Month: October 2026

ಯಕ್ಷಲೋಕದ ಧ್ರುವತಾರೆ ಥಂಡಿಮನೆ ಅಸ್ತಂಗತ: ಬಡಗುತಿಟ್ಟಿನ ಖ್ಯಾತ ಹಿರಿಯ ಯಕ್ಷಗಾನ ಕಲಾವಿದ ಶ್ರೀಪಾದ ಭಟ್ ಇನ್ನಿಲ್ಲ

ಮಂಗಳೂರು, ಅ.,15:ಬಡಗುತಿಟ್ಟು ಯಕ್ಷಗಾನದ ಅನಭಿಷಿಕ್ತ ದೊರೆಯಾಗಿ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಹಿರಿಯ ವೇಷಧಾರಿ ಮೇರುಕಲಾವಿದ ಥಂಡಿಮನೆ ಶ್ರೀಪಾದ ಭಟ್(62) ಅ. 15 ರಂದು ಗುರುವಾರ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಈ ಮೂಲಕ ಯಕ್ಷಗಾನದ ಧ್ರುವತಾರೆಯೊಂದು ಅಸ್ತಂಗತವಾಯಿತು. ಬಡಗುತಿಟ್ಟಿನ ಪ್ರಸಿದ್ಧ ಡೇರೆಮೇಳಗಳಾದ…

ತಾಲೂಕು ಮಟ್ಟದ ಯುವ ಸಂಸತ್ತು ಸಭೆ- 2026-ಪ್ರಪಂಚದಲ್ಲಿಯೇ ಬಲಿಷ್ಟವಾದ ಪ್ರಜಾಪ್ರಭುತ್ವ ರಾಷ್ಟ್ರ ಭಾರತ : ಶಾಸಕ ವಿ ಸುನಿಲ್ ಕುಮಾರ್

ಕಾರ್ಕಳ,ಅ.15: ಪ್ರಪಂಚದಲ್ಲಿಯೇ ಅತ್ಯಂತ ಬಲಿಷ್ಟವಾದ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು.ಯಾವುದೇ ಕ್ಷೇತ್ರದಲ್ಲಿ ತಾವು ಯಶಸ್ವಿಯಾಗಬೇಕಾದರೆ ಪೂರ್ವಸಿದ್ಧತೆ ಎಂಬುದು ಬಹಳ ಮುಖ್ಯ.ಈ ವಿಚಾರವನ್ನು ಇಂದಿನ ಯುವಕರು ಅರ್ಥಮಾಡಿಕೊಳ್ಳಬೇಕು.ಆ ಮೂಲಕ ರಾಷ್ಟ್ರದುನ್ನತಿಗೆ, ನಾಡ ಏಳಿಗೆಗೆ ಬದ್ಧರಾಗ ಬೇಕು ಎಂದು ಕಾರ್ಕಳ ಕ್ಷೇತ್ರದ ಶಾಸಕರಾದ ವಿ ಸುನಿಲ್…

ಸಿಇಸಿ ಜ್ಞಾನೇಶ್ ಕುಮಾರ್ ಮತ್ತು ಎಸ್‌ಐಆರ್ ಪ್ರಶ್ನಿಸಿ ರಾಹುಲ್ ಗಾಂಧಿ, ವಿಪಕ್ಷದ ನಾಯಕರ ಅರ್ಜಿ: ಇಂದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ

ನವದೆಹಲಿ, ಅ.15: ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮಗಳು ನಡೆದಿವೆ ಮತ್ತು ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಏಕಪಕ್ಷೀಯವಾಗಿ ಅಳಿಸಿಹಾಕಲಾಗಿದೆ ಎಂದು ಆರೋಪಿಸಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ‘ಇಂಡಿ’…

