Category: ಸ್ಥಳೀಯ ಸುದ್ದಿಗಳು

ಶ್ಯಾಮ್ ಸುಂದರ್ ಅವರಿಗೆ ಮಿಸ್ಟರ್ ಕರ್ನಾಟಕ ಪ್ರಶಸ್ತಿ

ನಿಟ್ಟೆ: ಕಾರ್ಕಳದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ಯಾಮ್ ಸುಂದರ್ ಎಂ ಅವರು ಇತ್ತೀಚೆಗೆ ಉಡುಪಿಯಲ್ಲಿ ನಡೆದ ರಾಜ್ಯ ಮಟ್ಟದ ಮಿಸ್ಟರ್ ಕರ್ನಾಟಕ ಅತ್ಯುತ್ತಮ ದೈಹಿಕ ಸ್ಪರ್ಧೆಯಲ್ಲಿ ಮಾಸ್ಟರ್ಸ್-3 ವಿಭಾಗದಲ್ಲಿ ಚಿನ್ನದ ಪದಕವನ್ನು ಗಳಿಸಿದ್ದಾರೆ.

ಖ್ಯಾತ ಮದ್ದಳೆ ವಾದಕ ಶಶಿಕುಮಾರ್ ಬೆಳ್ಕಳೆಗೆ ದಿ.ಬೇಳಂಜೆ ತಿಮ್ಮಪ್ಪ ನಾಯ್ಕ್ ಪ್ರಶಸ್ತಿ: ಡಿ.29 ರಂದು ಪ್ರಶಸ್ತಿ ಪ್ರದಾನ

ಉಡುಪಿ: ದುರ್ಗಾಪರಮೇಶ್ವರಿ ಮರಾಠಿ ಸಮುದಾಯ ಕಲಾಸಂಘ ಹಾಗೂ ಬೇಳಂಜೆ ತಿಮ್ಮಪ್ಪ ನಾಯ್ಕ್ ಪ್ರಶಸ್ತಿ ಸಮಿತಿ ವತಿಯಿಂದ ಕೊಡಮಾಡುವ ದಿ.ಬೇಳಂಜೆ ತಿಮ್ಮಪ್ಪ ನಾಯ್ಕ್ ಪ್ರಶಸ್ತಿಗೆ ಸಾಲಿಗ್ರಾಮ ಮೇಳದ ಖ್ಯಾತ ಮದ್ದಳೆವಾದಕ ಶಶಿಕುಮಾರ್ ಬೆಳ್ಕಳೆ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಡಿ.29 ರಂದು…

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನದಿಂದ ವಿಶ್ವಮಾನ್ಯ ಆರ್ಥಿಕ ಹಾಗೂ ಶಿಕ್ಷಣ ತಜ್ಞನನ್ನು ಕಳೆದುಕೊಂಡಂತಾಗಿದೆ: ಬಿಪಿನ್  ಚಂದ್ರ ಪಾಲ್

ಕಾರ್ಕಳ:ಭಾರತದ ಆರ್ಥಿಕ ಕ್ಷೇತ್ರದ ಕ್ರಾಂತಿಯ ಹರಿಕಾರ ವಿಶ್ವಮಾನ್ಯ ಆರ್ಥಿಕ ಹಾಗೂ ಶಿಕ್ಷಣ ತಜ್ಞ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನದಿಂದ ದೇಶವು ಒಬ್ಬ ಮಹಾ ಅಭಿವೃದ್ದಿಯ ಹರಿಕಾರನನ್ನು ಕಳಕೊಂಡಂತಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರ ಪಾಲ್ ಹೇಳಿದ್ದಾರೆ.…

ಮಾಜಿ ಪ್ರಧಾನಿ ನಿಧನ ಹಿನ್ನಲೆ: ಮುಳ್ಕಾಡು ಶಾಲಾ ವಾರ್ಷಿಕೋತ್ಸವ ಜ.4 ಕ್ಕೆ ಮುಂದೂಡಿಕೆ

ಕಾರ್ಕಳ: ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನಿಧನ ಪ್ರಯುಕ್ತ ಒಂದು ವಾರ ಶೋಕಾಚರಣೆ ಇರುವ ಕಾರಣದಿಂದ ನಾಳೆ (ಡಿ.28ರಂದು) ನಡೆಯಬೇಕಿದ್ದ ಕಾರ್ಕಳ ತಾಲೂಕಿನ ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಳ್ಕಾಡು ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮವನ್ನು ಇದೇ ಬರುವ…

ಸಿ.ಎ ಅಂತಿಮ ಪರೀಕ್ಷೆ ತೇರ್ಗಡೆ : ಜ್ಞಾನಸುಧಾ ಹಳೆ ವಿದ್ಯಾರ್ಥಿಗಳ ಸಾಧನೆ

ಕಾರ್ಕಳ : ಐ.ಸಿ.ಎ.ಐ ನಡೆಸಿದ 2024ರ ನವೆಂಬರ್ – ಸಿ.ಎ ಅಂತಿಮ ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಹಳೆವಿದ್ಯಾರ್ಥಿಗಳಾದ, ಕಾರ್ಕಳ ಕಾಬೆಟ್ಟು ನಿವಾಸಿ ವಿಶ್ವನಾಥ ಶೆಟ್ಟಿ ಮತ್ತು ಗೀತಾ ಶೆಟ್ಟಿ ದಂಪತಿಗಳ ಸುಪುತ್ರನಾದ ಸೋಮನಾಥ್ ವಿ. ಶೆಟ್ಟಿ, ಜಾರ್ಕಳದ…

