Category: ಸ್ಥಳೀಯ ಸುದ್ದಿಗಳು

ಬೈಲೂರು : ಪಾದಾಚಾರಿಗೆ ಕಂಟೈನರ್ ಡಿಕ್ಕಿಯಾಗಿ ಮೃತ್ಯು

ಕಾರ್ಕಳ: ರಸ್ತೆ ದಾಟುತ್ತಿದ್ದ ಪಾದಾಚಾರಿ ವ್ಯಕ್ತಿಯೊಬ್ಬರಿಗೆ ಕಂಟೈನರ್ ಲಾರಿ ಡಿಕ್ಕಿಯಾಗಿ ಪಾದಾಚಾರಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಯರ್ಲಪಾಡಿ ನಿವಾಸಿ ವಸಂತ್ ಆಚಾರ್ಯ (64) ಮೃತಪಟ್ಟವರು. ಮುಂಜಾನೆ ಕೆಲಸಕ್ಕೆ ಹೋಗಿದ್ದ ವಸಂತ ಅವರು ಮನೆಗೆ ವಾಪಸ್ಸಾಗುವ ವೇಳೆ ಬಸ್ಸಿನಿಂದ…

ನಲ್ಲೂರು ಪಾಜೆಗುಡ್ಡೆ ಬಳಿ ಕ್ಯಾಂಟರ್ ಬೈಕ್ ನಡುವೆ ಭೀಕರ ಅಪಘಾತ: ಪತಿ ಹಾಗೂ ಮೂವರು ಮಕ್ಕಳು ಸಹಿತ ನಾಲ್ವರು ಸ್ಥಳದಲ್ಲೇ ಸಾವು:ಪತ್ನಿ ಗಂಭೀರ

ಕಾರ್ಕಳ: ಬೈಕ್ ಹಾಗೂ ಕ್ಯಾಂಟರ್ ಲಾರಿ ನಡುವೆಮು ಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲೇ ಮೃತಪಟ್ಟು ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ನಲ್ಲೂರು ಪಾಜೆಗುಡ್ಡೆ ಎಂಬಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ಭೀಕರ ಅಪಘಾತದಲ್ಲಿ ಬೈಕ್ ಸವಾರ…

ಕಾರ್ಕಳ :ವಿಶ್ವ ಹೃದಯ ದಿನಾಚರಣೆ ಅಂಗವಾಗಿ “ಹೃದಯಕ್ಕಾಗಿ ನಡಿಗೆ” ಕಾರ್ಯಕ್ರಮ

ಕಾರ್ಕಳ : ವಿಶ್ವ ಹೃದಯ ದಿನಾಚರಣೆ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಮತ್ತು ರೋಟರಾಕ್ಟ್ ಕ್ಲಬ್ ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ ವತಿಯಿಂದ ಡಾ ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಸಹಯೋಗದಲ್ಲಿ ವಿಶ್ವ ದಿನಾಚರಣೆಯ ಅಂಗವಾಗಿ “ಹೃದಯಕ್ಕಾಗಿ ನಡಿಗೆ”…

ಕಾರ್ಕಳ: ಕಾನೂನು ಸೇವೆಗಳ ಸಮಿತಿ, ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ “ಸ್ವಚ್ಛತಾ ಕಾರ್ಯಕ್ರಮ”

ಕಾರ್ಕಳ: ಕಾನೂನು ಸೇವೆಗಳ ಸಮಿತಿ, ಕಾರ್ಕಳ ತಾಲೂಕು ಮತ್ತು ಸ್ವಚ್ಛ ಕಾರ್ಕಳ ಬ್ರಿಗೇಡ್ ಇವರ ವತಿಯಿಂದ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಅಂಗವಾಗಿ ಸ್ವಚ್ಛತಾ ಜಾಥ ಇಂದು ಅಯ್ಯಪ್ಪ ನಗರ ಆಟೋ ನಿಲ್ದಾಣದಿಂದ ವಿಜೇತ ವಿಶೇಷ ಶಾಲೆಯವರೆಗೆ…

ಕಾರ್ಕಳ : ಹುಟ್ಟುಹಬ್ಬದ ದಿನದಂದೇ ಆತ್ಮಹತ್ಯೆಗೆ ಶರಣಾದ ಸಾಣೂರಿನ ಯುವಕ

ಕಾರ್ಕಳ : ಯುವಕನೋರ್ವ ಹುಟ್ಟುಹಬ್ಬದ ದಿನದಂದೇ ಆತ್ಮಹತ್ಯೆಗೆ ಶರಣಾದ ಘಟನೆ ಸೆ. 28ರಂದು ಕಾರ್ಕಳ ತಾಲೂಕಿನ ಸಾಣೂರಿನಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಸುಮನ್‌ ಶೆಟ್ಟಿ (22) ಎಂದು ಗುರುತಿಸಲಾಗಿದೆ. ಕಡಬಬೆಟ್ಟು ಜನನಿಬೀಡ ಪ್ರದೇಶದಲ್ಲಿರುವ ಬಾವಿಗೆ ಸುಮನ್‌ ಹಾರಿದ್ದು, ಆತ್ಮಹತ್ಯೆಗೆ ನಿಖರ ಕಾರಣ…

