ಜು 22ರಿಂದ ಅಂಗನವಾಡಿಗಳಲ್ಲಿ ಎಲ್​ಕೆಜಿ-ಯುಕೆಜಿ ಆರಂಭ -ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಬೆಂಗಳೂರು: ಜು.22ರಿಂದ ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವಪ್ರಾಥಮಿಕ (ಎಲ್‌ಕೆಜಿ, ಯುಕೆಜಿ) ಶಾಲೆ ಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜುಲೈ 22ರಂದು ರಾಜ್ಯದ 250 ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ…

ಜಮ್ಮುಕಾಶ್ಮೀರ: ಗಡಿ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಸೇನೆ: ಮೂವರು ಉಗ್ರರ ಹತ್ಯೆ, ಶಸ್ತ್ರಾಸ್ತ್ರ ವಶಕ್ಕೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕೇರಾನ್ ಸೆಕ್ಟರ್‌ನಲ್ಲಿ ಭಾನುವಾರ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದ ಭಾರತೀಯ ಸೇನೆ, ಮೂವರು ಅಪರಿಚಿತ ಭಯೋತ್ಪಾದಕರನ್ನು ಹತ್ಯೆ ಮಾಡಿದೆ. ಕುಪ್ವಾರಾದ ಕೇರನ್ ಸೆಕ್ಟರ್ನಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಮೂವರು…

ಭಾರೀ ಮಳೆಯಾಗುತ್ತಿರುವ ಹಿನ್ನೆಲೆ: ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ

ಮಂಗಳೂರು:ಕಳೆದ ಎರಡು ದಿನಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಇಂದು (ಜುಲೈ 15) ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ ಪ್ರಾಥಮಿಕ…

ಕಾರ್ಕಳ: ಹಣ ದ್ವಿಗುಣಗೊಳಿಸುವ ಆಮಿಷವೊಡ್ಡಿ ಮಹಿಳೆಗೆ ಬರೋಬ್ಬರಿ 7.50 ಲಕ್ಷ‌ ವಂಚನೆ

ಕಾರ್ಕಳ: ಅಪರಿಚಿತ ವ್ಯಕ್ತಿಯನ್ನು ನಂಬಿ ಮಹಿಳೆಯೊಬ್ಬರು ಫೇಸ್ಬುಕ್ ಮೂಲಕ ಕಂಟೈನರ್ ಖರೀದಿಸಲು 700 ರೂ ಹಣ ಪಾವತಿಸಿದ ಬಳಿಕ ಆನ್ ಲೈನ್ ವಂಚಕ ಒಂದು ತಿಂಗಳ ಬಳಿಕ 850 ರೂ ಹಣವನ್ನು ಮಹಿಳೆಯ ಖಾತೆಗೆ ಹಾಕಿ ಬಳಿಕ ಆಕೆಯ ಬಳಿ ಹಣ…

ಸೋಲಿನ ಹತಾಶೆಯಿಂದ ನೀರಿನಿಂದ ಹೊರತೆಗೆದ ಮೀನಿನಂತೆ ಚಡಪಡಿಸುತ್ತಿರುವ ಕಾರ್ಕಳ ಕಾಂಗ್ರೆಸ್ : ಬಿಜೆಪಿ ಮಂಡಲ ಅಧ್ಯಕ್ಷ ನವೀನ್ ನಾಯಕ್ ವ್ಯಂಗ್ಯ

ಕಾರ್ಕಳ: ಯಾವ ವೇದಿಕೆಯಲ್ಲಿ ಯಾವ ವಿಚಾರ ಪ್ರಸ್ತಾಪ ಮಾಡಬೇಕೆಂಬ ಪರಿಜ್ಞಾನವಿಲ್ಲದ ಕಾರ್ಕಳ ಕಾಂಗ್ರೆಸ್ ಸೋಲಿನ ಹತಾಶೆಯಿಂದ ನೀರಿನಿಂದ ಹೊರತೆಗೆದ ಮೀನಿನಂತೆ ಚಡಪಡಿಸುತ್ತಿದೆ. ಕಾರ್ಕಳದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ದಾಂಧಲೆ ನಡೆಸಿ ತಾಲೂಕಿನ ಜನರಿಗೆ ಘೋರ ಅನ್ಯಾಯ ಮಾಡಿದ್ದು, ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ…

ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಇಲ್ಲ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ

ಬೆಂಗಳೂರು: ಸದ್ಯದಲ್ಲಿ ಕೆಎಸ್ ಆರ್ ಟಿಸಿ ಬಸ್ ಪ್ರಯಾಣ ದರ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಕೆ ಎಸ್ ಆರ್ ಟಿಸಿ ಅಧ್ಯಕ್ಷ ಎಸ್ ಆರ್ ಶ್ರೀನಿವಾಸ್ ಹೇಳಿಕೆ ಬಗ್ಗೆ…

ಅಜೆಕಾರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಶುಭಾರಂಭ : ಸಹಕಾರಿ ಸಂಸ್ಥೆಗಳು ಇಂದಿಗೂ ಗ್ರಾಮೀಣ ಭಾಗದ ಜನರ ವಿಶ್ವಾಸ ಉಳಿಸಿಕೊಂಡಿವೆ:ಅಜೆಕಾರು ಶಿವರಾಮ‌ ಶೆಟ್ಟಿ

ಕಾರ್ಕಳ: ಅಜೆಕಾರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಅಜೆಕಾರು ಚರ್ಚ್ ಬಳಿಯ ಮುಖ್ಯರಸ್ತೆಯ ಶಾಲೋಮ್ ಪ್ರಗತಿ ಕಾಂಪ್ಲೆ ಕ್ಸ್‌ನಲ್ಲಿ ಜು. 14ರಂದು ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿರ್ದೇಶಕ ಜಯಕರ ಶೆಟ್ಟಿ…

ಜ್ಞಾನಸುಧಾ ಕಾಲೇಜಿನಲ್ಲಿ ಎನ್.ಎಸ್.ಎಸ್ ಕಾರ್ಯಚಟುವಟಿಕೆಗಳ ಉದ್ಘಾಟನೆ

ಕಾರ್ಕಳ : ಶಿಸ್ತು ಸಂಯಮದಿಂದ ಕೂಡಿ, ನಾಯಕತ್ವದ ಗುಣ ರೂಪಿಸುತ್ತಾ ಸಾಮಾಜಿಕ ಕಳಕಳಿಯೊಂದಿಗೆ ದೇಶಭಕ್ತಿಯನ್ನು ಉದ್ದೀಪನಗೊಳಿಸುವ ಕಾರ್ಯ ಎನ್.ಎಸ್.ಎಸ್ ಮೂಡಿಸುತ್ತದೆ ಎಂದು ಉಡುಪಿಯ ನಿವೃತ್ತ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ದಯಾನಂದ ಡಿ. ಅವರು ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ…

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಹತ್ಯೆಗೆ ಯತ್ನ: ಬಂದೂಕುಧಾರಿಯಿಂದ ದಾಳಿ, ಬಲಕಿವಿಗೆ ಗಾಯ

ಪೆನ್ಸಿಲ್ವೇನಿಯಾ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಶನಿವಾರ ಸಂಜೆ ನಡೆದ ಪ್ರಚಾರ ರ‍್ಯಾಲಿ ವೇಳೆ ಸರಣಿ ಗುಂಡಿನ ದಾಳಿ ನಡೆದಿದೆ. ಡೊನಾಲ್ಡ್ ಟ್ರಂಪ್ ಅವರಿಗೆ ಕಿವಿ ಮತ್ತು ಮುಖದ ಮೇಲೆ ಗಾಯವಾಗಿದ್ದು, ಕೂಡಲೇ ಅವರನ್ನ ವೇದಿಕೆಯಿಂದ ಸುರಕ್ಷಿತವಾಗಿ…

ಸೋಮೇಶ್ವರ: ಆನೆ ಭಯದಿಂದ ಕಂಗೆಟ್ಟ ಮಕ್ಕಳಿಗೆ ಜೀಪ್ ವ್ಯವಸ್ಥೆ: ಸಾಮಾಜಿಕ ಕಳಕಳಿ ಮೆರೆದ ಅರಣ್ಯ ಇಲಾಖೆಗೆ ಸ್ಥಳೀಯರ ಶ್ಲಾಘನೆ

ಹೆಬ್ರಿ: ತಾಲೂಕಿನ ನಾಡ್ಪಾಲು ಗ್ರಾಮದ ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯಲ್ಲಿ ಅನೇಕ ದಿನಗಳಿಂದ ಒಂಟಿ ಸಲಗ ಬೀಡು ಬಿಟ್ಟು ಜನರಿಗೆ ಜೀವ ಭಯ ಉಂಟುಮಾಡಿದ್ದು, ಸಾರ್ವಜನಿಕರು ಭಯದಿಂದ ಓಡಾಡುವಂತಾಗಿದೆ. ಅದರಲ್ಲೂ ಪುಟ್ಟ ಮಕ್ಕಳು ದಿನನಿತ್ಯ ಶಾಲೆಗೆ ಹೋಗಬೇಕಾಗಿದ್ದು, ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಹೆಬ್ರಿ…