Category: ಸ್ಥಳೀಯ ಸುದ್ದಿಗಳು

ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಅನ್ನನಾಳದ ರಂಧ್ರದ ತೊಂದರೆಗೆ ನವೀನ ಎಂಡೋಸ್ಕೋಪಿಕ್  ಚಿಕಿತ್ಸೆ

ಮಣಿಪಾಲ : ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು, ಅನ್ನನಾಳದ ರಂಧ್ರಕ್ಕೆ ಎoಡೊಸ್ಕೋಪಿಕ್ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ನಿರ್ವಹಿಸಿದೆ. ಇದು ದಕ್ಷಿಣ ಭಾರತದ ವೈದ್ಯಕೀಯ ಅಭ್ಯಾಸದಲ್ಲಿ ಒಂದು ಮೈಲಿಗಲ್ಲು. ಇತ್ತೀಚೆಗೆ, ವಯಸ್ಸಾದ ರೋಗಿಯೊಬ್ಬರು ಅನ್ನನಾಳದ ರಂಧ್ರದ ಗಂಭೀರ ಸ್ಥಿತಿಯೊಂದಿಗೆ ವೈದ್ಯಕೀಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗಕ್ಕೆ ದಾಖಲಿಸಲಾಗಿದ್ದರು.…

ಉಡುಪಿ : ಕತ್ತು ಸೀಳಿ ಸ್ನೇಹಿತನ ಬರ್ಬರ ಹತ್ಯೆ : ಕೊಲೆಗೈದು ಪೊಲೀಸರಿಗೆ ತಾನೇ ಕರೆಮಾಡಿ ಶರಣಾದ ಆರೋಪಿ

ಉಡುಪಿ : ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೋರ್ವ ತನ್ನ ಸ್ನೇಹಿತನನ್ನೇ ಕತ್ತು ಸೀಳಿ ಕೊಲೆಗೈದ ಘಟನೆ ಉಡುಪಿ ಹಳೆ ಕೆಎಸ್ಸಾರ್ಟಿಸಿ ನಿಲ್ದಾಣದ ಬಳಿಯ ಕೃಷ್ಣ ಕೃಪಾ ಬಿಲ್ಡಿಂಗ್ ನ ನೆಲ ಅಂತಸ್ತಿನ ಕೊಠಡಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಕೊರಂಗ್ರಪಾಡಿಯ ಪ್ರಶಾಂತ್ ಶೆಟ್ಟಿ(32) ಕೊಲೆಯಾದ…

ಕಾರ್ಕಳ ಬಂಡೀಮಠದ ಶ್ರೀದೇವಿ ಫರ್ನೀಚರ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಭರ್ಜರಿ ಕೊಡುಗೆ: ಗೃಹೋಪಯೋಗಿ ವಸ್ತುಗಳ ಖರೀದಿಗೆ ಭಾರೀ ಡಿಸ್ಕೌಂಟ್, ಆಕರ್ಷಕ ಕೊಡುಗೆಗಳ ಆಫರ್

ಕಾರ್ಕಳ : ಕಾರ್ಕಳದ ತಾಲೂಕು ಕಚೇರಿ ಬಳಿ ಇರುವ ಶ್ರೀದೇವಿ ಫರ್ನಿಚರ್ಸ್ ನಲ್ಲಿ ನವರಾತ್ರಿ ಹಾಗೂ ದೀಪಾವಳಿ ಹಬ್ಬಕ್ಕೆ ಗ್ರಾಹಕರಿಗೆ ವಿಶೇಷ ಕೊಡುಗೆಗಳು ಲಭ್ಯವಿದ್ದು ಗೃಹೋಪಯೋಗಿ ವಸ್ತುಗಳ ಮೇಲೆ ದರ ಕಡಿತದೊಂದಿಗೆ ಆಕರ್ಷಕ ಕೊಡುಗೆಗಳು ಲಭ್ಯವಿವೆ. ಗ್ಯಾಸ್ ಸ್ಟವ್, ಗ್ರೈಂಡರ್, ಡೈನಿಂಗ್…