ಕೊಲ್ಲೂರು ದೇವಸ್ಥಾನದಲ್ಲಿ ಲೈಟ್ ಸ್ಟ್ಯಾಂಡ್  ಬಿದ್ದು ಮೂವರಿಗೆ ಗಾಯ

ಕುಂದಾಪುರ, ಅ.14: ಶರನ್ನವರಾತ್ರಿ ಮಹೋತ್ಸವದ ಧಾರ್ಮಿಕ ಸಂಭ್ರಮ ಹಾಗೂ ಜನದಟ್ಟಣೆಯಿಂದ ಕೂಡಿದ್ದ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿ ಭಾರಿ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ವಾಣಿಜ್ಯ ಸಂಕೀರ್ಣದ ಮಹಡಿಗೆ ಅಳವಡಿಸಲಾಗಿದ್ದ ಬೃಹತ್ ಗಾತ್ರದ ಅಲಂಕಾರಿಕ ಲೈಟ್ ಸೆಟ್ ಗಾಳಿಯ…

ಎಣ್ಣೆಹೊಳೆ ಸೇತುವೆಯ ಬಳಿ ವ್ಯಕ್ತಿಯ ಶವ ಪತ್ತೆ: ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

ಕಾರ್ಕಳ, ಅ. 14: ಮರ್ಣೆ ಗ್ರಾಮದ ಎಣ್ಣೆಹೊಳೆ ಸೇತುವೆಯ ಕೆಳಗೆ ಹೊಳೆಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಮಧ್ಯ ವಯಸ್ಸಿನ ವ್ಯಕ್ತಿಯ ಮೃತದೇಹವು ಹೊಳೆಯ ಬದಿಯ ಸಿಮೆಂಟ್ ದಂಡೆಯ ಮೇಲೆ ಕವುಚಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಣಜಾರು ಗ್ರಾಮದ ಕಡೆಬರ್ಕೆ ನಿವಾಸಿ ಸುರೇಶ್…

ಕೊಡಗಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ: ನಾಲ್ವರ ಬಂಧನ

ಮಡಿಕೇರಿ, ಅ.14: ಕರ್ನಾಟಕದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ಹಾವಳಿ ತೀವ್ರಗೊಳ್ಳುತ್ತಿದ್ದು. ಇತ್ತೀಚೆಗಷ್ಟೇ ಬೆಂಗಳೂರಿನ ಬೆಳ್ಳಂದೂರು ಮತ್ತು ವರ್ತೂರು ಭಾಗಗಳಲ್ಲಿ ನಡೆಸಲಾದ ಬೃಹತ್ ಕಾರ್ಯಾಚರಣೆಯಲ್ಲಿ 160ಕ್ಕೂ ಹೆಚ್ಚು ಬಾಂಗ್ಲಾ ಪ್ರಜೆಗಳನ್ನು ಗಡಿಪಾರು ಮಾಡಲಾಗಿತ್ತು. ಇದೀಗ ಮತ್ತೆ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆಯಾಗಿದ್ದು, ಕೊಡಗು…

ಪೂರಕ ಸಾಕ್ಷ್ಯಾಧಾರಗಳಿಲ್ಲದೇ ಆರೋಪಪಟ್ಟಿ ಸಲ್ಲಿಸುವುದು ನಾಗರಿಕರ ಬದುಕುವ ಹಕ್ಕಿನ ಉಲ್ಲಂಘನೆ : ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು,ಅ.14: ಯಾವುದೇ ಪೂರಕ ಸಾಕ್ಷ್ಯಾಧಾರಗಳಿಲ್ಲದೇ ಕೇವಲ ದೂರುದಾರರ ಸಾಮಾನ್ಯ ಹಾಗೂ ಅಸ್ಪಷ್ಟ ಆರೋಪಗಳನ್ನಷ್ಟೇ ಆಧಾರವಾಗಿಟ್ಟುಕೊಂಡು ಆರೋಪಪಟ್ಟಿ ಸಲ್ಲಿಸುವುದು ಸಂವಿಧಾನದ 21ನೇ ವಿಧಿಯಡಿ ಪ್ರತಿಯೊಬ್ಬ ಪ್ರಜೆಗೂ ಖಾತರಿಪಡಿಸಲಾಗಿರುವ ಬದುಕುವ ಹಕ್ಕಿಗೆ ಧಕ್ಕೆಯಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕಂಪೆನಿಯೊಂದರ ಆಂತರಿಕ…

