ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆ ವತಿಯಿಂದಸಾಧಕರ ನೆಲೆಯಲ್ಲಿ ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಧರ್ಮದರ್ಶಿ, ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತ ಮೋಹನ್ ದಾಸ್ ಸುರತ್ಕಲ್ ರವರನ್ನು ಸಾಧಕರ ನೆಲೆಯಲ್ಲಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಠಾಣೆಯ ಉಪನಿರೀಕ್ಷಕರಾದ ವಿನಾಯಕ ಬಾವಿಕಟ್ಟೆ ಹಾಗೂ ಮಾರುತಿ ಪಿ ವಹಿಸಿದ್ದರು.
ಸನ್ಮಾನ ಸ್ವೀಕರಿಸಿ ಧರ್ಮದರ್ಶಿ ಮೋಹನ ದಾಸ ಸುರತ್ಕಲ್ ಮಾತನಾಡಿ ಅಸಹಾಯಕರಿಗೆ ಸಹಾಯ ಹಸ್ತ ಹಾಗೂ ದುರ್ಬಲ ವರ್ಗದವರಿಗೆ ಸೇವಾ ಮನೋಭಾವ ಜೀವನದಲ್ಲಿ ಶ್ರೇಷ್ಠ ಸಾಧನೆ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮುಲ್ಕಿ ನ. ಪಂ.ಮಾಜೀ ಮುಖ್ಯಾಧಿಕಾರಿ ಡಾ. ಹರೀಶ್ಚಂದ್ರ ಪಿ ಸಾಲ್ಯಾನ್,, ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಕೃಷ್ಣಪ್ರಸಾದ್, ಮುಲ್ಕಿ ಪೊಲೀಸ್ ಠಾಣಾ ಎಎಸ್ ಐ ಸುರೇಶ್ ಸಿ ಕುಂದರ್, ಸಂಜೀವ, ಸಿಬ್ಬಂದಿ ಚಂದ್ರಶೇಖರ್, ಪ್ರಮೋದ್, ಉದಯ, ಪವನ್, ಸಾಮಾಜಿಕ ಕಾರ್ಯಕರ್ತರಾದ ಭೀಮಾ ಶಂಕರ್ ವಿಶುಕುಮಾರ್ ಕೆಎಸ್ ರಾವ್ ನಗರ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು