ಉಡುಪಿ : ಕರಾವಳಿ ಬೈಪಾಸ್‌ನಲ್ಲಿ ಬೆಂಕಿ ಅವಘಡ: ಸಾವಿರಾರು ರೂ. ನಷ್ಟ

ಉಡುಪಿ: ಕರಾವಳಿ ಬೈಪಾಸ್‌ ಬಳಿಯ ಶಾರದಾ ಹೊಟೇಲ್‌ ಸಮೀಪದ ಸ್ಥಳಕ್ಕೆ ಆಕಸ್ಮಿಕ ಬೆಂಕಿ ತಗಲಿ ಸಾವಿರಾರು ರೂ. ನಷ್ಟ ಸಂಭವಿಸಿದೆ. ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿಯನ್ನು ನೀಡಿದ್ದು, ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಉಡುಪಿ ಹಾಗೂ ಮಲ್ಪೆ ಅಗ್ನಿಶಾಮಕ ದಳದ ಸಿಬಂಧಿಗಳು ಬೆಂಕಿ…

ಉಡುಪಿ : ಖಾಸಗಿ ಬಸ್ ನ ಸ್ಟೇರಿಂಗ್ ಕಟ್ : ಪ್ರಯಾಣಿಕರು ಅಪಾಯದಿಂದ ಪಾರು

ಉಡುಪಿ: ಉಡುಪಿ ಕರಾವಳಿ ಬೈಪಾಸ್‌ನಲ್ಲಿ ಖಾಸಗಿ ಬಸ್ಸಿನ ಸ್ಟೇರಿಂಗ್ ವೈಫಲ್ಯದಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಉಡುಪಿಯಿಂದ ಬ್ರಹ್ಮಾವರದ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸಿನ ಸ್ಟೇರಿಂಗ್ ಇದ್ದಕ್ಕಿದ್ದಂತೆ ಕೈಕೊಟ್ಟಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆಯ ಬದಿಯಲ್ಲಿ ನಿಂತಿತು. ಇದರಿಂದಾಗಿ ಕೆಲಕಾಲ…

ನಂದಳಿಕೆ: ಜ್ಞಾನದೇಗುಲಕ್ಕೆ ಕಳ್ಳರ ಲಗ್ಗೆ: ನಗದಿಗಾಗಿ ತಡಕಾಡಿ ಬರಿಗೈಯಲ್ಲಿ ವಾಪಾಸ್

ಕಾರ್ಕಳ: ಜ್ಞಾನದೇಗುಲ ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನುಗ್ಗಿದ ಕಳ್ಳರು ನಗದಿಗಾಗಿ ತಡಕಾಡಿ ಕೊನೆಗೆ ನಗದು ಸಿಗದೇ ಬರಿಗೈಯಲ್ಲೇ ವಾಪಾಸಾದ ಘಟನೆ ಮಾ.6ರ ರಾತ್ರಿ ನಡೆದಿದೆ. ಶಾಲೆಯ ಮುಖ್ಯೋಪಾಧ್ಯಾಯ ಕರುಣಾಕರ ಅವರು ಮಾ.6 ರಂದು ಸಂಜೆ…

ಶಿರ್ಲಾಲು: ಯುವಕ ನೇಣು ಬಿಗಿದು ಆತ್ಮಹತ್ಯೆ

ಅಜೆಕಾರು: ಕಾರ್ಕಳ ತಾಲೂಕಿನ ಶಿರ್ಲಾಲಿನಲ್ಲಿ ಗುರುವಾರ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿರ್ಲಾಲು ನಿವಾಸಿ ಸಹನ್ (29) ಮೃತ ದುರ್ದೈವಿ. ಸಹನ್ ವಿಪರೀತ ಮದ್ಪಾನ ಮಾಡುತ್ತಿದ್ದು, ಮದ್ಯಪಾನ ಬಿಡಿಸಲು ಮನೆಯವರು ಚಿಕಿತ್ಸೆಯನ್ನೂ ಕೊಡಿಸಿದ್ದರು. ಆದರೂ ಮದ್ಯಪಾನ ಬಿಡದ ಸಹನ್ ಇದೇ ವಿಚಾರಕ್ಕೆ…

ಸಿದ್ದರಾಮಯ್ಯ ಬಜೆಟ್ ಪಂಚ ಗ್ಯಾರಂಟಿಯಿಂದ ಸರ್ಕಾರ ದಿವಾಳಿಯಾಗಿದೆ ಎಂದವರಿಗೆ ತಕ್ಕ ಉತ್ತರ ನೀಡಿದೆ: ಕಾಂಗ್ರೆಸ್ ವಕ್ತಾರ ಬಿಪಿನ್’ಚಂದ್ರ ಪಾಲ್

