್ದ ರಸ್ತೆಗಳು: ಗುಂಡಿ ಮುಚ್ಚದ ಲೋಕೋಪಯೋಗಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ
ಕಾರ್ಕಳ: ಮಳೆಗಾಲದ ಆರಂಭವಾಗಿ 15 ದಿನ ಕಳೆಯುವ ಮೊದಲೇ ಕಾರ್ಕಳ ಪುರಸಭೆ ಹಾಗೂ ರಾಜ್ಯ ಹೆದ್ದಾರಿ ಸೇರಿದಂತೆ ಜಿಲ್ಲಾ ಪ್ರಮುಖ ರಸ್ತೆಗಳು ಅಲ್ಲಲ್ಲಿ ಗುಂಡಿ ಬಿದ್ದಿದೆ. ಕಳೆದ ಬಾರಿ ತೇಪೆ ಹಾಕಿದ ಕಡೆಗಳಲ್ಲಿ ಮತ್ತೆ ಬೃಹತ್ ಗಾತ್ರದ ಗುಂಡಿಗಳು ಬಿದ್ದಿದ್ದು ವಾಹನ…
ಮಂಗಳೂರು: ದೇಶದ ಅತೀ ದೊಡ್ಡ ಎಲ್‌ಪಿಜಿ ಭೂಗತ ಸಂಗ್ರಹಣಾಗಾರ ನಿರ್ಮಾಣ ಕಾರ್ಯ ಪೂರ್ಣ
ಮಂಗಳೂರು: ಭಾರತದ ಅತಿದೊಡ್ಡ ಭೂಗತ ಎಲ್‌ಪಿಜಿ ಸಂಗ್ರಹಣಾಗಾರ ಮಂಗಳೂರಿನಲ್ಲಿ ಪೂರ್ಣಗೊಂಡಿದೆ. ಇದರೊಂದಿಗೆ, ದೇಶದ ಇಂಧನ ಮೂಲಸೌಕರ್ಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ.ಈ ಭೂಗತ ಸುರಂಗದಲ್ಲಿ 80 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಅನಿಲವನ್ನು ಸಂಗ್ರಹಿಸುವುದು ಸಾಧ್ಯವಾಗಲಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ಗಾಗಿ…
ಅಜೆಕಾರು: ಶಾಲಾ ಬಸ್ ಗೆ ಸ್ಕೂಟರ್ ಡಿಕ್ಕಿ: ಸವಾರನಿಗೆ ಗಾಯ
ಕಾರ್ಕಳ: ಕಾರ್ಕಳ ಕ್ರೈಸ್ಟ್ ಕಿಂಗ್ ಶಾಲೆಯ ಸ್ಕೂಲ್ ಬಸ್ಸಿಗೆ ಹಿಂಬದಿಯಿಂದ ಸ್ಕೂಟರ್ ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ಅಜೆಕಾರಿನ ನೂಜಿಗುರಿ ಎಂಬಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ. ಮುನಿಯಾಲಿನಿಂದ ಕಾರ್ಕಳಕ್ಕೆ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ನೂಜಿಗುರಿ ಎಂಬಲ್ಲಿ ಮಕ್ಕಳನ್ನು ಹತ್ತಿಸಲು…
ಮಕ್ಕಳ ಸುರಕ್ಷತೆ ಹಿನ್ನೆಲೆಯಲ್ಲಿ ಶಾಲಾವಾಹನಗಳ ತಪಾಸಣೆಗೆ ವಿಶೇಷ ಅಭಿಯಾನ:ಕಾರ್ಕಳದ ಹಲವೆಡೆ ಶಾಲಾ ವಾಹನಗಳ ದಾಖಲೆ ಪರಿಶೀಲನೆ
ಕಾರ್ಕಳ: ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲಾ ವಾಹನಗಳ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸುವಂತೆ ಉಡುಪಿ ಎಸ್ಪಿ ಹರಿರಾಂ ಶಂಕರ್ ಜಿಲ್ಲೆಯ ಪೊಲೀಸರಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಗುರುವಾರ ಮುಂಜಾನೆ ಪೊಲೀಸರು ಶಾಲೆಯ ವಾಹನಗಳ ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಕೆಲವೆಡೆ…
ಕೇತಗಾನಹಳ್ಳಿ ಭೂ ಒತ್ತುವರಿ ಪ್ರಕರಣ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಹೈಕೋರ್ಟ್ ಬಿಗ್ ರಿಲೀಫ್: ಎಸ್‌ಐಟಿ ತನಿಖೆಗೆ ಮಧ್ಯಂತರ ತಡೆ
ಬೆಂಗಳೂರು: ಕೇತಗಾನಹಳ್ಳಿ ಭೂ ಒತ್ತುವರಿ ಪ್ರಕರಣದಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಅವರ ವಿರುದ್ಧದ ಎಸ್‌ಐಟಿ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ರಚನೆ ಪ್ರಶ್ನಿಸಿ ಹೈಕೋರ್ಟ್ಗೆ ಹೆಚ್.ಡಿ.ಕುಮಾರಸ್ವಾಮಿ ಅರ್ಜಿ ಸಲ್ಲಿಸಿದ್ದರು. ಇಂದು…
