ಉಡುಪಿ : ಕಳೆದ ಒಂದು ವಾರದಿಂದ ಪೊಲೀಸರು ಕೋಮುಸೌಹಾರ್ದವನ್ನು ಕಾಪಾಡುವ ನೆಪದಲ್ಲಿ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿ ಕಿರುಕುಳ ನೀಡುತ್ತಿದ್ದು, ಇದಕ್ಕೆ ಸೂಕ್ತ ಕ್ರಮ ವಹಿಸುವಂತೆ ಆಗ್ರಹಿಸಿ ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟದ ವತಿಯಿಂದ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯ ಮೇರೆಗೆ ಹಿಂದೂ ಕಾರ್ಯಕರ್ತರಿಗೆ ಪೊಲೀಸ್ ವಿಚಾರಣೆಯ ನೆಪದಲ್ಲಿ ಸ್ಥಳಿಯ ಪೊಲೀಸ್ ಠಾಣೆಯಿಂದ ಮಧ್ಯರಾತ್ರಿ ದೂರವಾಣಿ ಕರೆ ಮಾಡಿ, ನೋಟಿಸು ನೀಡದೆ ವಿಚಾರಣೆಗೆ ಪೊಲೀಸ್ ಠಾಣೆಗೆ ಕರೆಯುವುದು, ಮಧ್ಯರಾತ್ರಿ ಹಿಂದೂ ಕಾರ್ಯಕರ್ತರ ಮನೆಗೆ ಪೊಲೀಸರು ಹೋಗಿ ವಿಚಾರಣೆ ಮಾಡುವುದು, ಬಲವಂತವಾಗಿ ರಾತ್ರಿ ಅವರ ಪೋಟೊ ತೆಗೆಯುವುದು, ಅವರ ಮನೆಯ ಜಿಪಿಎಸ್ ಲೊಕೇಶನ್ ಸಂಗ್ರಹ ಮಾಡುವುದು. ಕಳೆದ ಅನೇಕ ದಶಕಗಳಿಂದ ಯಾವುದೇ ರೀತಿಯಲ್ಲಿ ಸಾಮಾಜಿಕ ಚಟುವಟಿಕೆಯಲ್ಲಿ ಭಾಗಿಯಾಗದ ಕೂಲಿ ಕಾರ್ಮಿಕರು, ವಯಸ್ಕರನ್ನು ಬಿಡದೇ ಮಧ್ಯರಾತ್ರಿ ಪೋನ್ ಮಾಡಿ, ಮನೆಗೆ ಹೋಗಿ ಕಿರುಕುಳ ನೀಡುವುದು ಮಾಡುತ್ತಿದ್ದಾರೆ. ಪೊಲೀಸರಿಂದ ಕಿರುಕುಳಕ್ಕೆ ಒಳಗಾದ ಹಿರಿಯ ನಾಗರಿಕರಿಗೆ ಪರಿಹಾರವನ್ನು ನೀಡಬೇಕು ಮತ್ತು ಸಂಬAಧಿಸಿದವರಿAದ ಲಿಖಿತ ಕ್ಷಮಾಪಣೆ ಪಡೆಯಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಹಿಂದೂಗಳು ಸಾಮಾಜಿಕ ಜಾಲತಾಣದಲ್ಲಿ ಏನೇ ಬರೆದರೂ ಸಹ ಅವರ ಮೇಲೆ ಪ್ರಕರಣವನ್ನು ದಾಖಲು ಮಾಡಿ ಬಂಧನ ಮಾಡಿ, ಅವರಿಗೆ ಕಿರುಕುಳ ನೀಡಿ, ಅವರ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಹತ್ತಿಕ್ಕಿ ಅವರ ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗುತ್ತದೆ. ಈ ರೀತಿಯಲ್ಲಿ ಪೋಲಿಸರು ಕಾನೂನಿನ ಎಲ್ಲಾ ನಿಯಮಗಳನ್ನು ಮೀರಿ ಹಿಂದೂ ಕಾರ್ಯಕರ್ತರಿಗೆ, ಸಾಮಾಜಿಕ ಕಾರ್ಯಕರ್ತರಿಗೆ ಕಿರುಕುಳ ನೀಡುವುದು ಭಾರತ ಸಂವಿಧಾನದ ಕಲಂ 14, 19 ಮತ್ತು 21 ರ ಉಲ್ಲಂಘನೆಯಾಗಿದೆ. ಅದಲ್ಲದೇ ಭಾರತೀಯ ನ್ಯಾಯ ಸಂಹಿತೆ ಕಲಂ 105, 107, 182, 352, 128 ಪ್ರಕಾರ ಇದು ಗಂಭೀರ ಅಪರಾಧವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಪ್ರಕರಣದಲ್ಲಿ ನೀಡಿದ ನಿರ್ದೇಶನದಂತೆ ನಡೆದುಕೊಳ್ಳುವಂತೆ ಆದೇಶವನ್ನು ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ
ಡಾ. ಸುದರ್ಶನ ಭಾರತೀಯ,ಸಂಸ್ಥಾಪಕರು,ಅಭಿರಾಮ ಧಾಮ,ಉಡುಪಿ, ಉಮೇಶ್ ಶೆಟ್ಟಿ,ಸಹ ಸಂಚಾಲಕರು,ಹಿAದೂ ಜಾಗರಣ ವೇದಿಕೆ, ಪ್ರಮೋದ್ ಉಚ್ಚಿಲ,ಹಿಂದೂ ಮಹಾಸಭಾ, ಜಯರಾಂ ಅಂಬೇಕಲ್ಲೂ ಶ್ರೀರಾಮ ಸೇನೆ , ಕಾರ್ಯ ಅಧ್ಯಕ್ಷರು, ಮಂಗಳೂರು ವಿಭಾಗ, ಚಂದ್ರ ಮೊಗವೀರ,ಸಮನ್ವಯ ಕರು,ಹಿಂದೂ ಜನಜಾಗೃತಿ ಸಮಿತಿ,ದಕ್ಷಿಣ ಕರ್ನಾಟಕ, ಗುರುಪ್ರಸಾದ್ ಶೆಣೈ ,ಸಾಮಾಜಿಕ ಕಾರ್ಯಕರ್ತರು, ರಾಘವೇಂದ್ರ ಆಚಾರ್ಯ ,ಹಿಂದೂ ಮುಖಂಡರು, ಸತ್ಯೇಂದ್ರ ಭಟ್ ,ಹಿಂದೂ ಮುಖಂಡರು, ನಾಗರಾಜ್ ,ವಕೀಲರು,ಉಡುಪಿ, ಸಂತೋಷ್ ಮೂಡುಬೆಳ್ಳೆ,ವಕೀಲರು,ಉಡುಪಿ, ಜ್ಞಾನೇಶ್ ಪಲಿಮಾರು, ಕಾರ್ಲ ಟೈಗರ್ಸ್ ಸಂಘಟನೆ ,ಕಾರ್ಕಳ ಹಾಗೂ ಹಿಂದೂ ಮುಖಂಡರು ಉಪಸ್ಥಿತರಿದ್ದರು.