ಸುಳ್ಯ: ಪೆಟ್ರೋಲ್ ಬಂಕ್ ನಲ್ಲಿ ಡೀಸೆಲ್ ತುಂಬಿಸಿ ಹಣ ನೀಡದೆ ಪರಾರಿ

ಸುಳ್ಯ : ಕಡಬದ ಹಳೆ ಸ್ಟೇಷನ್ ಬಳಿಯ ಪೆಟ್ರೋಲ್ ಬಂಕ್ ನಲ್ಲಿ ಬುಧವಾರ ಬೆಳ್ಳoಬೆಳಗ್ಗೆ ವ್ಯಕ್ತಿಯೊಬ್ಬ ತನ್ನ ಥಾರ್ ಜೀಪಿಗೆ ಫುಲ್ ಟ್ಯಾಂಕ್ ಡೀಸೆಲ್ ತುಂಬಿಸಿ ಹಣ ನೀಡದೆ ಸಿನಿಮಿಯ ಶೈಲಿಯಲ್ಲಿ ಪರಾರಿಯಾದ ಘಟನೆ ನಡೆದಿದೆ. ಇತ್ತೀಚಿನ ದಿನಗಳಲ್ಲಿ ವಂಚನೆಗಳು ಹೆಚ್ಚುತ್ತಿದ್ದು,…

ಉಡುಪಿ : ಸ್ಥಳೀಯ ಸಂಸ್ಥೆಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸಿ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ

ಉಡುಪಿ: ನಗರ ಹಾಗೂ ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಅಗತ್ಯ ಇರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅವರು ಸೂಚನೆ ನೀಡಿದರು. ಅವರು ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ…

ಉಡುಪಿ: ವೈದ್ಯ ವಿದ್ಯಾರ್ಥಿಗೆ ಸೀಟು ಕೊಡಿಸುವುದಾಗಿ ವಂಚನೆ – ಮೂವರ ಬಂಧನ,ರೂ.9,56,000 ಮೌಲ್ಯದ ಸೊತ್ತುಗಳು ವಶಕ್ಕೆ

ಉಡುಪಿ : ವೈದ್ಯ ವಿದ್ಯಾರ್ಥಿಗೆ ಯುಕೆಯಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸುಮನ್ ಎಸ್ (24), ಸುಹಾನ್ ಖಾನ್(22) ಮತ್ತು ಮೊಹಮ್ಮದ್ ಮಹಾಝ್ ಬಂಧಿತರು. ವೈದ್ಯ ವಿದ್ಯಾರ್ಥಿ ಹೆಚ್ಚಿನ M.PH ವಿಧ್ಯಾಭ್ಯಾಸನ್ನು ಯುಕೆ…

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ರಿಲೀಫ್: ಲೋಕಾಯುಕ್ತ ವರದಿಯಲ್ಲಿ ಕ್ಲೀನ್‌ಚಿಟ್!

ಬೆಂಗಳೂರು: ಮುಡಾ ಹಗರಣದ ಲೋಕಾಯುಕ್ತ ತನಿಖೆ ಪೂರ್ಣಗೊಂಡಿದ್ದು, ವರದಿಯೂ ಸಿದ್ಧವಾಗಿದೆ. ಲೋಕಾಯುಕ್ತ ವರದಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾವರ್ತಿಗೆ ಕ್ಲೀನ್‌ಚಿಟ್ ನೀಡಿರುವುದು ತಿಳಿದುಬಂದಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರ ಎಲ್ಲೂ ಕಂಡು ಬಂದಿಲ್ಲ. ಡಿನೋಟಿಫೈ, ಭೂಪರಿವರ್ತನೆ ಮಾಡುವಾಗ…

ದೇವಸ್ಥಾನಗಳ ವ್ಯವಸ್ಥಾಪನ‌ ಸಮಿತಿ ಅವಧಿ ಮುಕ್ತಾಯ ಹಿನ್ನೆಲೆ: ಆಡಳಿತಾಧಿಕಾರಿಗಳ ನೇಮಕ

ಕಾರ್ಕಳ: ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನ ಹಾಗೂ ಬೈಲೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ 3 ವರ್ಷಗಳ ಅವಧಿಯು ಜ. 11ಕ್ಕೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯು ಆಡಳಿತಾಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದೆ. ಬೈಲೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಗ್ರಾಮ ಆಡಳಿತಾಧಿಕಾರಿ ಹಾಗೂ…

ಈ ಬಾರಿಯ ಬೇಸಿಗೆಯಲ್ಲಿ ಯಾವುದೇ ಲೋಡ್ ಶೆಡ್ಡಿಂಗ್ ಇರುವುದಿಲ್ಲ : ಇಂಧನ ಸಚಿವ ಕೆಜೆ ಜಾರ್ಜ್ ಸ್ಪಷ್ಟನೆ