ಅಜೆಕಾರು:ಕಾಯಿಲೆಯಿಂದ ಮೃತಪಟ್ಟ ಯುವಕನ ಸಾವಿನ ಹಿಂದೆ ಅನುಮಾನದ ಹುತ್ತ! ಮಗನ ಸಾವಿನ ಕುರಿತು ಪೋಷಕರ ದೂರು

ಕಾರ್ಕಳ: ಕಾಯಿಲೆಯಿಂದ ಬಳಲುತ್ತಿದ್ದ ಅಜೆಕಾರಿನ ದೆಪ್ಪುತ್ತೆ ನಿವಾಸಿ ಬಾಲಕೃಷ್ಣ ಪೂಜಾರಿಯವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸಾರ್ಜ್ ಆಗಿ ಮನೆಗೆ ಬಂದ ದಿನವೇ ತಡರಾತ್ರಿ ಏಕಾಎಕಿ ಮೃತಪಟ್ಟ ಪ್ರಕರಣ ಇದೀಗ ತಿರುವು ಪಡೆದುಕೊಂಡಿದ್ದು ಅವರ ಸಾವಿನ ಸುತ್ತ ಸಾರ್ವಜನಿಕ ವಲಯದಲ್ಲಿ…

ದಕ್ಷಿಣ ಭಾರತ ಮಟ್ಟದ ಸೌತ್ ಝೋನ್ ಜೂನಿಯರ್ ಅಥ್ಲೆಟಿಕ್ಸ್: ಜ್ಞಾನಸುಧಾದ ವಿದ್ಯಾರ್ಥಿ ಚಿರಾಗ್ ಗೆ ಚಿನ್ನ ಮತ್ತು ಕಂಚಿನ ಪದಕ

ಮಣಿಪಾಲ: ಆಂದ್ರಪ್ರದೇಶದ ಗುಂಟೂರಿನಲ್ಲಿ 16.10.2024ರಿಂದ 19.10.2024ರವರೆಗೆ ನಡೆದ 35ನೇ ಸೌತ್ ಝೋನ್(ದಕ್ಷಿಣ ಭಾರತ ಮಟ್ಟ) ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ 2024ರಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜು, ವಿದ್ಯಾ ನಗರದ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿ ಚಿರಾಗ್…

ಕಾರ್ಕಳದಲ್ಲಿ ಲಕ್ಷ್ಮೀ ಸಿಲ್ಕ್ ನೂತನ ಬೃಹತ್ ಜವಳಿ ಮಳಿಗೆ ಉದ್ಘಾಟನೆ: ಯಾವುದೇ ಒಬ್ಭ ವ್ಯಕ್ತಿಯ ಯಶಸ್ಸಿನ ಹಿಂದೆ ಅತ್ಯಂತ ಕಷ್ಟದ ಬದುಕಿರುತ್ತದೆ: ಡಾ.ಸುಧಾಕರ ಶೆಟ್ಟಿ

ಕಾರ್ಕಳ: ಯಾವುದೇ ಒಂದು ಉದ್ಯಮ ಅಥವಾ ಉದ್ಯಮಿ ತನ್ನ ವ್ಯವಹಾರದಲ್ಲಿ ಯಶಸ್ಸು ಕಾಣಬೇಕಾದರೆ ಜೀವನದಲ್ಲಿ ಅತ್ಯಂತ ಕಷ್ಟದ ಹಾಗೂ ಸವಾಲಿನ ದಿನಗಳನ್ನು ಎದುರಿಸಬೇಕಾಗುತ್ತದೆ.ಸವಾಲುಗಳನ್ನು ಮೆಟ್ಟಿ ಒಂದು ಸಂಸ್ಥೆ ಕಟ್ಟಿದಾಗ ಅದರಿಂದ ಸಿಗುವ ಆನಂದ ಸಾರ್ಥಕತೆಯ ಭಾವವನ್ನು ಮೂಡಿಸುತ್ತದೆ ಎಂದು ಕಾರ್ಕಳ ಜ್ಞಾನಸುಧಾ…

