ಜಿಲ್ಲಾ ಮಟ್ಟದ ಥ್ರೋ ಬಾಲ್ ಪಂದ್ಯಾಟ: ಅಜೆಕಾರು ಚರ್ಚ್ ಶಾಲಾ ಬಾಲಕರ ತಂಡ ವಿಭಾಗೀಯ ಮಟ್ಟಕ್ಕೆ ಆಯ್ಕೆ

ಕಾರ್ಕಳ : ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉಡುಪಿ ಮತ್ತು ಹಿಂದೂಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಶಿರ್ವ ಇವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರ…

ಕಾರ್ಕಳ ಪುರಸಭೆ ಸಾಮಾನ್ಯ ಸಭೆ: ಕಾನೂನುಬಾಹಿರ ಕಟ್ಟಡಕ್ಕೆ ಪುರಸಭೆಯಿಂದ ಪರವಾನಗಿ: ಶುಭದ್ ರಾವ್ ಆರೋಪ

ಕಾರ್ಕಳ: ಆನೆಕೆರೆ ಬಳಿಯ ಬಫರ್ ಝೋನ್ ವ್ಯಾಪ್ತಿಯಲ್ಲಿ ಜಾಗವನ್ನು ಒತ್ತುವರಿ ಮಾಡಿ ನಿರ್ಮಿಸಲಾಗಿದ್ದ ಕಟ್ಟಡಕ್ಕೆ ನಿಯಮ ಮೀರಿ ಡೋರ್ ನಂಬರ್ ನೀಡಲಾಗಿದೆ. ಸಣ್ಣ ನೀರಾವರಿ ಇಲಾಖೆಯ ಸುರ್ಪದಿಯಲ್ಲಿರುವ ಜಾಗದಲ್ಲಿ ನಿರ್ಮಿಸಲಾಗಿರುವ ಕಟ್ಟಡಕ್ಕೆ ಲೈಸನ್ಸ್ ನೀಡಬಾರದು ಎನ್ನುವ ಆಕ್ಷೇಪಣೆ ಸಲ್ಲಿಕೆಯಾಗಿತ್ತು. ಆದರೆ ಸಣ್ಣ…

ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆ: ಕಾರ್ಕಳ ಜ್ಞಾನಸುಧಾದ ಇಬ್ಬರು ರಾಜ್ಯಮಟ್ಟಕ್ಕೆ ಆಯ್ಕೆ

ಉಡುಪಿ : ಶಾಲಾ ಶಿಕ್ಷಣ ಇಲಾಖೆ ಮತ್ತು ಉಡುಪಿಯ ಎಂ.ಜಿ.ಎಂ ಕಾಲೇಜಿನ ಇಲ್ಲಿ ಸಂಯುಕ್ತ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದ ವಿಶ್ವ ವಿನಾಯಕ ಹಾಗೂ…

ಚಂದ್ರಯಾನ-4, ಭಾರತದ ಬಾಹ್ಯಾಕಾಶ ನಿಲ್ದಾಣಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ನವದೆಹಲಿ: ಚಂದ್ರಯಾನ ಮಿಷನ್‌ನ ಮೂರನೇ ಹಂತವನ್ನು ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡರ್ ಮತ್ತು ರೋವರ್ ಇಳಿಸಿದ ನಂತರ ಅದರ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಇದರೊಂದಿಗೆ ವೀನಸ್ (ಶುಕ್ರ) ಆರ್ಬಿಟರ್ ಮಿಷನ್, ಗಗನ್ಯಾನ್ ಮಿಷನ್‌ನ ಮುಂದಿನ ಕಾರ್ಯ,…

ಕಾರ್ಕಳ: ಬಿಜೆಪಿ ಮುಖಂಡನ ನೇತೃತ್ವದಲ್ಲಿ ಶಾಲೆಯಲ್ಲಿ ಈದ್ ಮಿಲಾದ್ ಆಚರಣೆ?: ಹಿಂದೂ ಸಂಘಟನೆಗಳ ಆಕ್ರೋಶ!

