

ಕಾರ್ಕಳ, ಆ.14: ಹೊಂಡ ತಪ್ಪಿಸುವ ಸಲುವಾಗಿ ಟ್ರ್ಯಾಕ್ಟರ್ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮವಾಗಿ ಹಿಂದಿನಿಂದ ಬರುತ್ತಿದ್ದ ಕಾರು ಟ್ರ್ಯಾಕ್ಟರ್’ ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಎಣ್ಣೆಹೊಳೆಯ ಹಂಚಿಕಟ್ಟೆ ತಿರುವಿನಲ್ಲಿ ಆ.13 ರಂದು ಸಂಜೆ 6 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಕಾರ್ಕಳ ಕಡೆಯಿಂದ ಹೆಬ್ರಿ ಕಡೆಗೆ ಸಾಗುತ್ತಿದ್ದ ಟ್ರಾö್ಯಕ್ಟರ್ ಹಂಚಿಕಟ್ಟೆ ದ್ವಾರದ ಬಳಿಯ ತಿರುವಿನಲ್ಲಿ ರಸ್ತೆ ಗುಂಡಿ ತಪ್ಪಿಸಲು ಚಾಲಕ ಏಕಾಎಕಿ ಬ್ರೇಕ್ ಹಾಕಿದ್ದಾನೆ,ಪರಿಣಾಮವಾಗಿ ಹಿಂದಿನಿAದ ಬರುತ್ತಿದ್ದ ಮಾರುತಿ ಆಲ್ಟೋ ಕಾರು ಟ್ರ್ಯಾಕ್ಟರಿನ ಟ್ರೈಲರ್ ‘ಗೆ ಹಿಂದಿನಿಂದ ಡಿಕ್ಕಿಯಾಗಿದೆ. ಅಪಘಾತದಿಂದ ಕಾರಿನ ಬಾನೆಟ್ ಹಾಗೂ ಗ್ಲಾಸ್ ಪುಡಿಯಾಗಿದೆ.
ವರಾಹಿ ಯೋಜನೆಯ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗೆ SNC ಕಂಪೆನಿಯು ರಸ್ತೆ ಅಗೆದು ಮತ್ತೆ ಡಾಮರ್ ಹಾಕಿತ್ತು, ಆದರೆ ಮಳೆಗಾಲದಲ್ಲಿ ಮಣ್ಣು ಸಿಂಕ್ ಆದ ಪರಿಣಾಮವಾಗಿ ಡಾಮರ್ ಕಿತ್ತುಹೋಗಿ ರಸ್ತೆ ಹೊಂಡಬಿದ್ದಿದೆ. ಇದರಿಂದ ವಾಹನ ಸವಾರರಿಗೆ ನಿತ್ಯ ತೊಂದರೆಯಾಗುತ್ತಿದೆ ಅಲ್ಲದೇ ಈ ಭಾಗದ ರಸ್ತೆ ಅಪಾಯಕಾರಿ ತಿರುವಿನಿಂದ ಕೂಡಿದ್ದು ವೇಗವಾಗಿ ಸಾಗುವ ವಾಹನ ಚಾಲಕರಿಗೆ ತಿರುವಿನಲ್ಲಿ ಹೊಂಡ ಕಂಡಾಗ ವಾಹನಗಳು ಅಪಘಾತಕ್ಕೀಡಾಗುತ್ತಿವೆ. ಆದ್ದರಿಂದ ಕಂಪೆನಿಯು ತಕ್ಷಣವೇ ರಸ್ತೆಯನ್ನು ದುರಸ್ತಿಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.




.
.
.
.
.
.
.
.
.
.
.
.
.
.
.
.
.
.
.
.
