Share this news

 ಕಾರ್ಕಳ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ನಿರ್ದಿಷ್ಟ ಧರ್ಮದ ಕುರಿತು ವಿವಾದಾತ್ಮಕ ಪೋಸ್ಟ್ ಶೇರ್ ಮಾಡಿದ ಆರೋಪದ ಮೇಲೆ ಹಿಂದೂ ಮುಖಂಡ ರತ್ನಾಕರ್ ಅಮೀನ್ ವಿರುದ್ಧ ಅಜೆಕಾರು ಪೊಲೀಸರ ಸ್ವಯಂಪ್ರೇರಿತ ಕೇಸ್ ದಾಖಲಿಸಿ ಬಂಧಿಸಿದ್ದರು.

ಈ ಪ್ರಕರಣದ ಕುರಿತು ಮಂಗಳವಾರ ಕಾರ್ಕಳ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆಯಿತು. ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಸಿ.ಎಸ್ ಅವರು ರತ್ನಾಕರ್ ಅಮೀನ್ ಅವರಿಗೆ ಜಾಮೀನು ಮಂಜೂರು ಮಾಡಿದ್ದಾರೆ.
ರತ್ನಾಕರ್ ಅಮೀನ್ ಪರವಾಗಿ ವಕೀಲ ಹರೀಶ್ ಅಧಿಕಾರಿ ವಾದ ಮಂಡಿಸಿದ್ದರು.

 

 

 

 

Leave a Reply

Your email address will not be published. Required fields are marked *