ಕಾರ್ಕಳ: ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಭಾರಿ ಮಂಡಿಸಿರುವ 4,08,549 ಕೋಟಿ ರೂ. ವೆಚ್ಚದ ಬಜೆಟ್ ಅತ್ಯುತ್ತಮ ಬಜೆಟ್ ಆಗಿದೆ. ಈ ಬಜೆಟ್ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿ ಸರಕಾರ ದಿವಳಿಯಾಗಿದೆ ಎಂದು ಗುಲ್ಲೆಬ್ಬಿಸಿದ ವಿಪಕ್ಷಗಳಿಗೆ ನೀಡಿದ ಸಮರ್ಪಕ ಉತ್ತವಾಗಿದೆ ಎಂದು…

ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆ ಸರ್ಕಾರದ ಪ್ರಥಮ ಆದ್ಯತೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವುದೇ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ವಿವಿಧ ಬೇಡಿಕೆಗಳ…

ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಕರ್ನಾಟಕವನ್ನು ಆರ್ಥಿಕ ದುಸ್ಥತಿಗೆ ದೂಡಲಿದೆ: ಬಿಜೆಪಿ ಪ್ರದಾನ ಕಾರ್ಯದರ್ಶಿ ಸುನಿಲ್ ಕುಮಾರ್ ಟೀಕೆ

ಬೆಂಗಳೂರು:ರಾಜ್ಯವನ್ನು 1,16,000 ಕೋಟಿ ರೂ. ಸಾಲದ ಶೂಲಕ್ಕೆ ದೂಡಿರುವ ಸಿಎಂ ಸಿದ್ದರಾಮಯ್ಯನವರು ಮಂಡಿಸಿದ 16ನೇ ಬಜೆಟ್ ಕರ್ನಾಟಕವನ್ನು ಅಕ್ಷರಶಃ ಆರ್ಥಿಕ ದುಸ್ಥಿತಿಗೆ ದೂಡಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸುನಿಲ್ ಕುಮಾರ್ ಟೀಕಿಸಿದ್ದಾರೆ. ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಕುರಿತು…

ಬೈಲೂರು : ಕಾಂಗ್ರೆಸ್ ವಿರುದ್ದ ಬಿಜೆಪಿ ಪ್ರತಿಭಟನೆ: ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ರಾಜಕೀಯ ಲಾಭ ಪಡೆಯುವ ಕಾಂಗ್ರೆಸ್ ಹುನ್ನಾರ ಬಟಾಬಯಲು: ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್

ಕಾರ್ಕಳ: ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಯೋಜನೆ ರೂಪಿಸಲಾಗಿದೆ. ಆದರೆ ಥೀಮ್ ಪಾರ್ಕಿನ ಮುಂದುವರಿದ ಕಾಮಗಾರಿಗೆ ತಡೆಯೊಡ್ಡಿ ಯೋಜನೆಯನ್ನೇ ಹಳ್ಳ ಹಿಡಿಸಲು ಕಾಂಗ್ರೆಸ್ ಮುಂದಾಗಿದೆ. ಮಾತ್ರವಲ್ಲದೇ ಕೇವಲ ರಾಜಕೀಯ ಲಾಭಕ್ಕಾಗಿ ಪರಶುರಾಮ ಥೀಮ್ ಪಾರ್ಕ್…

ಮೋಸ್ಟ್ ವಾಂಟೆಡ್ ರೌಡಿ ಶೀಟರ್ ಕುಣಿಗಲ್ ಗಿರಿ ಅರೆಸ್ಟ್

ಬೆಂಗಳೂರು: ಮೋಸ್ಟ್ ವಾಂಟೆಡ್ ರೌಡಿ ಶೀಟರ್ ಕುಣಿಗಲ್ ಗಿರಿಯನ್ನು ಬೆಂಗಳೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಗಿರಿ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸು ದಾಖಲಿಸಲಾಗಿದ್ದು, ಸದ್ಯ ಗಿರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಬ್ಯಾಡರಹಳ್ಳಿಯಲ್ಲಿ ಕಳೆದ ಎರಡ್ಮೂರು ತಿಂಗಳುಗಳಿಂದ ಬಾಡಿಗೆ ಮನೆ…

ಸುಳ್ಯ : ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಬೃಹತ್‌ ಕಂಟೇನರ್‌ : ತಪ್ಪಿದ ಭಾರೀ ಅನಾಹುತ

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಬೃಹತ್‌ ಕಂಟೇನರ್‌ ವಾಹನವೊಂದು ಮಾಣಿ-ಮೈಸೂರು ಹೆದ್ದಾರಿಯ ಸುಳ್ಯ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಪಲ್ಟಿಯಾಗಿದ್ದು, ಬಾರೀ ಅನಾಹುತ ತಪ್ಪಿದೆ. ಮಂಡ್ಯದಿಂದ ತರಕಾರಿ, ಹಣ್ಣು-ಹಂಪಲು ಸಾಗಾಟ ನಡೆಸುವ ಕಂಟೇನರ್‌ ಸುಳ್ಯ ನಗರದ ಪೊಲೀಸ್‌ ಠಾಣಾ ಬಳಿಯ…