ಸಹ ಪೈಲಟ್ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸ್ಮಿತ್ ಮಚ್ಛರ್ ಗೆ ನಿಗೂಢ ಮಾತ್ರೆ ನೀಡಲು ಯತ್ನ : ಉಗ್ರ ನಂಟು ಶಂಕೆ ಮೇರೆಗೆ ದುಬೈನ ಇಬ್ಬರು ಪೈಲಟ್‌ಗಳು ವಶಕ್ಕೆ!

ನವದೆಹಲಿ,ಅ.14: ಫೈದುಬೈ ವಿಮಾನದಲ್ಲಿ ಭಾರತೀಯ ಪೈಲಟ್ ಸ್ಮಿತ್ ಮಚ್ಛರ್ ಮೇಲೆ ಚೂರಿಯಿಂದ ಇರಿದು ಹತ್ಯೆಗೆ ಯತ್ನಿಸಿದ್ದ ಒಮಾನ್ ಮೂಲದ ಸಹಪೈಲಟ್ ಹಮಾಮ್ ಉಗ್ರರ ನಂಟು ಹೊಂದಿದ್ದ ಇಬ್ಬರು ಪೈಲಟ್`ಗಳನ್ನು ಯುಎಇ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನುವ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.ವಶಕ್ಕೆ ಪಡೆದ…

ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಮೇಲೆ ಮಹಿಳೆಯಿಂದ ಹಲ್ಲೆ ಯತ್ನ! : ದುರ್ಗಾಪೂಜಾ ಪೆಂಡಾಲ್ ಉದ್ಘಾಟನೆಗೆ ತೆರಳುವ ವೇಳೆ  ಘಟನೆ

ಕೋಲ್ಕತ್ತಾ,ಅ.14: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ಕೋಲ್ಕತ್ತಾದ ಕಾಲಿಘಾಟ್‌ನಲ್ಲಿರುವ ಅವರ ನಿವಾಸದ ಮುಂಭಾಗದಲ್ಲೇ ಮಹಿಳೆಯೊಬ್ಬಳು ಹಲ್ಲೆ ನಡೆಸಲು ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ ಎಂದು TMC ಮುಖಂಡರು ಆರೋಪಿಸಿದ್ದಾರೆ. ಈ ಘಟನೆಯು ಮಮತಾ ಬ್ಯಾನರ್ಜಿ ಅವರ…

ನಾಳೆ (ಅ.14) ಕಾರ್ಕಳದಲ್ಲಿ “ಶೈನ್ ಎನರ್ಜಿ ಸೊಲ್ಯುಶನ್ಸ್” ಶುಭಾರಂಭ

ಕಾರ್ಕಳ, ಅ.13: ಕಾರ್ಕಳದ ರಥಬೀದಿಯ ಪ್ರತಿಭಾ ನರ್ಸಿಂಗ್ ಹೋಂ ಬಳಿ ಸೋಲಾರ್ ಉಪಕರಣಗಳ ನೂತನ ಮಳಿಗೆ ಶೈನ್ ಎನರ್ಜಿ ಸೊಲ್ಯುಶನ್ ನಾಳೆ ಶುಭಾರಂಭಗೊಳ್ಳಲಿದೆ. ಕಳೆದ 13 ವರ್ಷಗಳ ಹಿಂದೆ ಕಾರ್ಕಳದಲ್ಲಿ ಆರಂಭಗೊAಡಿದ್ದ ಶೈನ್ ಎನರ್ಜಿ ಸೊಲ್ಯುಷನ್ ಸಂಸ್ಥೆ ಸೋಲಾರ್ ಕ್ಷೇತ್ರದಲ್ಲಿ ಅತ್ಯಂತ…