ಕಾರ್ಕಳ: ದೇಶದ ಪರಮೋಚ್ಚ ಸ್ಥಾನದಲ್ಲಿರುವ ಈ ನೆಲದ ಮೂಲ ನಿವಾಸಿ ಮಹಿಳೆ ದ್ರೌಪದಿ ಮುರ್ಮು ರವರು ದುರ್ಬಲ ಹಾಗೂ ಬಡಪಾಯಿ ಮಹಿಳೆ ಎಂದು ಮಾಧ್ಯಮಗಳ ಎದುರು ಅವಹೇಳನ ಮಾಡಿರುವ ಸೋನಿಯಾ ಗಾಂಧಿ ತಕ್ಷಣವೇ ಹೇಳಿಕೆಯನ್ನು ವಾಪಸ್ ಪಡೆದುಕೊಳ್ಳುವುದು ಜತೆಗೆ ದೇಶದ ಸಮಸ್ತ ಆದಿವಾಸಿ ಬುಡಕಟ್ಟು ಸಮುದಾಯದವರ ಕ್ಷಮೆಯಾಚಿಸಬೇಕೆಂದು ಬುಡಕಟ್ಟು ಸಮುದಾಯದ ಮುಖಂಡ ಈದು ಶ್ರೀಧರ ಗೌಡ ಹೇಳಿದ್ದಾರೆ.
ಬಿಜೆಪಿ ಪಕ್ಷವು ತಳ ಸಮುದಾಯದ ಮಹಿಳೆಯೋರ್ವಳಿಗೆ ದೇಶದ ಉನ್ನತ ಸ್ಥಾನಮಾನವನ್ನು ನೀಡಿರುವುದನ್ನು ಕಾಂಗ್ರೆಸ್ ಗೆ ಸಹಿಸಿಕೊಳ್ಳಲಾಗುವುದಿಲ್ಲವೇ? ದೇಶದ ಸಮಸ್ತ ತಳ ಸಮುದಾಯಗಳು, ಆರ್ಥಿಕವಾಗಿ ಗಟ್ಟಿಗೊಳ್ಳುವ ನಿಟ್ಟಿನಲ್ಲಿ ರಾಷ್ಟ್ರಪತಿಗಳು ಭಾಷಣ ಮಾಡುವ ಸಂದರ್ಭದಲ್ಲಿ ಸುಸ್ತಾಗಲು ಸಾಧ್ಯವಿಲ್ಲ, ಕಾಂಗ್ರೆಸ್ ನಾಯಕಿ ಈ ರೀತಿಯ ದುರಹಂಕಾರದ ಹೇಳಿಕೆಗಳನ್ನು ನೀಡುವಾಗ ನಾಲಗೆ ಸ್ವಲ್ಪ ಬಿಗಿ ಹಿಡಿಯಬೇಕು ದೇಶದ ಪ್ರಥಮ ಪ್ರಜೆಯ ಬಗ್ಗೆ ಈ ರೀತಿಯಾಗಿ ಲಘುವಾದ ಹೇಳಿಕೆ ನೀಡುವ ಸೋನಿಯಾ ರವರು ಮುಂದೆ ಜನಸಾಮಾನ್ಯ ಬುಡಕಟ್ಟು ಜನರ ಬಗ್ಗೆ ಕೀಳಾಗಿ ಪ್ರತಿಕ್ರಿಯಿಸದೇ ಇರುವರೆ ಎಂಬುದಾಗಿ ಆದಿವಾಸಿಗಳು ಯೋಚಿಸಬೇಕಾಗಿದೆ. ರಾಷ್ಟ್ರಪತಿಗಳ ಬಗ್ಗೆ ನೀಡಿದ ಈ ಹೇಳಿಕೆ ಕೇವಲ ಆದಿವಾಸಿಗಳಿಗೆ ಅಲ್ಲ ಸಮಸ್ತ ಭಾರತೀಯರಿಗೆ ಮಾಡಿದ ಅವಮಾನ ಹಾಗಾಗಿ ದೇಶದ ಜನರಲ್ಲಿ ಕ್ಷಮೆಯನ್ನು ಕೇಳಬೇಕು ಎಂದು ಶ್ರೀಧರ ಗೌಡ ಈದು ಒತ್ತಾಯಿಸಿದ್ದಾರೆ.