ಕಾರ್ಕಳ: ಬಿಜೆಪಿ ಮುಖಂಡನ ನೇತೃತ್ವದಲ್ಲೇ ಶಾಲೆಯಲ್ಲಿ ಈದ್ ಮಿಲಾದ್ ಆಚರಣೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿರುವ ಆರೋಪ ಕೇಳಿಬಂದಿದ್ದು, ಹಿಂದೂ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ‌. ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚೇರಿಪೇಟೆಯ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈದ್ ಮಿಲಾದ್…

ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸದವರಿಗೆ ಗುಡ್ ನ್ಯೂಸ್: ಮತ್ತೆ ಗಡುವು ವಿಸ್ತರಿಸಿದ ಹೈಕೋರ್ಟ್

ಬೆಂಗಳೂರು: ಕರ್ನಾಟಕದಲ್ಲಿ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅನ್ನು ಅಳವಡಿಸದವರಿಗೆ ಶುಭ ಸುದ್ದಿಯೊಂದು ದೊರೆತಿದ್ದು, ಹೈಕೋರ್ಟ್​​ನಿಂದ ನಂಬರ್ ಪ್ಲೇಟ್ ಅಳವಡಿಕೆ ಗಡುವು ವಿಸ್ತರಣೆಯಾಗಿದೆ. ಗಡುವು ವಿಸ್ತರಿಸಬೇಕು ಎಂದು ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ವಿಚಾರಣೆಯನ್ನು ಮುಂದೂಡಿದೆ. ಜತೆಗೆ,…

ಫೇಸ್‌ಬುಕ್‌ ಮೂಲಕ ಮಹಿಳೆಯರ  ಸ್ನೇಹ ಬೆಳೆಸಿ ಚಿನ್ನಾಭರಣ, ನಗದು ದೋಚುತ್ತಿದ್ದ ಖದೀಮ ಅರೆಸ್ಟ್: ಆರೋಪಿ ಬೆಳ್ಮಣ್ ನ ರೋಹಿತ್‌ ಮಥಾಯಿಸ್‌ ಬಂಧನ :7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ 

ಮಂಗಳೂರು: ಮಹಿಳೆಯರೊಂದಿಗೆ ಸ್ನೇಹ ಬೆಳೆಸಿಕೊಂಡು ನಾಟಕವಾಡಿ ಅವರೊಂದಿಗೆ ಸಂಪರ್ಕ ಸಾಧಿಸಿ ಅವರಿಂದಲೇ ಚಿನ್ನಾಭರಣ ದೋಚುತ್ತಿದ್ದ ಕಳ್ಳ ಹಾಗೂ ನಿವೃತ್ತ ಪಿಡಿಒ ಓರ್ವರನ್ನು ಹತ್ಯೆಗೈದ ಪ್ರಕರಣದ ಆರೋಪಿಯನ್ನು ಕಂಕನಾಡಿ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಕಳ ಬೆಳ್ಮಣ್ಣಿನ ರೋಹಿತ್‌ ಮಥಾಯಿಸ್‌ (33) ಬಂಧಿತ…

ಕಾರ್ಕಳ: ಸಾಲ ಹಿಂತಿರುಗಿಸುವಂತೆ ಒತ್ತಾಯಿಸಿ ಹಲ್ಲೆ, ಜೀವ ಬೆದರಿಕೆ

ಕಾರ್ಕಳ : ವ್ಯಕ್ತಿಯೊಬ್ಬರು ಇನ್ನೋರ್ವನಿಂದ ಕೈಸಾಲ ಪಡೆದುಕೊಂಡಿದ್ದು ಸಾಲ ನೀಡಿದ ವ್ಯಕ್ತಿ ಹಣ ಹಿಂತಿರುಗಿಸುವಂತೆ ದಮ್ಕಿ ಹಾಕಿ ಜೀವ ಬೆದರಿಕೆಯೊಡ್ಡಿರುವ ಘಟನೆ ನಡೆದಿದೆ. ಸಚಿನ್‌ ದುರ್ಗಾ ಗ್ರಾಮ, ಕಾರ್ಕಳ ಇವರು ಸಾಲ ಪಡದುಕೊಂಡವರು. ಅವರು ರಮೇಶ್ ಎಂಬಾತನಿಂದ 6,000/- ರೂ. ಹಣ…

ಸುಳ್ಯ: ಕರ್ತವ್ಯದಲ್ಲಿದ್ದ ಲೈನ್ ಮ್ಯಾನ್ ಗೆ ವಿದ್ಯುತ್ ಶಾಕ್ : ಆಸ್ಪತ್ರೆಗೆ ದಾಖಲು

ಸುಳ್ಯ : ಸುಳ್ಯದ ಕೊಡಿಯಾಲಬೈಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಲೈನ್ ಮ್ಯಾನ್ ವೊಬ್ಬರಿಗೆ ವಿದ್ಯುತ್ ಶಾಕ್ ತಗುಲಿದೆ. ವಿದ್ಯುತ್ ಶಾಕ್ ಗೆ ಲೈನ್ ಮ್ಯಾನ್ ಕಾಲಿನ ಭಾಗ ಸುಟ್ಟು ಹೋಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಲೈನ್ ಮ್ಯಾನ್ ನನ್ನು ಆಸ್ಪತ್ರೆಗೆ ದಾಖಲಿ ಸಲಾಗಿದ್ದು,…