ಗಮ್ಮತ್ ಕಲಾವಿದೆರ್ ದುಬೈ ವತಿಯಿಂದ ಸುರಕ್ಷಾ ಸೇವಾಶ್ರಮಕ್ಕೆ ಪಾಕಶಾಲೆಯ ಕೊಡುಗೆ

ಕಾರ್ಕಳ : ಗಮ್ಮತ್ ಕಲಾವಿದೆರ್ ದುಬೈ ವತಿಯಿಂದ ಸುರಕ್ಷಾ ಸೇವಾಶ್ರಮಕ್ಕೆ ಸುಸಜ್ಜಿತವಾದ ಪಾಕಶಾಲೆಯನ್ನು ನಿರ್ಮಿಸಿ ಕೊಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೇಮಾರು ಈಶ ವಿಠಲದಾಸ ಸ್ವಾಮೀಜಿ ದೇವರಿಗೆ ಕೊಟ್ಟ ನೈವೇದ್ಯ ದೇವರಿಗೆ ತಲುಪುತ್ತೋ ಇಲ್ಲವೋ ಗೊತ್ತಿಲ್ಲ,ಆದರೆ ಬಡವರಿಗೆ ಕೊಟ್ಟ ಸಹಾಯ ದೇವರಿಗೆ…

ಬಾಸ್ಕೆಟ್ ಬಾಲ್ ನಲ್ಲಿ ಕಾರ್ಕಳ ಜ್ಞಾನಸುಧಾದ ನಾಲ್ವರು ರಾಜ್ಯಮಟ್ಟಕ್ಕೆ

ಕಾರ್ಕಳ : ಶಾಲಾ ಶಿಕ್ಷಣ ಇಲಾಖೆ(ಪ.ಪೂ.ಕಾಲೇಜು) ಹಾಗೂ ಗಣಿತನಗರದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಬಾಲಕ-ಬಾಲಕಿಯರ ಬಾಸ್ಕೆಟ್ ಬಾಲ್ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗವು ದ್ವಿತೀಯ ಪಡೆದು ಮೂವರು ವಿದ್ಯಾರ್ಥಿನಿಯರಾದ ದ್ವಿತೀಯ ವಿಜ್ಞಾನ ವಿಭಾಗದ…

ಕಾರ್ಕಳ: ಮೂಲಸೌಕರ್ಯ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಆಡಳಿತಾಧಿಕಾರಿಗಳಿಂದ ಪ್ರತಿಭಟನೆ

ಕಾರ್ಕಳ: ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ವತಿಯಿಂದ ಮೂಲಸೌಕರ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳಿಂದ ಕಾರ್ಕಳ ತಾಲೂಕು ಕಚೇರಿ ಮುಂಭಾಗದಲ್ಲಿ ಗುರುವಾರ ಮೌನ ಪ್ರತಿಭಟನೆ ನಡೆಯಿತು. ಕಂದಾಯ ಇಲಾಖೆಯಿಂದ ನಿರಂತರವಾಗಿ ಸರ್ಕಾರದಿಂದ ಅಭಿವೃದ್ದಿಪಡಿಸಿರುವ…

ಹೆಬ್ರಿ- ಮನೆ ಬಳಿ ನಿಂತಿದ್ದ ದನ ಕಳ್ಳತನ- ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯಗಳು ಸೆರೆ: ಪ್ರಕರಣ ದಾಖಲು

ಹೆಬ್ರಿ: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೈಕಂಬ ಎಂಬಲ್ಲಿ ಮನೆಯ ಗೇಟ್ ಬಳಿ ನಿಂತಿದ್ದ ದನವನ್ನು ದುಷ್ಕರ್ಮಿಗಳು ಕಳವುಗೈದ ಪ್ರಕರಣ ಬೆಳಕಿಗೆ ಬಂದಿದೆ. ಕೈಕAಬದ ಬೃಂದಾವನ ಮನೆಯ ಸಿಸಿಟಿವಿಯಲ್ಲಿ ಗೇಟ್ ಬಳಿ ನಂತಿದ್ದ ದನವನ್ನು ಕಳವುಗೈದಿರುವುದು ಬೆಳಕಿಗೆ ಬಂದಿದೆ. ಮನೆಯ ಗೇಟ್…

ಹೊಳೆಯಲ್ಲಿ ಈಜಿಕೊಂಡು ಹೋಗಿ  ವಿದ್ಯುತ್ ಸಮಸ್ಯೆ ಬಗೆಹರಿಸಿದ ಮೆಸ್ಕಾಂ ಸಿಬ್ಬಂದಿ: ಹೆಬ್ರಿ ಮೆಸ್ಕಾಂ ಸಿಬ್ಬಂದಿ ಪ್ರಮೋದ್ ಕಾರ್ಯಕ್ಕೆ ಭಾರೀ ಮೆಚ್ಚುಗೆ

ಉಡುಪಿ: ಹೊಳೆಯಲ್ಲಿ ಸುಮಾರು 70 ಅಡಿ ದೂರದವರಗೆ ಈಜಿಕೊಂಡು ಹೋಗಿ ತುಂಡಾದ ವಿದ್ಯುತ್ ತಂತಿಯನ್ನು ದುರಸ್ತಿಗೊಳಿಸಿ ಮನೆಗೆ ವಿದ್ಯುತ್ ಸಂಪರ್ಕ ನೀಡಿದ ಹೆಬ್ರಿ ಮೆಸ್ಕಾಂ ಸಿಬ್ಬಂದಿ ಪ್ರಮೋದ್ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶಿವಪುರ ಗ್ರಾಮದ ಉಪ್ಪಳ ಮೂರು ಸಾಲು ಹೊಳೆಯ…