Category: ಸ್ಥಳೀಯ ಸುದ್ದಿಗಳು

ಕಾರ್ಕಳ ಎಸ್‌ಕೆಪಿಎ ವಲಯದ 31ನೇ ವಾರ್ಷಿಕ ಸಭೆ

ಕಾರ್ಕಳ,ಆ.11: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.) ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ, ಕಾರ್ಕಳ ವಲಯದ 31ನೇ ವಾರ್ಷಿಕ ಸಭೆ ಅಧ್ಯಕ್ಷ ಪ್ರಮೋದ್ ಚಂದ್ರ ಪೈ ಮುನಿಯಾಲ್ ಅವರ ಅಧ್ಯಕ್ಷತೆಯಲ್ಲಿ ಕಾರ್ಕಳದ ಹೋಟೆಲ್ ಪ್ರಕಾಶ್‌ನಲ್ಲಿ ನಡೆಯಿತು. ಕಾರ್ಯಕ್ರಮವನ್ನು…

ರಸ್ತೆ ಅಗಲೀಕರಣ ನೆಪದಲ್ಲಿ ಅಕ್ರಮವಾಗಿ ಮರಗಳಿಗೆ ಕೊಡಲಿಯೇಟು: ನಿಯಮಾವಳಿಗಳನ್ನು ಗಾಳಿಗೆ ತೂರಿ ಮರ ಕಡಿದ ಗುತ್ತಿಗೆದಾರ: ಕಣ್ಣುಮುಚ್ಚಿ ಕುಳಿತ ಅರಣ್ಯ ಇಲಾಖೆ ಅಧಿಕಾರಿಗಳು

ಕಾರ್ಕಳ,ಆ.11: ರಸ್ತೆ ಅಗಲೀಕರಣ ಕಾಮಗಾರಿಯ ನೆಪದಲ್ಲಿ ಕಾರ್ಕಳ ಸರ್ವಜ್ಞ ವೃತ್ತದ ಸಮೀಪ ಮಕ್ಕಳ ಆಟದ ಮಿನಿ ಪಾರ್ಕ್ ಬಳಿ ನೆರಳಿಗಾಗಿ ನೆಟ್ಟ ಮರಗಳನ್ನು ಗುತ್ತಿಗೆದಾರ ಅಕ್ರಮವಾಗಿ ಏಕಾಎಕಿ ಕಡಿದು ನಾಶ ಮಾಡಿದ್ದು,ಅರಣ್ಯಾಧಿಕಾರಿಗಳು ಹಾಗೂ ಗುತ್ತಿಗೆದಾರನ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ…

ಆ.16 ರಂದು ಅಜೆಕಾರು ವಿಷ್ಣು ಫ್ರೆಂಡ್ಸ್‌ ವತಿಯಿಂದ 4ನೇ ವರ್ಷದ ಆಟಿಡೊಂಜಿ ಕೆಸರ್ದ ಗೊಬ್ಬು ಕಾರ್ಯಕ್ರಮ

ಅಜೆಕಾರು, ಆ.11: ವಿಷ್ಣು ಫ್ರೆಂಡ್ಸ್ ಅಜೆಕಾರು ಹಾಗೂ ವಿಷ್ಣು ಮಹಿಳಾ ಘಟಕ ಅಜೆಕಾರು ಇವರ ಜಂಟೀ ಸಹಯೋಗದಲ್ಲಿ ಆಗಸ್ಟ್ 16ರಂದು ಭಾನುವಾರ ಬೆಳಗ್ಗೆ 9 ಗಂಟೆಯಿಂದ 4ನೇ ವರ್ಷದ ಆಟಿಡೊಂಜಿ ಕೆಸರ್ದ ಗೊಬ್ಬು ಕಾರ್ಯಕ್ರಮವು ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ಬಳಿಯ ಗದ್ದೆಯಲ್ಲಿ…

ಕಾರ್ಕಳ: ಫೇಸ್ಬುಕ್ ವಿಡಿಯೋದಲ್ಲಿ ಹಣವನ್ನು ಡಬಲ್ ಮಾಡುವುದಾಗಿ ನಂಬಿಸಿ 32 ಲಕ್ಷಕ್ಕೂ ಮಿಕ್ಕಿ ವಂಚನೆ

ಕಾರ್ಕಳ,ಆ.11: ಕಾರ್ಕಳದ ವ್ಯಕ್ತಿಯೊಬ್ಬರಿಗೆ ಫೇಸ್ಬುಕ್ ವೀಡಿಯೋದಲ್ಲಿ ಆ್ಯಪ್ ನಲ್ಲಿ ಹಣ ಹೂಡಿಕೆ ಮಾಡಿದರೆ ಡಬಲ್ ಲಾಭಾಂಶ ಕೊಡುವುದಾಗಿ ನಂಬಿಸಿ 32,68,000 ರೂ. ವಂಚನೆ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಲಕ್ಷ್ಮಣ್ ಎಂಬವರಿಗೆ ಕಳೆದ ಜುಲೈ.17 ರಂದು ಫೇಸ್‌ಬುಕ್ ನಲ್ಲಿ ಒಂದು ವಿಡೀಯೋ…

ನಿಟ್ಟೆ ಡಾ.ಎನ್.ಎಸ್.ಎ.ಎಮ್.ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್ ಉದ್ಘಾಟನೆ- ವಿದ್ಯಾರ್ಥಿಗಳು ಸಂವಹನ ಕೌಶಲ್ಯವನ್ನು ಬೆಳೆಸಿಕೊಳ್ಳುವ ಮೂಲಕ ಯಶಸ್ಸಿನತ್ತ ಸಾಗಬೇಕು-ಡಾ.ಸುಧಾಕರ ಶೆಟ್ಟಿ