ಹೆಬ್ರಿ: ಶಾಲೆಯಿಂದ ಮನೆಗೊಂದು ಪತ್ರಿಕೆ “ಅಮೃತವಾಣಿ’ ಅನಾವರಣ ಸಮಾರಂಭ

ಹೆಬ್ರಿ: ಪತ್ರಿಕೆ ವಿದ್ಯಾರ್ಥಿಗಳ ಓದುವಿಕೆ ಮತ್ತು ಬರೆಯುವಿಕೆಯ ಹವ್ಯಾಸವನ್ನು ಹೆಚ್ಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಕಥೆ ಕವನ ಬರೆಯುವಂತ ಹವ್ಯಾಸಗಳು ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ಅಮೃತ ಭಾರತಿ ಸಂಸ್ಥೆಯು ಅಮೃತವಾಣಿ ಶಾಲೆಯಿಂದ ಮನೆಗೊಂದು ಪತ್ರಿಕೆ12 ವರ್ಷಗಳಿಂದ ಪ್ರಕಟಗೊಳ್ಳುತ್ತಿರುವುದು ಅತ್ಯಂತ ಸಂತೋಷ ತಂದಿದೆ .…

ಕುಕ್ಕುಂದೂರು: ಕಾರು-ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರರಿಬ್ಬರಿಗೆ ಗಾಯ

ಕಾರ್ಕಳ: ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಹಾರ್ಜೆಡ್ಡು ಕ್ರಾಸ್ ಬಳಿ ಭಾನುವಾರ ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಲ್ಕಿಯ ಪ್ರತೀಕ್ ಅವರು ಸ್ನೇಹಿತ ಕಿರಣ್ ಜೊತೆಗೆ ತಮ್ಮ ಬೈಕಿನಲ್ಲಿ ಕಾರ್ಕಳಕ್ಕೆ ಹೋಗುತ್ತಿದ್ದಾಗ…

ಯಕ್ಷಗಾನ ಕಲಾವಿದ ಜಯರಾಮ ಆಚಾರ್ಯ ನಿಧನಕ್ಕೆ ಶಾಸಕ ಸುನಿಲ್ ಕುಮಾರ್ ಸಂತಾಪ

ಕಾರ್ಕಳ: ತೆಂಕುತಿಟ್ಟಿನ ಹಾಸ್ಯ ದಿಗ್ಗಜ ಹಿರಿಯ ಯಕ್ಷಗಾನ ಕಲಾವಿದ ಬಂಟ್ವಾಳ ಶ್ರೀ ಜಯರಾಮ ಆಚಾರ್ಯ ಅವರು ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದು ಅವರ ನಿಧನಕ್ಕೆ ಶಾಸಕ, ಮಾಜಿ ಸಚಿವರಾದ ವಿ.ಸುನಿಲ್ ಕುಮಾರ್ ಸಂತಾಪ ಸೂಚಿಸಿದ್ದಾರೆ. ಐವತ್ತು ವರ್ಷಗಳ ಸುದೀರ್ಘ ಯಕ್ಷಗಾನದ ತಿರುಗಾಟ…

ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ವಿಧಿವಶ

ಪುತ್ತೂರು: ಹನುಮಗಿರಿ ಮೇಳದ ಪ್ರಧಾನ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಅವರು ಹೃದಯಾಘಾತದಿಂದ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಬೆಂಗಳೂರಿನಲ್ಲಿ ನಡೆಯಬೇಕಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿನ್ನೆ (ಅಕ್ಟೋಬರ್ 20) ತೆರಳಿದ್ದ ಬಂಟ್ವಾಳ ಜಯರಾಮ ಆಚಾರ್ಯ ಅವರು ಇಂದು ಮುಂಜಾನೆ ಹೃದಯಾ…