Share this news

ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಭಾರತದ ಮತ್ತೊಬ್ಬ ಶತ್ರುವಿನ ಆಟ ಮುಗಿದಿದೆ. ಜೈಶ್-ಎ-ಮೊಹಮ್ಮದ್‌ನ ಹಿರಿಯ ಕಮಾಂಡರ್ ಮೌಲಾನಾ ಅಬ್ದುಲ್ ಅಜೀಜ್ (Maulana Abdul Aziz)ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಈ ನಿಗೂಢ ಸಾವು ಗುಪ್ತಚರ ವಲಯಗಳಿಂದ ಭಯೋತ್ಪಾದಕ ಜಾಲದವರೆಗೆ ಸಂಚಲನ ಮೂಡಿಸಿದೆ.

 ಈ ಕುಖ್ಯಾತ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಭಾರತದ ವಿರುದ್ಧ ವಿಷ ಕಾರಿದ್ದ. ಆದರೆ ಅವನು ಹೇಗೆ ಸತ್ತನು ಎಂಬುದು ಮಾತ್ರ ಇನ್ನೂ ನಿಗೂಢವಾಗಿಯೇ ಇದೆ. ವರದಿಗಳ ಪ್ರಕಾರ, ಜೈಶ್‌ನ ಪ್ರಧಾನ ಕಚೇರಿಯೂ ಇರುವ ಪಾಕಿಸ್ತಾನದ ಬಹವಾಲ್‌ಪುರದಲ್ಲಿ ಅವನು ಶವವಾಗಿ ಪತ್ತೆಯಾಗಿದ್ದಾನೆ. ಕಳೆದ ತಿಂಗಳು ಜೈಶ್ ರ್ಯಾಲಿಯಲ್ಲಿ ಭಾರತದ ವಿರುದ್ಧ ವಿಷ ಕಾರಿದ್ದ, ಭಾರತವೂ ಯುಎಸ್ಎಸ್ಆರ್ ನಂತೆಯೇ ಸ್ಥಿತಿಯನ್ನು ಅನುಭವಿಸುತ್ತದೆ ಎಂದು ವೇದಿಕೆಯಿಂದಲೇ ಬಹಿರಂಗವಾಗಿ ಬೆದರಿಕೆ ಹಾಕಿದ್ದ. ಜೈಶ್ ಮತ್ತು ಪಾಕಿಸ್ತಾನ ಸರ್ಕಾರ ಈ ಸಾವಿನ ಬಗ್ಗೆ ಮೌನ ವಹಿಸಿವೆ. ಜೈಶ್ ಜೊತೆ ಸಂಬಂಧ ಹೊಂದಿರುವ ಸಾಮಾಜಿಕ ಮಾಧ್ಯಮ ಖಾತೆಗಳು ಅವನ ಸಾವು ಮತ್ತು ಅಂತ್ಯಕ್ರಿಯೆಯನ್ನು ದೃಢಪಡಿಸಿವೆ.

ಅಬ್ದುಲ್ ಅಜೀಜ್ ಜೈಶ್-ಎ-ಮೊಹಮ್ಮದ್‌ನ ಪಂಜಾಬ್ ಪ್ರಾಂತ್ಯದಲ್ಲಿ ಮತ್ತು ವಿಶೇಷವಾಗಿ ಬಹಾವಲ್ಪುರ್, ರಾವಲ್ಪಿಂಡಿಯಂತಹ ಪ್ರದೇಶಗಳಲ್ಲಿ ಭಾರತದ ವಿರುದ್ಧ ಯುವಕರನ್ನು ಮೂಲಭೂತವಾದಕ್ಕೆ ಪ್ರಚೋದಿಸುತ್ತಿದ್ದ.

 

 

 

 

Leave a Reply

Your email address will not be published. Required fields are marked *