ಕಾರ್ಕಳ: ಕಾರ್ಕಳದ ಮಾರಿಗುಡಿ ಬಳಿ ಪಾರ್ಕಿಂಗ್ ಮಾಡಿ ಹೋಗಿದ್ದ ಬೈಕನ್ನು ಹಾಡುಹಗಲೇ ಕಳ್ಳರು ಎಗರಿಸಿರುವ ಪ್ರಕರಣ ಫೆ.9 ರಂದು ನಡೆದಿದೆ.
ಇರ್ವತ್ತೂರಿನ ಅಕ್ಷಿತ್ ಎಂಬವರ ಬೈಕನ್ನು ಕಸಬಾ ಗ್ರಾಮದ ಮಾರಿಗುಡಿ ಬಳಿ ಇರುವ ಹೂವಿನ ಅಂಗಡಿ ಎದುರು ಪಾರ್ಕಿಂಗ್ ಮಾಡಿ ನಿಲ್ಲಿಸಿ ಹೋಗಿದ್ದು ಫೆ.9 ರಂದು ಮಧ್ಯಾಹ್ನ ಬಂದು ನೋಡಿದಾಗ ಬೈಕ್ ಕಳುವಾಗಿತ್ತು.
ಕಳವಾದ ಬೈಕ್ ಯಮಹಾ ಕಂಪೆನಿಯ ಎಫ್ ಝಡ್ ಮಾದರಿಯ ಕೆಂಪು ಬಣ್ಣದ್ದಾಗಿದ್ದು, ಸುಮಾರು 75,000 ರೂ. ಮೌಲ್ಯವನ್ನು ಹೊಂದಿದೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.