ಅಟಲ್ ಬಿಹಾರಿ ವಾಜಪೇಯಿ ಸಮಾಜದ ಆದರ್ಶ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಕೋಟ : ಅಟಲ್ ಬಿಹಾರಿ ವಾಜಪೇಯಿ ಅವರು ಸಮಾಜಕ್ಕೆ ಮತ್ತು ರಾಜಕಾರಣಕ್ಕೆ ಆದರ್ಶ ಬದುಕಿನ ಮಾರ್ಗವನ್ನು ತೋರಿಸಿಕೊಟ್ಟವರು. ಸಚ್ಚಾರಿತ್ರ‍್ಯ ರಾಜಕಾರಣಕ್ಕೆ ಸ್ಪಷ್ಟ ನಿದರ್ಶನವಾಗಿ ಬಾಳಿ ಬದುಕಿದ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನೋತ್ಸವ ಭಾರತದ ಕೋಟ್ಯಂತರ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ…

ಡಿ.26 ರಿಂದ 30ರ ವರೆಗೆ ಕಾರ್ಕಳ ಸ್ವರಾಜ್ ಮೈದಾನದಲ್ಲಿ ಕಾರ್ಲೋತ್ಸವ: ಆಹಾರ ಮೇಳದಲ್ಲಿ ಗಮನ ಸೆಳೆಯುತ್ತಿರುವ “ಮಲ್ನಾಡ್ ಮಹಾರಾಜ್ ದಮ್ ಬಿರಿಯಾನಿ”

ಕಾರ್ಕಳ: ಕಾರ್ಕಳದ ಸ್ವರಾಜ್ ಮೈದಾನದಲ್ಲಿ ಡಿ.26 ರಿಂದ 30ರ ವರೆಗೆ “ಕಾರ್ಲೋತ್ಸವ” ನಡೆಯುತ್ತಿದ್ದು, ಉತ್ಸವದ ಆಹಾರ ಮೇಳದಲ್ಲಿ “ಮಲ್ನಾಡ್ ಮಹಾರಾಜ್ ದಮ್ ಬಿರಿಯಾನಿ” ಗಮನ ಸೆಳೆಯುತ್ತಿದೆ. ಸ್ಥಳಿಯ ಜೋಡುರಸ್ತೆ ಯುವಕರ ತಂಡದಿAದ ಪ್ರಪ್ರಥವಾಗಿ ಪರಶುರಾಮ ಥೀಂ ಪಾರ್ಕ್ ನ ಆಹಾರ ಮೇಳದಲ್ಲಿ…

ಕಾರ್ಕಳ: ಸುಶಾಸನ ದಿನಾಚರಣೆ, ಯೋಗ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ

ಕಾರ್ಕಳ: ಭಾರತೀಯ ಜನತಾ ಪಾರ್ಟಿ ಕಾರ್ಕಳ ಮಂಡಲದ ಮಹಿಳಾ ಮೋರ್ಚಾ ವತಿಯಿಂದ ಸುಶಾಸನ ದಿನ, ಯೋಗ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ಡಿ.25 ರಂದು ಕಾರ್ಕಳ ಶಾಸಕರ ಜನಸೇವಾ ಕಛೇರಿಯಲ್ಲಿ ಜರುಗಿತು. ಅಟಲ್ ಬಿಹಾರಿ ವಾಜಪೇಯಿಯವರ ಜಯಂತಿಯ ಅಂಗವಾಗಿ ಶಾಸಕರಾದ ವಿ ಸುನಿಲ್…

ಮುರತ್ತಂಗಡಿ-ಇರುವತ್ತೂರು ಸಂಪರ್ಕ ರಸ್ತೆಯಲ್ಲಿ ಗುಡ್ಡ ಕುಸಿದು ವಿದ್ಯುತ್ ಕಂಬ ಬೀಳುವ ಆತಂಕ:ಸೂಕ್ತ ಕ್ರಮ ವಹಿಸುವಂತೆ ಸಾರ್ವಜನಿಕರ ಆಗ್ರಹ

ಕಾರ್ಕಳ : ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರತಂಗಡಿ- ಇರುವತ್ತೂರು ಸಂಪರ್ಕ ರಸ್ತೆಯಲ್ಲಿ ಗುಡ್ಡ ಕಡಿದು ವಿದ್ಯುತ್ ಕಂಬ ಬೀಳುವ ಸ್ಥಿತಿಯಲ್ಲಿದ್ದು, ಭಾರಿ ಅಪಾಯದ ಮುನ್ಸೂಚನೆ ಎದುರಾಗಿದೆ. ಕಾರ್ಕಳ ತಾಲೂಕು ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರತಂಗಡಿಯಿAದ ಇರುವತ್ತೂರಿಗೆ ಹೋಗುವ ರಸ್ತೆಯಲ್ಲಿ…

ಮಾಳದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನ ಎನ್.ಎಸ್.ಎಸ್ ಶಿಬಿರ

ಕಾರ್ಕಳ: ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎನ್‌ಎಸ್‌ಎಸ್ ವಿದ್ಯಾರ್ಥಿಗಳ ವಾರ್ಷಿಕ ವಿಶೇಷ ಶಿಬಿರವು ಡಿ.24ರಿಂದ 30ರವರೆಗೆ ಮಾಳದ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದ್ದು, ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಡಿ.24 ರಂದು ಉದ್ಘಾಟಿಸಿದರು. ಬಳಿಕ…