ಹೆಬ್ರಿ: ಅಂಗಡಿಯ ಹೆಂಚು ತೆಗೆದು ಸಾವಿರಾರು. ರೂ. ಮೌಲ್ಯದ ವಸ್ತುಗಳನ್ನು ಕಳವುಗೈದಿರುವ ಘಟನೆ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆ ಕ್ರಾಸ್ ಬಳಿ ಡಿ.3ರ ರಾತ್ರಿ ನಡೆದಿದೆ.
ಸುಜಾತ ಎಂಬವರು ಡಿ.3 ರಂದು ರಾತ್ರಿ ಎಂದಿನAತೆ ತಮ್ಮ “ಸುಜಾತ ಸ್ಟೋರ್” ಅಂಗಡಿಯನ್ನು ಮುಚ್ಚಿ ಮನೆಗೆ ತೆರಳಿದ್ದರು. ಮರುದಿನ (ಡಿ4) ಅಂಗಡಿಗೆ ಬಂದ ವೇಳೆ ಅಂಗಡಿ ಕಳ್ಳತವಾಗಿರುವುದು ಬೆಳಕಿಗೆ ಬಂದಿದೆ. ಅಂಗಡಿಯ ಶಟರ್ ಮುರಿದು ಒಳಪ್ರವೇಶಿಸಲು ಯತ್ನಿಸಿದ್ದ ಕಳ್ಳರು ಅದು ಅಸಾಧ್ಯವಾದಾಗ ಮಾಡಿನ ಮೇಲೆ ಹತ್ತಿ ಹೆಂಚು ತೆಗೆದು ಒಳನುಗ್ಗಿ 5000 ರೂ. ಮೌಲ್ಯದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.
ಈ ಕುರಿತು ಹಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.