ಬಾಗಲಕೋಟೆ: ಪ್ರತೀವರ್ಷ ಬೇಸಿಗೆ ಆರಂಭವಾದರೆ ಸಾಕು ಪವರ್ ಕಟ್ ಸರ್ವೇಸಾಮಾನ್ಯ. ಇನ್ನೇನು ಕೆಲವೇ ದಿನಗಳಲ್ಲಿ ಬಿರುಬೇಸಗೆ ಆರಂಭವಾಗಲಿದೆ. ಒಂದೆಡೆ ವಿಪರೀತ ಸುಡುವ ಬಿಸಿಲು ಇನ್ನೊಂದೆಡೆ ಲೋಡ್ ಶೆಡ್ಡಿಂಗ್ ನಿಂದ ಜನ ಸೆಕೆಯಿಂದ ಬಳಲಿ ಬೆಂಡಾಗುತ್ತಾರೆ. ಆದರೆ ಈ ಬಾರಿ ರಾಜ್ಯದ ಜನತೆಗೆ…

ಜ್ಞಾನಸುಧಾದಲ್ಲಿ ಕಂಪೆನಿ ಸೆಕ್ರೇಟರಿ ಪ್ರವೇಶ ಪರೀಕ್ಷಾ ಸಾಧಕರಿಗೆ ಸನ್ಮಾನ

ಕಾರ್ಕಳ : ಇನ್ಸಿ÷್ಟಟ್ಯೂಟ್ ಆಫ್ ಕಂಪೆನಿ ಸೆಕ್ರೇಟರೀಸ್ ಇನ್ ಇಂಡಿಯಾ ಅವರು ನಡೆಸಿದ ಸಿ.ಎಸ್.ಇ.ಇ.ಟಿ(ಕಂಪೆನಿ ಸೆಕ್ರೇಟರಿ ಎಕ್ಸಿಕ್ಯೂಟಿವ್ ಎಂಟ್ರೆನ್ಸ್ ಟೆಸ್ಟ್)ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊAದಿಗೆ ತೇರ್ಗಡೆ ಹೊಂದಿದ್ದು, ಸಾಧಕ 28 ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ…

ಇಂದು ಬಜಗೋಳಿಯ ದಿಡಿಂಬಿರಿ ಅಯ್ಯಪ್ಪ ಮಂದಿರದಲ್ಲಿ ಶ್ರೀ ರಾಮ ತಾರಕ ಜಪಯಜ್ಞ

ಕಾರ್ಕಳ: ಅಯೋಧ್ಯಾ ಶ್ರೀ ರಾಮ ದೇವರ ಮಹೋತ್ಸವದ ಅಂಗವಾಗಿ, ಅಯೋಧ್ಯೆಗೆ ನೆಲ್ಲಿಕಾರು ಶಿಲೆ ಸಮರ್ಪಿತವಾದ ಎರಡನೇ ವರ್ಷದ ಸವಿನೆನಪಿಗಾಗಿ ಬಜಗೋಳಿಯ ದಿಡಿಂಬಿರಿ ಅಯ್ಯಪ್ಪ ಮಂದಿರದಲ್ಲಿ ಇಂದು (ಜ 22) ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಶ್ರೀರಾಮ ತಾರಕ ಜಪಯಜ್ಞ ನಡೆಯಲಿದೆ. ಸಮಸ್ತ ಹಿಂದೂ ಬಾಂಧವರು…

ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ: ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಣ್ಣನ್ ಮಣಿ, ಪೊಲೀಸರಿಂದ ಗುಂಡಿನ ದಾಳಿ

ಮಂಗಳೂರು: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಆರೋಪಿ ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಪೊಲೀಸರು ಗುಂಡು ಹಾರಿಸಿದ ಘಟನೆ ಮಂಗಳವಾರ ನಡೆದಿದೆ. ತಲಪಾಡಿಯ ಕಾಟುಂಗರ ಗುಡ್ಡೆ ಬಳಿ ಪೊಲೀಸರು ಸ್ಥಳ ಮಹಜರು ನಡೆಸಲು ಆರೋಪಿಯನ್ನು ಕರೆತಂದಿದ್ದ…

ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ; 21ನೇ ಆರೋಪಿ ಅತೀಕ್ ಬಂಧನ

ಬೆಂಗಳೂರು: ಹಿಂದೂ ಕಾರ್ಯಕರ್ತ ಹಾಗೂ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ಪಿಎಫ್‌ಐ ಸದಸ್ಯನಾಗಿದ್ದ ಅತೀಕ್ ಅಹ್ಮದ್ ಸೇರಿದಂತೆ ಪ್ರಮುಖ ಸಂಚುಕೋರನನ್ನು ಬಂಧಿಸಲಾಗಿದೆ. ಇದೀಗ ಪ್ರವೀಣ್ ನೆಟ್ಟಾರು ಕೊಲೆ ಕೇಸ್‌ಗೆ ಸಂಬAಧಿಸಿದAತೆ 21ನೇ ಆರೋಪಿ ಅತೀಕ್…