ಬೆಂಗಳೂರು:ರಾಜ್ಯಾದ್ಯAತ ಈಗಾಗಲೇ ಮುಂಗಾರುಪೂರ್ವ ಮಳೆಯ ಅಬ್ಬರ ಜೋರಾಗಿದ್ದು,ಬೆಂಗಳೂರು ಸೇರಿದಂತೆ ಹಲವೆಡೆ ಪ್ರವಾಹದ ಪರಿಸ್ಥಿತಿ ಉದ್ಭವಿಸಿದೆ. ಜನರು ಈಗಾಗಲೇ ಮಳೆಯಿಂದ ಹೈರಾಣಾಗಿದ್ದು, ಇನ್ನೇನು ಸುಧಾರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಮುಂಗಾರು ಮಳೆ ರಾಜ್ಯಕ್ಕೆ ಎಂಟ್ರಿ ಕೊಡುವ ದಿನಗಳು ಹತ್ತಿರವಾಗಿದೆ. ರಾಜ್ಯಕ್ಕೆ ಮೇ 27 ಅಥವಾ 28ರಂದೇ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸರ್ವೇಸಾಮಾನ್ಯವಾಗಿ ಜೂನ್ 1ರ ಬಳಿಕವೇ ಕೇರಳಕ್ಕೆ ಮುಂಗಾರು ಪ್ರವೇಶವಾಗುತ್ತಿದ್ದು, ಜೂನ್ 7ರ ಬಳಿಕ ರಾಜ್ಯವನ್ನು ಪ್ರವೇಶಿಸುತ್ತಿತ್ತು. ಆದರೆ ಈ ವರ್ಷ ಮೇ 26 ಅಥವಾ 27ರಂದೇ ಮುಂಗಾರು ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದ್ದು ಈ ಬಾರಿ 10 ದಿನಗಳ ಮುಂಚಿತವಾಗಿ ಮುಂಗಾರು ಆರಂಭಗೊಳ್ಳುವ ಸಾಧ್ಯತೆಯಿದೆ. 2009 ರ ಬಳಿಕ ಕೇರಳಕ್ಕೆ ಮುಂಗಾರು ಇಷ್ಟು ಬೇಗ ಅಪ್ಪಳಿಸುತ್ತಿರುವುದು ಇದೇ ಮೊದಲು. ಆದ್ದರಿಂದ ರಾಜ್ಯದಲ್ಲಿ ಜೂನ್ 1ರ ಬಳಿಕ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ನೈಋತ್ಯ ಮಾನ್ಸೂನ್ ಮಾರುತಗಳು ಜೂನ್ 1 ರ ವೇಳೆಗೆ ಕೇರಳಕ್ಕೆ ಆಗಮಿಸುತ್ತವೆ. ಇದಾದ ನಂತರ, ಜುಲೈ 8 ರ ವೇಳೆಗೆ, ಅದು ಇಡೀ ದೇಶವನ್ನು ಆವರಿಸುತ್ತದೆ. ಇದು ಸೆಪ್ಟೆಂಬರ್ 17 ರ ಸುಮಾರಿಗೆ ವಾಯುವ್ಯ ಭಾರತದಿಂದ ಹಿಮ್ಮೆಟ್ಟಲು ಪ್ರಾರಂಭಿಸುತ್ತದೆ ಮತ್ತು ಅಕ್ಟೋಬರ್ 15 ರ ಹೊತ್ತಿಗೆ ಸಂಪೂರ್ಣವಾಗಿ ಹಿಮ್ಮೆಟ್ಟುತ್ತದೆ.