ಕಾರ್ಕಳ,ಆ.11: ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜು ನಿಟ್ಟೆಯ 2026-27 ನೇ ಸಾಲಿನ ವಿದ್ಯಾರ್ಥಿ ಪರಿಷತ್ ಉದ್ಘಾಟನೆ ಮತ್ತು ಪದಗ್ರಹಣ ಕಾರ್ಯಕ್ರಮವನ್ನು ಆ.6 ರಂದು ಅಜೆಕಾರ್ ಪದ್ಮ ಗೋಪಾಲ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಉದ್ಘಾಟಿಸಿದರು.…

ಯಕ್ಷ ಕಲಾರಂಗದ ಅಧ್ಯಕ್ಷರಾಗಿ ಉದ್ಯಮಿ ವಿಜಯ ಶೆಟ್ಟಿ ಪುನರಾಯ್ಕೆ

ಕಾರ್ಕಳ,ಆ.11: ಕಲೆಗಾಗಿ ಕಲಾವಿದರ ಸೃಷ್ಟಿಸುವ ಕಲಾಸಂಸ್ಥೆ ಕಾರ್ಕಳದ ಯಕ್ಷ ಕಲಾರಂಗ ಇದರ ಹದಿನಾಲ್ಕನೇ ವಾರ್ಷಿಕ ಮಹಾಸಭೆ ಕಳೆದ ಶುಕ್ರವಾರ ಜರಗಿದ್ದು ಕಾರ್ಕಳದ ಉದ್ಯಮಿ, ಕಲಾಪೋಷಕ ವಿಜಯ ಶೆಟ್ಟಿ ಯವರು ಮುಂದಿನ ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಸಂಚಾಲರಾಗಿ ಪ್ರೊ.ಬಿ.ಪದ್ಮನಾಭ ಗೌಢ,…

ಅಜೆಕಾರು: ಸೆಂಟ್ರಿಂಗ್‌ ಕಾರ್ಮಿಕ ನಾಪತ್ತೆ

ಕಾರ್ಕಳ,ಆ.10: ಸೆಂಟ್ರಿಂಗ್‌ ಕೆಲಸ ಮಾಡುತ್ತಿದ್ದ ಮರ್ಣೆ ಗ್ರಾಮದ ಅಜೆಕಾರು ನಡಿಬೆಟ್ಟು ನಿವಾಸಿ ಮಂಜುನಾಥ(37) ಎಂಬವರು ಆ.9ರಂದು ಮನೆಯಿಂದ ಹೊರ ಹೋದವರು ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ಮಂಜುನಾಥ ತನ್ನ ಸಹೋದರ ವಿನಾಯಕ ಎಂಬವರ ಜೊತೆ ಸೆಂಟ್ರಿಂಗ್‌ ಕೆಲಸ ಮಾಡಿಕೊಂಡಿದ್ದರು. ಭಾನುವಾರ ಬೆಳಗ್ಗೆ…

ನಿಟ್ಟೆ: ವೃದ್ಧ ಬಾವಿಗೆ ಹಾರಿ ಆತ್ಮಹತ್ಯೆ

ಕಾರ್ಕಳ,ಆ.10: ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ವೃದ್ಧರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಟ್ಟೆ ನಿವಾಸಿ ಮೊಂಟ ಮೂಲ್ಯ(81ವ) ಅವರು ಮನೆಯಲ್ಲಿ ಭಾನುವಾರ (ಆ.9) ರಾತ್ರಿ ಎಂದಿನAತೆ ಊಟ ಮಾಡಿ ಮಲಗಿದ್ದವರು ಮರುದಿನ ಬೆಳಿಗ್ಗೆ ಮನೆಯಲ್ಲಿರಲಿಲ್ಲ. ಮನೆಯವರು ಅವರನ್ನು…

ಕಾರ್ಕಳ: ಅತ್ತೂರು ಬಸಿಲಿಕಾ ಸಮರ್ಪಣೆಯ ದಶಮಾನೋತ್ಸವದ ಸಂಭ್ರಮ

ಕಾರ್ಕಳ,ಆ.10: ನಾವು ನಮ್ಮ ಜೀವನದಲ್ಲಿ ಸಾಧ್ಯವಾದಷ್ಟು ಬಡವರ ಮತ್ತು ನಿರ್ಗತಿಕರ ಕಷ್ಟಕಾರ್ಪಣ್ಯಗಳನ್ನು ಅರಿತುಕೊಂಡು ಅವರ ಬಾಳಿನಲ್ಲಿ ಸಂತೋಷವನ್ನು ತರಲು ಕಾರಣವಾದಾಗ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಉಡುಪಿ ಧರ್ಮ ಪ್ರಾಂತ್ಯದ ಧರ್ಮಾದ್ಯಕ್ಷರಾದ ಅತಿ ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅಭಿಪ್ರಾಯಪಟ್ಟರು.…

ಕಾರ್ಕಳ: ಮಾಳದಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಕಾರ್ಕಳ,ಆ.10: ಕಾರ್ಕಳ ತಾಲೂಕಿನ ಮಾಳದಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾಳ ನಿವಾಸಿ ನವೀನ(42ವ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಅವರು ವಿಪರೀತ ಮದ್ಯಪಾನ ಮಾಡುತ್ತಿದ್ದು ಮನೆಯಲ್ಲಿ ಪ್ರತಿನಿತ್ಯ ಜಗಳವಾಗುತ್ತಿದ್ದ ಕಾರಣ ಅವರ ಪತ್ನಿ 2 ತಿಂಗಳ ಹಿಂದೆ ಮನೆ ಬಿಟ್ಟು…