ಬೆಂಗಳೂರು : ಕನ್ನಡ ಭಾಷೆಯನ್ನು ಅವಹೇಳನ ಮಾಡಿದ ಕಮಲ್ ಹಾಸನ್ ಗೆ ಇದೀಗ ಕರ್ನಾಟಕದಲ್ಲಿ ಪ್ರಿಭಟನೆ ಬಿಸಿ ಜೋರಾಗಿಯೇ ತಟ್ಟುತ್ತಿದೆ. ಈ ನಡುವೆ ರಾಜ್ಯದಲ್ಲಿ ಹಾಸನ್ ಅವರ ಥಗ್ ಲೈಪ್ ಸಿನಿಮಾ ಬಿಡುಗಡೆಗೆ ನಿಷೇಧ ಹೇರಿದ್ದು ಕಮಲ್ ಹಾಸನ್ ತಮ್ಮ ಇತ್ತೀಚಿನ ಚಿತ್ರ ‘ಥಗ್ ಲೈಫ್’ ಕರ್ನಾಟಕದಲ್ಲಿ ಸುಗಮ ಬಿಡುಗಡೆಗೆ ರಕ್ಷಣೆ ಕೋರಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ವೇಳೆ ಕಮಲ್ ಹಾಸನರನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡು ಕನ್ನಡಿಗರ ಕ್ಷಮೆ ಕೇಳಲು ಆಗ್ರಹಿಸಿದೆ. ಇದೀಗ ಮತ್ತೆ ವಿಚಾರಣೆ ನಡೆಸಿದ ಹೈಕೋರ್ಟ್ ಜೂನ್ 10 ರಂದು ವಿಚಾರಣೆ ಮಂದೂಡಿ ಆದೇಶ ಹೊರಡಿಸಿದೆ.
ಇಂದು ಹೈ ಕೋರ್ಟ್ ನಲ್ಲಿ ಕಮಲ್ ಹಾಸನ್ ಸಲ್ಲಿಸಿರುವ ಅರ್ಜಿ ಮತ್ತೆ ಆರಂಭವಾಯಿತು. ನ್ಯಾ. ಎಂ.ನಾಗಪ್ರಸನ್ನ ಅವರಿಂದ ಪೀಠದಲ್ಲಿ ವಿಚಾರಣೆ ಆರಂಭವಾಯಿತು. ವಿಚಾರಣೆ ವೇಳೆ ನಿರ್ಮಾಪಕರ ಪರ ವಕೀಲರಾದ ಧ್ಯಾನ್ ಚಿನ್ನಪ್ಪ ಕರ್ನಾಟಕದಲ್ಲಿ ನಾವು ಕಮಲ್ ಹಾಸನವರ ಚಿತ್ರ ಬಿಡುಗಡೆ ಮಾಡಲ ಎಂದು ಸ್ಪಷ್ಟನೆ ನೀಡಿದರು. ಈ ವೇಳೆ ನ್ಯಾಯಮೂರ್ತಿಗಳಾದ ಎಂ. ನಾಗಪ್ರಸನ್ನ ಅವರು ಬಹುಶಹ ಅವರಿಗೆ ಆತ್ಮಪ್ರತಿಷ್ಠೆ ಅಡ್ಡ ಬರುತ್ತಿರಬಹುದು ಎಂದು ಜೂನ್ 10 ರಂದು ವಿಚಾರಣೆ ಮುಂದೂಡಿದರು.